ಶಿವಮೊಗ್ಗ ಲಯನ್​ ಸಫಾರಿಗೆ ಫಾಟ್ನಾದಿಂದ ಬರಲಿವೆ 8 ತೋಳ, 4 ಘರಿಯಾಲ್ ಮೊಸಳೆ!

ಹಂಚಿಕೊಳ್ಳಿ
WhatsApp Facebook X Telegram
Tyavarekoppa Safari tyavarekoppa Safari Lion and Tiger Safari Tyavarekoppa Tiger-Lion Safari to Exchange Animals with Zoos tyavarekoppa tiger and lion safari
Tyavarekoppa Safari tyavarekoppa Safari tyavarekoppa tiger and lion safari

lion safari shimoga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಪ್ರಾಣಿಗಳ ವಿನಿಮಯ ಯೋಜನೆಯ ಅಡಿಯಲ್ಲಿ ಎರಡು ಗಂಡು ಕಾಟಿಗಳನ್ನು (ಕಾಡುಕೋಣ) ಬಿಹಾರದ ಪಾಟ್ನಾ ಮೃಗಾಲಯಕ್ಕೆ ಗುರುವಾರದಂದು ಯಶಸ್ವಿಯಾಗಿ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಪ್ರಾಣಿಗಳಿಗೆ ಪ್ರತಿಯಾಗಿ ತೋಳ, ಮೊಸಳೆಗಳನ್ನು ಲಯನ್ ಸಫಾರಿಗೆ ತರಲಾಗುತ್ತಿದೆ.

ಲಭ್ಯವಾದ ಮಾಹಿತಿ ಪ್ರಕಾರ, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕಾಟಿ ಸಫಾರಿಯನ್ನು ಆರಂಭಿಸಿದ ಹೆಗ್ಗಳಿಕೆ ಶಿವಮೊಗ್ಗ ಮೃಗಾಲಯಕ್ಕಿದೆ. ಇಲ್ಲಿನ ಕಾಡುಕೋಣಗಳಿಗೆ ದೇಶದ ವಿವಿಧ ಮೃಗಾಲಯಗಳಿಂದ ಬೇಡಿಕೆ ಬರುತ್ತಿದೆಯಂತೆ. ಈ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪಾಟ್ನಾ ಮೃಗಾಲಯಕ್ಕೆ ಕಳುಹಿಸಿಕೊಟ್ಟಿರುವ ಎರಡು ಗಂಡು ಕಾಟಿಗಳಿಗೆ ಪ್ರತಿಯಾಗಿ, ಆಗಸ್ಟ್ 20 ರಂದು ಶಿವಮೊಗ್ಗ ಮೃಗಾಲಯಕ್ಕೆ ಹೊಸ ಪ್ರಾಣಿಗಳು ಆಗಮಿಸಲಿವೆ. ಪಾಟ್ನಾದಿಂದ ಒಟ್ಟು 8 ತೋಳಗಳು ಹಾಗೂ 4 ಘರಿಯಾಲ್ ಜಾತಿಗೆ ಸೇರಿದ ಅಪರೂಪದ ಮೊಸಳೆಗಳನ್ನು ತರಲಾಗುತ್ತಿದೆ.

ತೋಳಗಳ ಪೈಕಿ 3 ಗಂಡು ಮತ್ತು 5 ಹೆಣ್ಣು ತೋಳಗಳಿದ್ದರೆ, ಮೊಸಳೆಗಳಲ್ಲಿ 2 ಗಂಡು ಹಾಗೂ 2 ಹೆಣ್ಣು ಮೊಸಳೆಗಳು ಸೇರಿವೆ. ಹೊಸ ಪ್ರಾಣಿಗಳ ಆಗಮನದಿಂದ, ಲಯನ್​ ಸಫಾರಿಗೆ ಬರುವ ವೀಕ್ಷಕರಿಗೆ ಹೊಸ ಆಕರ್ಷಣೆ ಸಿಗಲಿದೆ ಅಂತಾ ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor