COURT LIVE

ಮಚ್ಚಿನಿಂದ ಮಂಡೆಗೆ ಹೊಡೆದು ಮಹಿಳೆಯ ಕೊಲೆ! 2020 ರ ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ ಮಹತ್ವದ ತೀರ್ಪು!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Life Imprisonment / ಮಲೆನಾಡು ಟುಡೆ ಸುದ್ದಿ / ಸೊರಬ / ಸೊರಬ ತಾಲೂಕಿನ ಸಮನವಳ್ಳಿ ಆನವಟ್ಟಿ ಗ್ರಾಮದಲ್ಲಿ ಜಾಗದ ವಿಚಾರವಾಗಿ ಜಗಳ ತೆಗೆದು ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಶಿವಮೊಗ್ಗ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿವಮೊಗ್ಗದ 5ನೇ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಆರ್. ಈ ತೀರ್ಪನ್ನು ನೀಡಿದ್ದು, ಜೀವಾವಧಿ ಶಿಕ್ಷೆಯ ಜೊತೆಜೊತೆಗೆ 50,000 ರೂಪಾಯಿಗಳ ದಂಡ ವಿಧಿಸಿದ್ದಾರೆ.

ಘಟನೆಯ ಹಿನ್ನೆಲೆ ಹೀಗಿದೆ

ದಿನಾಂಕ 25-08-2020 ರಂದು ನಡೆದಿದ್ದ ಘಟನೆ ಇದಾಗಿದೆ. ಸೊರಬ ತಾಲೂಕಿನ ಸಮನವಳ್ಳಿ ಆನವಟ್ಟಿ ಗ್ರಾಮದ ವಾಸಿ ರಾಜೇಶ್ವರಿ (35 ವರ್ಷ) ಎಂಬುವವರು ತಮ್ಮ ಕುಟುಂಬದೊಂದಿಗೆ ಮಾತನಾಡುತ್ತಾ ಮನೆಯ ಮುಂದೆ ಕುಳಿತಿದ್ದರು. ಈ ವೇಳೆ, ಅದೇ ಗ್ರಾಮದ ಮಂಜುನಾಥ (25 ವರ್ಷ) ಎಂಬಾತ ಅಲ್ಲಿಗೆ ಬಂದು ಜಾಗದ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ. ಅಲ್ಲದೆ ಕಂಪ್ಲೆಂಟ್ ಕೊಡುತ್ತೇನೆ ಎಂದಿದ್ದಕ್ಕೆ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ ಎಂಬುದು ಪ್ರಕರಣದ ಸಾರಾಂಶ

ಈ ಘಟನೆಗೆ ಸಂಬಂಧಿಸಿದಂತೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಕಲಂ 504 ಹಾಗೂ 302 ಐಪಿಸಿ ಅಡಿಯಲ್ಲಿ ಕೇಸ್ ಆಗಿತ್ತು. ಅಂದಿನ ತನಿಖಾಧಿಕಾರಿ ಸೊರಬ ವೃತ್ತದ ಸಿಪಿಐ ಆರ್.ಡಿ. ಮರುಳಸಿದ್ದಪ್ಪ ನ್ಯಾಯಾಲಯಕ್ಕೆ ಜಾರ್ಜ್​ಶೀಟ್ ಹಾಕಿದ್ದರು. ಶಿವಮೊಗ್ಗದ 5ನೇ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಲ್ಲಿವರೆಗೂ ವಿಚಾರಣೆ ನಡೆದಿತ್ತು. ಸರ್ಕಾರದ ಪರವಾಗಿ ಸರ್ಕಾರದ ಅಭಿಯೋಜಕರಾದ ಅಣ್ಣಪ್ಪ ನಾಯಕ ವಾದ ಮಾಡಿದ್ದರು. ಇದೀಗ ತೀರ್ಪು ಹೊರಬಿದ್ದಿದೆ..

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY