ನಿಮಗಿದು ಗೊತ್ತಾ! ಇಂಟರ್‌ನೆಟ್‌ನ್ನು ನಮಗಿಂತ ಜಾಸ್ತಿ ಎಐ, ರೋಬೋಟ್‌ ಬಳಸುತ್ತಿವೆ!

ಹಂಚಿಕೊಳ್ಳಿ
WhatsApp Facebook X Telegram
ಮಾಹಿತಿಗಾಗಿ ಸಾಂದರ್ಭಿಕ ಎಐ ಚಿತ್ರ

AI Bots / ಮಲೆನಾಡು ಟುಡೆ ಸುದ್ದಿ / ನವದೆಹಲಿ / ಇಂಟರ್‌ನೆಟ್ ಲೋಕವನ್ನು ಇದುವರೆಗೆ ಕೇವಲ ಮನುಷ್ಯರ ಜಗತ್ತು ಎಂದೇ ಭಾವಿಸಲಾಗಿತ್ತು. ಪ್ರತಿನಿತ್ಯ ಸಾವಿರಾರು ವೆಬ್‌ಸೈಟ್‌ಗಳನ್ನು ತೆರೆಯುವುದು, ಸುದ್ದಿ ಓದುವುದು, ಮಾಹಿತಿಗಾಗಿ ಹುಡುಕಾಟ ನಡೆಸುವುದು ಹಾಗೂ ಆನ್‌ಲೈನ್​ಲ್ಲಿ ಖರೀದಿ ಮಾಡುವುದು ಹೀಗೆ ನಿತ್ಯ ಇಂಟರ್​ನೆಟ್​ ನಾನಾ ಕಾರಣಕ್ಕೆ ಯೂಸ್​ ಆಗುತ್ತಿತ್ತು. ಆದರೆ ಈಗೊಂದು ಸುದ್ದಿ ಬಂದಿದೆ. ಆ ಸುದ್ದಿ ಅಚ್ಚರಿ ಮೂಡಿಸುತ್ತಿದೆ.

ಆಜ್​ತಕ್​ ಮಾಡಿರುವ ವರದಿ ಪ್ರಕಾರ, ಪ್ರಸ್ತುತ ಇಂಟರ್‌ನೆಟ್ ಜಗತ್ತಿನಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಟ್ರಾಫಿಕ್ ಪ್ರಮಾಣದಲ್ಲಿ ಮನುಷ್ಯರ ರೇಟಿಂಗ್​ ಕುಸಿಯುತ್ತಿದೆ ಮತ್ತು ಯಂತ್ರಗಳ ಟ್ರಾಫಿಕ್​ ಏರಿಕೆಯಾಗುತ್ತಿದೆಯಂತೆ. ‘ಕ್ಲೌಡ್‌ಫ್ಲೇರ್’ (Cloudflare) ಸಂಸ್ಥೆ ನೀಡಿರುವ ಮಾಹಿತಿ ಆಧರಿಸಿ, ವರದಿ ಮಾಡಲಾಗಿದ್ದು, ಅದರ ಪ್ರಕಾರ, 2026 ರ ಜೂನ್ ತಿಂಗಳಲ್ಲಿ ಇಂಟರ್‌ನೆಟ್‌ನ ಶೇಕಡಾ 50 ಕ್ಕಿಂತಲೂ ಹೆಚ್ಚಿನ ಟ್ರಾಫಿಕ್ ಮನುಷ್ಯರ ಬದಲಾಗಿ ಯಂತ್ರಗಳಿಂದಲೇ ಸೃಷ್ಟಿಯಾಗಿದೆ.

ಈ ಟ್ರಾಫಿಕ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸಿಸ್ಟಮ್‌ಗಳು, ಕ್ರಾಲರ್‌ಗಳು ಮತ್ತು ಇತರ ಸ್ವಯಂಚಾಲಿತ ಸಿಸ್ಟಮ್‌ಗಳು ಪ್ರಮುಖವಾಗಿ ಸೇರಿಕೊಂಡಿವೆ. ಇಂಟರ್‌ನೆಟ್ ಈಗ ಅತ್ಯಂತ ವೇಗವಾಗಿ ಹೊಸ ಮಜಲಿಗೆ ಪ್ರವೇಶಿಸುತ್ತಿದ್ದು, ಮನುಷ್ಯರ ಬದಲಾಗಿ ಎಐ ಏಜೆಂಟ್‌ಗಳೇ ನೇರವಾಗಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆಹಾಕುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಅಂತಾ ಸಂಸ್ಥೆ ಹೇಳಿದೆ

ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕ್ಲೌಡ್‌ಫ್ಲೇರ್ ಸಂಸ್ಥೆಯು 2027 ರ ವೇಳೆಗೆ ಬಾಟ್ ಟ್ರಾಫಿಕ್ ಪ್ರಮಾಣವು ಮನುಷ್ಯರ ಟ್ರಾಫಿಕ್ ಅನ್ನು ಮೀರಿಸಲಿದೆ ಎಂದು ಅಂದಾಜಿಸಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಹೇಳಿಕೆ ನೀಡಿದ್ದ ಸಂಸ್ಥೆಯ ಸಿಇಒ ಮ್ಯಾಥ್ಯೂ ಪ್ರಿನ್ಸ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ತ್ವರಿತ ಬೆಳವಣಿಗೆಯ ಕಾರಣದಿಂದಾಗಿ 2027 ರ ಹೊತ್ತಿಗೆ ಬಾಟ್ ಟ್ರಾಫಿಕ್ ಪ್ರಮಾಣವು ಮನುಷ್ಯರ ಟ್ರಾಫಿಕ್‌ಗಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ನಿರೀಕ್ಷೆಗಿಂತ ಮೊದಲೇ ಈ ಬದಲಾವಣೆ ಗೋಚರಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor