80ನೇ ಸ್ವಾತಂತ್ರ್ಯ ದಿನಾಚರಣೆಗೆ ಬಿಎಸ್‌ಎನ್‌ಎಲ್ ಬಂಪರ್ ಕೊಡುಗೆ: ಕೇವಲ 1 ರೂಪಾಯಿಗೆ ಸಿಗಲಿದೆ ಧಮಾಕಾ ಆಫರ್!

ಹಂಚಿಕೊಳ್ಳಿ
WhatsApp Facebook X Telegram
BSNL 80th Independence Day Offer
BSNL 80th Independence Day Offer

ಶಿವಮೊಗ್ಗ: ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಶುಭ ಸಂದರ್ಭದಲ್ಲಿ, ಪ್ರಮುಖ ಸಾರ್ವಜನಿಕ ವಲಯದ ದೂರಸಂಪರ್ಕ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಪ್ರಕಟಿಸಿದೆ. ಎಂತಹುದೇ ಕಠಿಣ ವಾತಾವರಣ ಅಥವಾ ಭೌಗೋಳಿಕ ಸವಾಲುಗಳಿದ್ದರೂ ಸಾರ್ವಜನಿಕರಿಗೆ ನಿರಂತರ, ಕೈಗೆಟುಕುವ ಬೆಲೆಯಲ್ಲಿ ಸುರಕ್ಷಿತ ಡಿಜಿಟಲ್ ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದೆ. 

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ಆತ್ಮನಿರ್ಭರ ಭಾರತ ಹಾಗೂ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಬಳಸಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಲಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್ ಪ್ರಕಟಿಸಿರುವ ಪ್ರಮುಖ ಆಫರ್‌ಗಳ ವಿವರ ಹೀಗಿದೆ: 

  1. ಫ್ರೀಡಂ 2.0 ಆಫರ್ (ರೂ. 1 ಆಫರ್): ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರು ಕೇವಲ 1 ರ ಆರಂಭಿಕ ಬೆಲೆಯಲ್ಲಿ ನೆಟ್‌ವರ್ಕ್ ಸೇವೆ ಪಡೆಯಬಹುದು. ಈ ಆಫರ್‌ನಲ್ಲಿ ದಿನಕ್ಕೆ 1 GB ಡೇಟಾ, ದಿನಕ್ಕೆ 100 SMS ಹಾಗೂ ಅನಿಯಮಿತ ಕರೆ ಸೌಲಭ್ಯವಿದ್ದು, 24 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.
  2. ಫೈಬರ್ ಫ್ರೀಡಂ ಪ್ಲಾನ್ (ಬ್ರಾಡ್‌ಬ್ಯಾಂಡ್): ತಿಂಗಳಿಗೆ 1,111 ರ ವಿಶೇಷ ಆರಂಭಿಕ ಬೆಲೆಯಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಸಿಗಲಿದೆ. ಇದರೊಂದಿಗೆ ಪ್ರೀಮಿಯಂ ಡಿಜಿಟಲ್ ಮನರಂಜನಾ (OTT) ಸೇವೆಗಳು ಉಚಿತವಾಗಿ ಸಿಗಲಿವೆ.
  3. ಉಚಿತ ಲೈವ್ ಟಿವಿ & ಚಲನಚಿತ್ರಗಳು: BSNL Selfcare ಆ್ಯಪ್ ಮೂಲಕ ಟ್ಯಾಂಗೋ ಚಾಲಿತ BSNL Entertainment T ಬಳಸಿಕೊಂಡು ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಉಚಿತವಾಗಿ ಲೈವ್ ಟಿವಿ ಹಾಗೂ ಸಿನಿಮಾಗಳನ್ನು ವೀಕ್ಷಿಸಬಹುದು.
  4. ಸ್ಯಾಟಲೈಟ್ ಫೋನ್ ಸೇವೆ : ಸಾಮಾನ್ಯ ಮೊಬೈಲ್ ನೆಟ್‌ವರ್ಕ್ ಸಿಗದ ಅತ್ಯಂತ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲೂ ಕರೆ ಮಾಡಲು ಜಾಗತಿಕ ಉಪಗ್ರಹ ದೂರವಾಣಿ ಸೇವೆಯನ್ನು ಲಭ್ಯಗೊಳಿಸಲಾಗಿದೆ.

ಈ ಕುರಿತು ಬಿಎಸ್‌ಎನ್‌ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ (GM) ಬಿನಯ್ ಕುಮಾರ್ ಸಿನ್ಹಾ ಹಾಗೂ ಡಿಜಿಎಂ ಎಸ್.ಬಿ. ಕೂಪ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor