ರಾಶಿ ಭವಿಷ್ಯ ಮತ್ತು ಪಂಚಾಂಗ: ದ್ವಾದಶ ರಾಶಿಗಳ ಸಂಪೂರ್ಣ ವಿವರ

ಹಂಚಿಕೊಳ್ಳಿ
WhatsApp Facebook X Telegram
Daily horoscope
Daily horoscope

Todays Horoscope / ಮಲೆನಾಡು ಟುಡೆ ಸುದ್ದಿ / ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೈನಂದಿನ ಗ್ರಹಗತಿಗಳ ಆಧಾರದ ಮೇಲೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಗಮನಿಸುವುದಾದರೆ ಅದರ ವಿವರ ಹೀಗಿದೆ.

ಮೇಷ ರಾಶಿ : ಮನೆಯ ಪರಿಸ್ಥಿತಿ ಸಾಮಾನ್ಯವಾಗಿರಲಿದ್ದು, ಅಗತ್ಯತೆಗಳನ್ನು ಒಟ್ಟುಗೂಡಿಸುವ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆ.

ವೃಷಭ ರಾಶಿ : ಸಾಮಾನ್ಯದಿನವಾಗಿರುತ್ತದೆ. ತಾಳ್ಮೆ ಕಾಯ್ದುಕೊಳ್ಳುವುದರ ಜೊತೆಗೆ ಹೊಸ ಅವಕಾಶಗಳ ಹುಡುಕಾಟದಲ್ಲಿ ನಿರತರಾಗಿರಲಿದ್ದಾರೆ.

ಮಿಥುನ ರಾಶಿ : ಆಕರ್ಷಕ ಮಾತು ಹಾಗೂ ಉತ್ತಮ ವರ್ತನೆಯಿಂದ ಎಲ್ಲರ ಮೇಲೂ ಪ್ರಭಾವ ಭೀರಲಿದ್ದಾರೆ.

ಕರ್ಕಾಟಕ ರಾಶಿ : ಆಪ್ತರಿಂದ ಸಂಪೂರ್ಣ ಸಹಕಾರ ಹಾಗೂ ಬೆಂಬಲ ದೊರೆಯಲಿದ್ದು, ವಿರೋಧಿಗಳು ಮೌನವಾಗಿರಲಿದ್ದಾರೆ.

ಸಿಂಹ ರಾಶಿ : ಆತುರಪಡಬಾರದು ಮತ್ತು ಹೂಡಿಕೆಯ ಪ್ರಸ್ತಾಪಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾ ರಾಶಿ : ಪ್ರಮುಖ ಚಟುವಟಿಕೆಗಳಲ್ಲಿ ವೇಗ ಕಂಡುಬರಲಿದ್ದು, ಹೊಸ ಅವಕಾಶಗಳನ್ನು ತಮ್ಮ ಪರವಾಗಿ ಉಳಿಸಿಕೊಳ್ಳುವಲ್ಲಿ ಸಫಲರಾಗಲಿದ್ದಾರೆ.

ತುಲಾ ರಾಶಿ : ಆಡಳಿತಾತ್ಮಕ ವಿಚಾರಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಲಿದ್ದು, ಹಿರಿಯ ಅಧಿಕಾರಿಗಳೊಂದಿಗಿನ ಭೇಟಿ ಮತ್ತು ಸಂಪರ್ಕ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ : ವ್ಯಾಪಾರ ಮತ್ತು ವಹಿವಾಟು ಸಂಬಂಧಿ ಚರ್ಚೆಗಳಲ್ಲಿ ಅತ್ಯಂತ ಸಕ್ರಿಯರಾಗಿರಲಿದ್ದು, ಹುದ್ದೆ ಮತ್ತು ಪ್ರತಿಷ್ಠೆಗೆ ಸಂಬಂಧಿಸಿದ ವಿಚಾರಗಳು ಮತ್ತಷ್ಟು ಸುಧಾರಿಸಲಿವೆ.

ಧನು ರಾಶಿ : ಕುಟುಂಬದಲ್ಲಿ ಎಲ್ಲ ಸದಸ್ಯರ ಸಂಪೂರ್ಣ ಸಹಕಾರ ಇರಲಿದ್ದು, ವಂಚಕರು ಹಾಗೂ ಮೋಸಗಾರರಿಂದ ಅಂತರ ಕಾಯ್ದುಕೊಳ್ಳುವುದು ಒಳಿತು.

ಮಕರ ರಾಶಿ : ಲಾಭದ ಪ್ರಮಾಣ ಏರುಮುಖವಾಗಿರಲಿದ್ದು, ಹೊಸ ಜನರೊಂದಿಗೆ ಒಡನಾಟ ಮತ್ತು ಸ್ನೇಹ ಬೆಳೆಸಲಿದ್ದಾರೆ.

ಕುಂಭ ರಾಶಿ : ಕಾರ್ಯಕ್ಷೇತ್ರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದಂತೆ ಎಚ್ಚರವಹಿಸಬೇಕಾಗುತ್ತದೆ.

ಮೀನ ರಾಶಿ : ಸ್ನೇಹಿತರೊಂದಿಗೆ ಸೇರಿ ತಮ್ಮ ಕಾರ್ಯ ಪ್ರಯತ್ನಗಳನ್ನು ಹೆಚ್ಚಿಸಲಿದ್ದು, ಶುಭ ಸುದ್ದಿ ಲಭಿಸುವ ಸಾಧ್ಯತೆಗಳಿವೆ

ಇಂದಿನ ಪಂಚಾಂಗದ ವಿವರ

ವಿಕ್ರಮ ಸಂವತ್ಸರ 2083 ಸಿದ್ದಾರ್ಥಿ ಹಾಗೂ ಶಕ ಸಂವತ್ಸರ 1940 ಪಟಾಭವ ನಡೆಯುತ್ತಿದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯು ರಾತ್ರಿ 11 ಗಂಟೆ 06 ನಿಮಿಷದವರೆಗೆ ಇರಲಿದೆ. ಪುಷ್ಯ ನಕ್ಷತ್ರವು ಬೆಳಿಗ್ಗೆ 08 ಗಂಟೆಯವರೆಗೆ ಇರಲಿದ್ದು, ಆ ಬಳಿಕ ಆಶ್ಲೇಷಾ ನಕ್ಷತ್ರ ಶುರುವಾಗಲಿದೆ.

ಅಶುಭ ಕಾಲ ಅಥವಾ ಮುಹೂರ್ತಗಳ ಬಗ್ಗೆ ಗಮನ ಹರಿಸುವುದಾದರೆ, ರಾಹುಕಾಲ ಮಧ್ಯಾಹ್ನ 12 ಗಂಟೆ 26 ನಿಮಿಷದಿಂದ 02 ಗಂಟೆ 05 ನಿಮಿಷದವರೆಗೆ ಇರಲಿದೆ. ಯಮಗಂಡ ಕಾಲ ಬೆಳಿಗ್ಗೆ 07 ಗಂಟೆ 28 ನಿಮಿಷದಿಂದ 09 ಗಂಟೆ 07 ನಿಮಿಷದವರೆಗೆ ಇರಲಿದೆ. ಅದೇ ರೀತಿ ಗುಳಿಕ ಕಾಲ ಬೆಳಿಗ್ಗೆ 10 ಗಂಟೆ 46 ನಿಮಿಷದಿಂದ ಮಧ್ಯಾಹ್ನ 12 ಗಂಟೆ 26 ನಿಮಿಷದವರೆಗೆ ಇರಲಿದೆ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor