Shivamogga Cyber Police ಶಿವಮೊಗ್ಗ: ಆನ್‌ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಶಿಕಾರಿಪುರದ ಯುವಕನಿಗೆ ಶಿವಮೊಗ್ಗ ಜಿಲ್ಲಾ ಸೈಬರ್ ಪೊಲೀಸರು ಬಿಗ್ ರಿಲೀಫ್ ನೀಡಿದ್ದಾರೆ. ವಂಚಕರ ಪಾಲಾಗಿದ್ದ ಬರೋಬ್ಬರಿ 5.23 ಲಕ್ಷ ರೂಪಾಯಿ ಹಣವನ್ನು ಯಶಸ್ವಿಯಾಗಿ ರಿಕವರಿ ಮಾಡಿ ಸಂತ್ರಸ್ತನಿಗೆ ಹಿಂತಿರುಗಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಶಿವಮೊಗ್ಗ: ಬಿಜೆಪಿಯ ಮುಖಂಡರು ಮನೆಗೆ ಬರ್ತಾರೆ, ವಿಚಾರಿಸಿ ಧನ್ಯವಾದ ಹೇಳಿ ಹೋಗ್ತಾರೆ: ಶಾಸಕ ಎಸ್. ಎನ್. ಚನ್ನಬಸಪ್ಪ
ಶಿಕಾರಿಪುರದ ನಿವಾಸಿ ರವಿ ಎಂಬುವರಿಗೆ ಕರೆ ಮಾಡಿದ್ದ ಅಪರಿಚಿತ ಸೈಬರ್ ಖದೀಮರು, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿಯೇ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಹಣ ಪಡಕೊಂಡು ಮೋಸ ಮಾಡಿದ್ದರು. ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಎಚ್ಚೆತ್ತ ರವಿ, ತಡಮಾಡದೇ ತಕ್ಷಣವೇ 1930 ಸೈಬರ್ ಹೆಲ್ಪ್‌ಲೈನ್‌ಗೆ ದೂರು ನೀಡಿ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಎಫ್‌ಐಆರ್ ದಾಖಲಿಸಿದ್ದರು.
ರವಿ ಅವರ ದೂರಿನ ಆಧಾರದ ಮೇಲೆ ತಕ್ಷಣ ಶಿಕಾರಿಪುರ ಗ್ರಾಮಾಂತರ ಠಾಣೆ ಹಾಗೂ ಶಿವಮೊಗ್ಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು, ಕಾರ್ಯಾಚರಣೆ ನಡೆಸಿ ವಂಚಕರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ 5.23 ಲಕ್ಷ ರೂಪಾಯಿಯನ್ನು ವಾಪಸ್ ಕೊಡಿಸಿದ್ದಾರೆ. ಕಳೆದುಕೊಂಡ ಹಣ ಕೈಸೇರುತ್ತಿದ್ದಂತೆ ಹರ್ಷವ್ಯಕ್ತಪಡಿಸಿದ ರವಿ, ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದ್ದು, ಸಾರ್ವಜನಿಕರು ಆನ್‌ಲೈನ್ ಹೂಡಿಕೆ ಆಮಿಷಗಳಿಗೆ ಬಲಿಯಾಗದಂತೆ ವಿನಂತಿಸಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
