ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ : ಡಾ. ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಅಕ್ಷರ ಫೌಂಡೇಷನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಸೆಪ್ಟೆಂಬರ್ 19 ರಂದು ನ್ಯಾಷನಲ್ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಫೌಂಡೇಶನ್‌ನ ಮುಖ್ಯಸ್ಥರಾದ ಶರತ್ ಮರಿಯಪ್ಪ ಮಾತನಾಡಿ, ಉದ್ಯೋಗಕ್ಕಾಗಿ ವಿವಿಧ ಪ್ರದೇಶಗಳಿಗೆ ಅಲೆಯುವ ನಿರುದ್ಯೋಗಿ ಯುವಕ-ಯುವತಿಯರಿಗೆ ಒಂದೇ ಸೂರಿನಡಿ ಉದ್ಯೋಗ ಒದಗಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಲೆನಾಡು ಮೇಘಾ ಜಾಬ್ ಥಾನ್ 2026 ಹೆಸರಿನಲ್ಲಿ ನಡೆಯುವ ಈ ಉದ್ಯೋಗ ಮೇಳಕ್ಕೆ 100ಕ್ಕೂ ಹೆಚ್ಚು ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇನ್ನೂ ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಒಟ್ಟಾರೆಯಾಗಿ ಇಲ್ಲಿ 3000ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಇದಕ್ಕೆ ದೊಡ್ಡ ಮಟ್ಟದ ತಯಾರಿ ನಡೆಸುವ ಉದ್ದೇಶದಿಂದ ಈಗಾಗಲೇ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಮುಂಚಿತ ತಯಾರಿಯಿಂದ ಉದ್ಯೋಗಾಕಾಂಕ್ಷಿಗಳಿಗೂ ಮಾಹಿತಿ ತಲುಪಲಿ ಎನ್ನುವುದೇ ಇದರ ಪ್ರಮುಖ ಉದ್ದೇಶ, ಎಂದರು.
ಬೆಳಿಗ್ಗೆ 9:30 ರಿಂದ ಸಂಜೆ 5:00 ಗಂಟೆಯವರೆಗೆ ನಡೆಯುವ ಈ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು. ಈ ಮೇಳದಲ್ಲಿ 8ನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಭಾಗವಹಿಸಬಹುದು. 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಮೇಳಕ್ಕೆ ಬರುವಾಗ ತಮ್ಮ ರೆಸ್ಯೂಮ್ ಹಾಗೂ ಮೂಲ ಅಂಕಪಟ್ಟಿಗಳ ಕನಿಷ್ಠ 10 ಜೆರಾಕ್ಸ್ ಪ್ರತಿಗಳನ್ನು ಹಾಗೂ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ ತರಬೇಕು, ಈ ಉದ್ಯೋಗ ಮೇಳಕ್ಕೆ ಯಾವುದೇ ಶುಲ್ಕವಿರುವುದಿಲ್ಲ ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಒಬ್ಬ ಯುವಕನಿಗೆ ಉದ್ಯೋಗ ಸಿಕ್ಕರೆ ಒಂದು ಕುಟುಂಬದ ಬದುಕು ಬದಲಾಗುತ್ತದೆ ಸಾವಿರ ಯುವಕರಿಗೆ ಉದ್ಯೋಗ ಸಿಕ್ಕರೆ ಒಂದು ಜಿಲ್ಲೆಯ ಭವಿಷ್ಯವೇ ಬದಲಾಗುತ್ತದೆ ಎಂಬ ನಂಬಿಕೆ ನಮ್ಮ ಫೌಂಡೇಷನ್‌ದ್ದಾಗಿದೆ. ಆದ್ದರಿಂದ ನಿರುದ್ಯೋಗಿಗಳು ಈ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂದು ಕೋರಿದರು. ಹೆಚ್ಚಿನ ಮಾಹಿತಿಗಾಗಿ 96206 27697, 9380556464, 95358 93447 ಈ ನಂಬರ್ ಗಳಿಗೆ ಫೋನ್ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು.
