ಸುಲ್ತಾನ್ ಡೈಮಂಡ್ಸ್ ಶೋರೂಮ್‌ನಲ್ಲಿ ಪ್ರತಿಷ್ಠಿತ ವಜ್ರಾಭರಣ ಪ್ರದರ್ಶನ

ಹಂಚಿಕೊಳ್ಳಿ
WhatsApp Facebook X Telegram
Diamond Exhibition in Shivamogga
Diamond Exhibition in Shivamogga

Diamond Exhibition in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಸೀನಪ್ಪಶೆಟ್ಟಿ ವೃತ್ತದ ಸಮೀಪದಲ್ಲಿರುವ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಶೋರೂಮ್‌ನಲ್ಲಿ ದಕ್ಷಿಣ ಭಾರತದ ಅತಿ ಪ್ರತಿಷ್ಠಿತ ಹಾಗೂ ಬೃಹತ್ ವಜ್ರಾಭರಣಗಳ ಪ್ರದರ್ಶನವಾದ ‘ವಿಶ್ವವಜ್ರ’ ಶುಕ್ರವಾರದಿಂದ ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿದೆ.

ಈ ವಜ್ರಾಭರಣ ಪ್ರದರ್ಶನದಲ್ಲಿ ಬ್ರೈಡಲ್ (ಮದುವೆ) ಡೈಮಂಡ್ ಆಭರಣಗಳು, ಕಲಾತ್ಮಕವಾದ ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಡೈಮಂಡ್ ಆಭರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದರ ಜೊತೆಗೆ ತಾಳಿಮಣಿಯ (Tanmania) ಅಪರೂಪದ ಸಂಗ್ರಹ ಹಾಗೂ ಪ್ರತಿದಿನದ ಬಳಕೆಗೆ ಧರಿಸಲು ಸೂಕ್ತವಾಗಿರುವ ಹಗುರ ತೂಕದ ಹಾಗೂ ಕೈಗೆಟುಕುವ ಬೆಲೆಯ ಡೈಮಂಡ್ ಆಭರಣಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮೇಳದ ಅಂಗವಾಗಿ ಖರೀದಿಸುವ ಗ್ರಾಹಕರು ಡೈಮಂಡ್ ಆಭರಣಗಳ ಮೌಲ್ಯದ ಮೇಲೆ ಗರಿಷ್ಠ ಶೇಕಡ 20 ರಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಪ್ರದರ್ಶನ ಆಗಸ್ಟ್ 16ರವರೆಗೆ ನಡೆಯಲಿದೆ.

ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಜಯ ಟ್ರೇಡಿಂಗ್ ಕಂಪನಿಯ ಪ್ರತಿನಿಧಿ ರಮೇಶ್ವರಿ ಭಾಸ್ಕರ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮಿಗಳಾದ ಅಫ್ಸಾನಾ ಮನ್ಸೂರ್, ಆಸಿಮಾ ಪರ್ವೀನ್, ರೂಪಾ ಹಾಗೂ ವಕೀಲೆ ಕೆ.ಎಂ. ಶಮೀನಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಸಂಸ್ಥೆಯ ಕ್ಲಸ್ಟರ್ ಮ್ಯಾನೇಜರ್ ಪಿ.ವಿ. ಅಜಿತ್, ಶಿವಮೊಗ್ಗ ಬ್ರಾಂಚ್ ಮ್ಯಾನೇಜರ್ ಶಿಂಟೋ ಹಾಗೂ ಮ್ಯಾನೇಜರ್ ನಿರ್ಮಲ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor