AGRICULTURE

ಅಡಿಕೆಗೆ ಔಷಧಿ ಹೊಡೆಯುತ್ತಿದ್ದೀರಾ! ಹಾಗಾದರೆ ಈ ಸುದ್ದಿ ಓದಿ! ಸಿಗಲಿದೆ ಸರ್ಕಾರಿ ಸಬ್ಸಿಡಿ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Arecanut Leaf Spot Disease / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಡಿಕೆಗೆ ಎಲೆ ಚುಕ್ಕಿ ರೋಗ ಹಿಡಿದಿದ್ದಿಯಾ! ನಿಯಂತ್ರಣಕ್ಕಾಗಿ ಔಷಧ ಸಿಂಪಡಿಸುತ್ತಿದ್ದೀರಾ ಹಾಗಾದರೆ ಈ ಸುದ್ದಿ ನಿಮಗಾಗಿ, ಈ ನಿಟ್ಟಿನಲ್ಲಿ . ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶಿಲೀಂಧ್ರನಾಶಕ ಖರೀದಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಅರ್ಹ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅದರ ವಿವರ ಹೀಗಿದೆ

ಶಿವಮೊಗ್ಗ ವಾರ್ತಾ ಇಲಾಖೆಯ ಮೂಲಕ ಈ ಬಗ್ಗೆ ಪ್ರಕಟಣೆಯನ್ನ ನೀಡಲಾಗಿದೆ. 2026-27 ನೇ ಸಾಲಿನ ‘ರಾಷ್ಟ್ರೀಯ ತೋಟಗಾರಿಕೆ ಮಿಷನ್’ ಯೋಜನೆಯಡಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕಾಗಿ ವಿವಿಧ ಶಿಲೀಂಧ್ರನಾಶಕ ಔಷಧಿಗಳನ್ನು ಖರೀದಿಸಿದ ಜಿಲ್ಲೆಯ ರೈತರಿಂದ ತೋಟಗಾರಿಕೆ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.

ಮಾರ್ಗಸೂಚಿಯನುಸಾರ, ರೈತರು 1 ಎಕರೆಗೆ ಕನಿಷ್ಠ ರೂ.2,000 ಮೌಲ್ಯದ ಶಿಲೀಂಧ್ರನಾಶಕವನ್ನು ಖರೀದಿಸಬಹುದಾಗಿದ್ದು, ಖರೀದಿ ವೆಚ್ಚಕ್ಕೆ ಶೇ. 30 ರಂತೆ ಪ್ರತಿ ಎಕರೆಗೆ ಗರಿಷ್ಠ ರೂ.600 ಸಹಾಯಧನ ಸಿಗಲಿದೆ.

ಪ್ರತಿಯೊಬ್ಬ ಫಲಾನುಭವಿಯು ಗರಿಷ್ಠ 5 ಎಕರೆವರೆಗೆ (ಕನಿಷ್ಠ ರೂ.10,000 ಮೌಲ್ಯದ ಶಿಲೀಂಧ್ರನಾಶಕ ಖರೀದಿ) ಶೇ. 30 ರಷ್ಟು ಅಂದರೆ ಗರಿಷ್ಠ ರೂ.3,000 ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಈ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು:

ಅಗತ್ಯವಿರುವ ದಾಖಲೆಗಳು

  1. ಪಹಣಿ, ಆಧಾರ್ ಕಾರ್ಡ್
  2. ಜಿಎಸ್ ಟಿ ಬಿಲ್ (ಖರೀದಿಸಿದ ಔಷಧಿಯ ಬಿಲ್)
  3. ಜಾತಿ ಪ್ರಮಾಣ ಪತ್ರ (ಎಸ್ ಸಿ/ ಎಸ್ ಟಿ ರೈತರಿಗೆ ಮಾತ್ರ)

ಹೆಚ್ಚಿನ ಮಾಹಿತಿಗಾಗಿ

ಶಿವಮೊಗ್ಗ -08182-279415/ 9980009438, ಭದ್ರಾವತಿ-08282-295029/9108252536, ಶಿಕಾರಿಪುರ-08187-223544/ 8310662972, ಸೊರಬ - 08184-295112 /9663634388, ಸಾಗರ-08183-295124/ 9900046121, ಹೊಸನಗರ – 08185-295364/ 9591695327, ತೀರ್ಥಹಳ್ಳಿ-08181-228151/ 9108280642 ಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. See less

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ