Holehonnuru / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಬಾಲಕನೊಬ್ಬನ ಮೇಲೆ ದಾಳಿ ಮಾಡಿದ್ದ ಮುಸಿಯವನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಸಕ್ಸಸ್ ಕಂಡಿದೆ.
ಕಳೆದ ನಾಲ್ಕು ದಿನಗಳಿಂದ ಜನರಿಗೆ ಉಪಟಳ ನೀಡುತ್ತಿದ್ದ ಹುಚ್ಚು ಕೋತಿಯನ್ನು ನಿನ್ನೆ ದಿನ ಮಂಗಳವಾರ ಹಿಡಿದಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಒಂಟಿಯಾಗಿ ಓಡಾಡುತ್ತಿದ್ದ ಜನರ ಮೇಲೆ ಏಕಾಏಕಿ ಕೋತಿ ದಾಳಿಗೆ ಮುಂದಾಗು ತ್ತಿತ್ತು. ಇದರಿಂದ ಗ್ರಾಮಸ್ಥರು ಆತಂಕ ಗೊಂಡಿದ್ದರು.
ಹೀಗಾಗಿ ಅದನ್ನ ಹಿಡಿಲೇಬೇಕು ಅಂತಾ ನಿರ್ಧರಿಸಿದ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ. ಬನವಾಸಿಯಿಂದ ವೀರಯ್ಯ ಸಗಣಚಾರಿ ತಂಡವನ್ನು ಕರೆಯಿಸಿತ್ತು. ಕಾರ್ಯಾಚರಣೆ ಆರಂಭಿಸಿದ್ದ ತಂಡ ಕೋತಿ ಇರುವ ಸಮೀಪದ ಬೋನು ಇರಿಸಿ ಬೋನಿನೊಳಗೆ ಬ್ರೆಡ್ಡು, ಬಾಳೆಹಣ್ಣು, ಮುಸುಕಿನ ಜೋಳ ಹಾಗೂ ಕಡ್ಲೆಕಾಯಿ ಇಟ್ಟು ಸೆರೆಹಿಡಿಯಲು ಪ್ರಯತ್ನ ಒಡ್ತು
ಆದರೆ, ಮುಸಿಯಾ ಅದನ್ನು ತಿನ್ನಲು ಆಸೆ ಪಡಲೇ ಇಲ್ಲ. ಕೊನೆಗೆ ಮನೆ ಒಂದರ ಒಳಗಡೆ ಕೋತಿ ಹೋಗುವಂತೆ ಮಾಡಿ ಅದನ್ನು ಸೆರೆ ಹಿಡಿಯಲಾಯಿತು. ಇನ್ನೂ ಈ ಕಾರ್ಯಾಚರಣೆ ಬಳಿಕ ದೂರದ ದಟ್ಟ ಅರಣ್ಯದಲ್ಲಿ ಕೋತಿಯನ್ನು ಬಿಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಉಪ ವಲಯ ಅರಣ್ಯಧಿಕಾರಿ ಮನೋಹರ್, ಗಸ್ತು ಅರಣ್ಯ ಪಾಲಕ ಕೆ.ಹನುಮಂತಪ್ಪ, ಪಿಡಿಒಎನ್ .ದೊರೆ ಹಾಗೂ ಗ್ರಾಮಸ್ಥರು ಇದ್ದರು.
