Kodachadri ಹೊಸನಗರ : ಪ್ರವಾಸಿಗನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಸಮೀಪ ಸಂಭವಿಸಿದೆ. ಬೆಂಗಳೂರು ಮೂಲದ 28 ವರ್ಷದ ಶ್ರೀಕಾಂತ್ ಮೃತ ದುರ್ದೈವಿ.
ತಮ್ಮ ಸ್ನೇಹಿತರೊಂದಿಗೆ ಶುಕ್ರವಾರವಷ್ಟೇ ಕೊಡಚಾದ್ರಿ ಗಿರಿಶಿಖರ ವೀಕ್ಷಿಸಲು ಬಂದಿದ್ದ ಶ್ರೀಕಾಂತ್, ಸಂಪೇಕಟ್ಟೆ ಸಮೀಪವಿರುವ ಕಟ್ಟಿನಹೊಳೆ ಗ್ರಾಮದ ಗೆಳೆಯನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹಠಾತ್ ಅಸ್ವಸ್ಥತೆ ಎದುರಾಗಿದ್ದು, ತೀವ್ರ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.
ಸದ್ಯ ಮೃತದೇಹವನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಕಾಯ್ದಿರಿಸಲಾಗಿದ್ದು, ಬೆಂಗಳೂರಿನಿಂದ ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಪ್ರಕ್ರಿಯೆಗಳು ಜರುಗಲಿವೆ. ಈ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
