Mercury Enters Pushya Nakshatra / ಮಲೆನಾಡು ಟುಡೆ ಸುದ್ದಿ / ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಹಾಗೂ ಬುದ್ಧಿಶಕ್ತಿ, ವ್ಯಾಪಾರ, ತರ್ಕ, ಸಂವಹನ ಮತ್ತು ಅರ್ಥಶಾಸ್ತ್ರದ ಕಾರಕನಾದ ಬುಧ ಗ್ರಹವು ಇದೇ ಆಗಸ್ಟ್ 8 ರಂದು ನಕ್ಷತ್ರ ಬದಲಾವಣೆ ಮಾಡಿದೆ. ಒಟ್ಟು 27 ನಕ್ಷತ್ರಗಳ ಪೈಕಿ ನಕ್ಷತ್ರಗಳ ರಾಜ ಎಂದೇ ಕರೆಯಲ್ಪಡುವ ಅತ್ಯಂತ ಮಂಗಳಕರ ಹಾಗೂ ಕಲ್ಯಾಣಕಾರಿ ಪುಷ್ಯ ನಕ್ಷತ್ರವನ್ನು ಬುಧನು ಪ್ರವೇಶಿಸಿದ್ದಾನೆ.
ಜ್ಞಾನ ಹಾಗೂ ವ್ಯಾಪಾರದ ಕಾರಕನಾದ ಬುಧನು ಪುಷ್ಯ ನಕ್ಷತ್ರಕ್ಕೆ ಕಾಲಿಟ್ಟಿರುವುದು ಬೌದ್ಧಿಕ ಹಾಗೂ ಹಣಕಾಸಿನ ಚಟುವಟಿಕೆಗಳಿಗೆ ಅತ್ಯಂತ ಶುಭಫಲಗಳನ್ನು ನೀಡಲಿದೆ ಎಂದೆ ಜ್ಯೋತಿಷ್ಯ ತಜ್ಞರು ಅರ್ಥೈಸಿದ್ದಾರೆ. ಈ ನಕ್ಷತ್ರ ಬದಲಾವಣೆ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಮೇಲೂ ಕಂಡುಬಂದರೂ, ಪ್ರಮುಖವಾಗಿ 2 ರಾಶಿಗಳ ಜಾತಕದವರಿಗೆ ಅದೃಷ್ಟವನ್ನು ಬದಲಾಯಿಸುವ ಸನ್ನಿವೇಶ ತರಲಿದೆ
ಮುಖ್ಯವಾಗಿ ಮಿಥುನ ರಾಶಿಯ ಅಧಿಪತಿ ಸ್ವತಃ ಬುಧ ಗ್ರಹವೇ ಆಗಿರುವುದರಿಂದ, ಈ ನಕ್ಷತ್ರ ಬದಲಾವಣೆ ಈ ರಾಶಿಯವರಿಗೆ ಅತ್ಯಂತ ಶುಭದಾಯಕ. ಸರಿಯಾದ ನಿರ್ಧಾರಗಳಿಂದಾಗಿ ಧನಲಾಭ ಗಳಿಸಲು ಅತ್ಯುತ್ತಮ ಅವಕಾಶಒದಗಿಬರಲಿವೆ ಹಾಗೂ ಸಾಲದ ಬಾಕಿ ಹಣ ಮರಳಿ ಕೈಸೇರುವ ಯೋಗವಿದೆ. ಮಾರ್ಕೆಟಿಂಗ್, ಸಮೂಹ ಮಾಧ್ಯಮ, ಬರವಣಿಗೆ, ಮಾಹಿತಿ ತಂತ್ರಜ್ಞಾನ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ದೊಡ್ಡ ಒಪ್ಪಂದ ಅಥವಾ ಹೊಸ ಯೋಜನೆ ಲಭಿಸುವ ಸಾಧ್ಯತೆ ದಟ್ಟವಾಗಿವೆ. ಮಾತಿನ ಪ್ರಭಾವ ಹೆಚ್ಚಾಗಲಿದ್ದು, ಇತರರನ್ನು ಸುಲಭವಾಗಿ ಆಕರ್ಷಿಸುವ ಹಾಗೂ ತಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವ ಸಾಮರ್ಥ್ಯ ವೃದ್ಧಿಯಾಗಲಿದೆ.
ಸಿಂಹ ರಾಶಿಯ ಜಾತಕದವರ ಪಾಲಿಗೆ ಪುಷ್ಯ ನಕ್ಷತ್ರದಲ್ಲಿ ಬುಧನ ಪ್ರವೇಶ ಅಪಾರ ಗೌರವ ಹಾಗೂ ವೃತ್ತಿಯಲ್ಲಿ ಪ್ರಗತಿಯನ್ನು ತಂದುಕೊಡಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ, ಆರ್ಥಿಕ ಪ್ರೋತ್ಸಾಹಧನ ಅಥವಾ ಹೊಸ ಉದ್ಯೋಗದ ಅತ್ಯುತ್ತಮ ಪ್ರಸ್ತಾವನೆಗಳು ಒದಗಿಬರಲಿವೆ. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ವ್ಯಾಪಾರಸ್ಥರಿಗೆ ಹೊಸ ಪಾಲುದಾರರೊಂದಿಗೆ ಜಂಟಿಯಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಲಿದ್ದು, ಈ ಹಿಂದಿಗಿಂತಲೂ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆ ಇದೆ. ತಂದೆ ಹಾಗೂ ಹಿರಿಯ ಸಹೋದರರ ಸಂಪೂರ್ಣ ಬೆಂಬಲ ದೊರೆಯಲಿದ್ದು, ಇದರಿಂದಾಗಿ ಭವಿಷ್ಯದ ಯಾವುದೇ ಪ್ರಮುಖ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿದೆ.
