Shivamogga Cyber Scam ಶಿವಮೊಗ್ಗ : ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಲಾಭಾಂಶ ಕೊಡುತ್ತೇವೆ ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ನಡೆದಿದೆ.
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣ: ಜಮೀನು ಪರಿಶೀಲನೆ
Shivamogga Cyber Scam ಘಟನೆ ವಿವರ
ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾಗ ದೂರುದಾರ ಮಹಿಳೆಗೆ Almondz ಎಂಬ ಟ್ರೇಡಿಂಗ್ ಕಂಪನಿಯ ಜಾಹೀರಾತೊಂದು ಕಾಣಿಸಿದೆ. ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ಅದರಲ್ಲಿ ತಿಳಿಸಲಾಗಿತ್ತು. ಮಹಿಳೆಗೆ ಟ್ರೇಡಿಂಗ್ನಲ್ಲಿ ಆಸಕ್ತಿ ಇದ್ದದ್ದರಿಂದ ಜಾಹೀರಾತಿನಲ್ಲಿರುವ ವಾಟ್ಸಾಪ್ ಗ್ರೂಪ್ ಲಿಂಕ್ ಕ್ಲಿಕ್ ಮಾಡಿದ್ದು, ಗ್ರೂಪ್ ಒಂದು ಓಪನ್ ಆಗಿದೆ. ತಕ್ಷಣವೇ ವ್ಯಕ್ತಿಯೊಬ್ಬರು ಮಹಿಳೆಯನ್ನು ಸಂಪರ್ಕಿಸಿ, ತಮಗೆ 3%, 4% ಹಾಗೂ 5% ಲಾಭಾಂಶ ಸಿಗುತ್ತದೆ ಎಂದು ನಂಬಿಸಿ Almondz ಆಪ್ ಲಿಂಕ್ ಕಳುಹಿಸಿದ್ದಾರೆ
ಆಪ್ ಇನ್ಸ್ಟಾಲ್ ಮಾಡಿಕೊಂಡು ಪಾನ್ ಕಾರ್ಡ್ ನೀಡಿ ರಿಜಿಸ್ಟರ್ ಆದ ಮಹಿಳೆಯು, ಆಪ್ನಲ್ಲಿ ನೀಡಿದ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು 5,96,000 ಹಣವನ್ನು ಹೂಡಿಕೆ ಮಾಡಿದ್ದಾರೆ. ಆಪ್ನಲ್ಲಿ 30,00,000 ಪ್ರಾಫಿಟ್ ತೋರಿಸಿದ್ದರಿಂದ ಮಹಿಳೆಯು ಹಣ ವಿತ್ಡ್ರಾ ಮಾಡಲು ಯತ್ನಿಸಿದಾಗ, ವಂಚಕರು ಮತ್ತೆ 10,00,000 ವರ್ಗಾಯಿಸುವಂತೆ ಕೇಳಿದ್ದಾರೆ. ಲಾಭದ ಹಣದಲ್ಲೇ ಕಡಿತಗೊಳಿಸಿ ಉಳಿದ ಹಣ ಕೊಡಿ ಎಂದು ಮಹಿಳೆ ಕೇಳಿದಾಗ, ಒಂದು ತಿಂಗಳು ಕಾಯುವಂತೆ ತಿಳಿಸಿದ್ದಾರೆ.
ನಂತರ ಮಹಿಳೆಯ ಮೊಬೈಲ್ನಲ್ಲಿ ಆಪ್ ಹಾಗೂ ವಾಟ್ಸಾಪ್ ಗ್ರೂಪ್ ಎರಡೂ ಕಣ್ಮರೆಯಾಗಿದ್ದು, ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
