Shivamogga Voter Drive ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್.ಐ.ಆರ್-2026ರ (SIR-2026) ಅಂಗವಾಗಿ ವಿಶೇಷ ಪ್ರಚಾರ ದಿನವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ಜುಲೈ 25 ಮತ್ತು 26 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 7:00 ಗಂಟೆಯವರೆಗೆ ಈ ವಿಶೇಷ ಶಿಬಿರ ನಡೆಯಲಿದೆ.
ಶಿವಮೊಗ್ಗ : ವ್ಯಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ 20 ದಿನಕ್ಕೆ 6 ಲಕ್ಷ ಹೋಯ್ತು, ಏನಿದು ಪ್ರಕರಣ
ಎಸ್.ಐ.ಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆಯಲು ಹಾಗೂ ನಮೂನೆ/ಫಾರಂಗಳನ್ನು ಭರ್ತಿ ಮಾಡಲು ಸಾರ್ವಜನಿಕರಿಗೆ ಸಹಾಯ ಹಸ್ತ ನೀಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು ಬಯಸುವ ನಾಗರಿಕರು ತಮ್ಮ ಇತ್ತೀಚಿನ ಫೋಟೋ ಹಾಗೂ ಸೂಕ್ತ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕಾಗಿ ಕೋರಲಾಗಿದೆ.
ಸಾರ್ವಜನಿಕರು ಭರ್ತಿ ಮಾಡಿದ ಫಾರಂಗಳನ್ನು ಸಂಬಂಧಪಟ್ಟ ಬಿ.ಎಲ್.ಓ ಅವರಿಗೆ ತಲುಪಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ. ಭರ್ತಿ ಮಾಡಿ ಸಹಿ ಮಾಡಿದ ಫಾರಂಗಳನ್ನು ಬಿ.ಎಲ್.ಓ ಅವರು ನಿಮ್ಮ ಮನೆಗೆ ಭೇಟಿ ನೀಡಿದಾಗ ನೀಡಬಹುದು ಅಥವಾ ವಿವಿಧ ರಾಜಕೀಯ ಪಕ್ಷಗಳ ಬಿ.ಎಲ್.ಎ ಅವರ ಮೂಲಕವೂ ಬಿ.ಎಲ್.ಓ ಅವರಿಗೆ ತಲುಪಿಸಲು ಅವಕಾಶ ಕಲ್ಪಿಸಲಾಗಿದೆ.
ಶಿವಮೊಗ್ಗ ಕ್ಷೇತ್ರದ ಅರ್ಹ ಸಾರ್ವಜನಿಕರು ಹಾಗೂ ಮತದಾರರು ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುವ ಈ ವಿಶೇಷ ಪ್ರಚಾರ ದಿನ’ದ ಸೌಲಭ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
