ಶಿವಮೊಗ್ಗ : ವಿಕಲ ಚೇತನರಿಗೆ ವಾಹನ ವಿತರಣೆ, ವಿವಿಧ ಸಂಘಗಳಿಗೆ ಅಗರಬತ್ತಿ ಯಂತ್ರ? ಏನಿದು ಕಾರ್ಯಕ್ರಮ, ಯಾವಾಗ?

ಹಂಚಿಕೊಳ್ಳಿ
WhatsApp Facebook X Telegram
Shivamogga Rural Plans Grand Event
Shivamogga Rural Plans Grand Event

Shivamogga ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಬಿಜೆಪಿ ವತಿಯಿಂದ ಸಂಸದ ಬಿ. ವೈ. ರಾಘವೇಂದ್ರ ಅವರ ಹುಟ್ಟುಹಬ್ಬವನ್ನು ಆಗಸ್ಟ್ 16 ರಂದು ಬಂಜಾರ ಸಮುದಾಯ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಕೆ. ಬಿ. ಅಶೋಕ್ ನಾಯ್ಕ್ ತಿಳಿಸಿದ್ದಾರೆ. 

ಅಧ್ಯಕ್ಷ … ಅಧ್ಯಕ್ಷ.. ಅಧ್ಯಕ್ಷ… ಯಾರಾಗ್ತಾರೆ ಶಿವಮೊಗ್ಗ ಕಾಂಗ್ರೆಸ್ ಅಧ್ಯಕ್ಷ!

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಸಂಸದರ ಜನ್ಮದಿನವನ್ನು ನಗರ ಪ್ರದೇಶದಲ್ಲೇ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಗ್ರಾಮಾಂತರ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಸಂಸದ ಬಿ. ವೈ. ರಾಘವೇಂದ್ರ ಅವರು ಗ್ರಾಮಾಂತರ ಭಾಗದಲ್ಲಿ ಅಭೂತಪೂರ್ವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಏತ ನೀರಾವರಿ ಯೋಜನೆಗೆ ₹400 ಕೋಟಿ ಅನುದಾನ ಒದಗಿಸಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗ ಏರ್‌ಪೋರ್ಟ್, ಜಲ್ ಜೀವನ್ ಮಿಷನ್, ರಾಷ್ಟ್ರೀಯ ಹೆದ್ದಾರಿ ಯೋಜನೆ ಸೇರಿದಂತೆ ಹಲವಾರು ಪ್ರಮುಖ ಕಾಮಗಾರಿಗಳು ಇವರ ಅವಧಿಯಲ್ಲಿ ಪೂರ್ಣಗೊಂಡಿವೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ಸಂಸದರು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹರಿಕಾರರಾಗಿ ಕೆಲಸ ಮಾಡಿದ್ದಾರೆ, ಎಂದು ಅವರ ಸಾಧನೆಗಳನ್ನು ಸ್ಮರಿಸಿದರು. 

ದಿನವಿಡೀ ಸಾಲು ಸಾಲು ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳುಸಂಸದರ ಜನ್ಮದಿನಾಚರಣೆಯ ಪೂರ್ಣ ರೂಪುರೇಷೆಯನ್ನು ವಿವರಿಸಿದ ಮಾಜಿ ಶಾಸಕರು, ಭಾನುವಾರ ಬೆಳಿಗ್ಗೆ ಅನವೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಿರಿ ಮಾವುದಮ್ಮ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ನೆರವೇರಲಿದೆ. ತದನಂತರ ಹೊಳೆಹೊನ್ನೂರಿನ ಕೈಮರದಲ್ಲಿರುವ ಶಿವ ದೇವಸ್ಥಾನ, ಹೊಳೆಹೊನ್ನೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕುಂಸಿ ಭಾಗದ ಶ್ರೀ ಸಿದ್ದೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. 

ಪೂಜಾ ಕೈಂಕರ್ಯಗಳ ನಂತರ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಮಧ್ಯಾಹ್ನ 3:30 ಕ್ಕೆ ಬಂಜಾರ ಸಮುದಾಯ ಭವನಕ್ಕೆ ತಲುಪಲಿದ್ದಾರೆ, ಎಂದು ತಿಳಿಸಿದರು.ಬಂಜಾರ ಸಮುದಾಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ಶಿವಮೊಗ್ಗ ಗ್ರಾಮಾಂತರ ಭಾಗದ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಕೃತಕ ಕಾಲು ಹಾಗೂ ಶ್ರವಣ ಯಂತ್ರಗಳನ್ನು ವಿತರಿಸಲಾಗುವುದು. ಸಿಎಸ್‌ಆರ್ ನಿಧಿಯಡಿ 18 ಸ್ವಸಹಾಯ ಸಂಘಗಳಿಗೆ ಅಗರಬತ್ತಿ ತಯಾರಿಕಾ ಯಂತ್ರಗಳನ್ನು ನೀಡಲಾಗುತ್ತಿದ್ದು, ಪಕ್ಷಕ್ಕಾಗಿ ಶ್ರಮಿಸಿದ 21 ಹಿರಿಯ ಬಿಜೆಪಿ ಕಾರ್ಯಕರ್ತರಿಗೆ ಸಂಸದರ ಮೂಲಕ ವಿಶೇಷ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor