STATE NEWS

ತಿರುಪತಿಯಲ್ಲಿ ಒಂದೇ ದಿನ ಸಂಗ್ರಹವಾಯ್ತು 96.98 ಕೋಟಿ ರೂ. ಹುಂಡಿ ಹಣ!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Tirupati Temple ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಸ್ಥಾನದಲ್ಲಿ ಕೇವಲ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ದೇಣಿಗೆ ಸಂಗ್ರಹವಾಗಿದೆ. ಹೌದು, ಕಳೆದ ಮಂಗಳವಾರ ಒಂದೇ ದಿನ ಕಾಣಿಕೆ ಹುಂಡಿಯಲ್ಲಿ 96.98 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಶಿವಮೊಗ್ಗ: ಜುಲೈ 20 ರಿಂದ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ

ಇದರಲ್ಲಿ 2,460 ಮಂದಿ ಅಧಿಕೃತವಾಗಿ, 2,354 ಜನರು ಆನ್‌ಲೈನ್‌ನಲ್ಲಿ ಮತ್ತು 106 ಭಕ್ತರು ಆಫ್‌ಲೈನ್‌ನಲ್ಲಿ ಕಾಣಿಕೆ ನೀಡಿದ್ದಾರೆ ಎಂದು ಟಿಟಿಡಿ (TTD) ಹೇಳಿದೆ. ಅವರಲ್ಲಿ ಇಬ್ಬರು ಭಕ್ತರು ತಲಾ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಅಂಕಿ-ಅಂಶಗಳ ಪ್ರಕಾರ, 1,246 ಭಕ್ತರು 10-15 ಲಕ್ಷ ರೂ. ಹಾಗೂ 1,212 ಮಂದಿ 1-10 ಲಕ್ಷ ರೂ. ಕಾಣಿಕೆ ನೀಡಿದ್ದಾರೆ. ಜೂನ್ ತಿಂಗಳಲ್ಲಿ ನೋಂದಾಯಿತ ಭಕ್ತರ ಸಂಖ್ಯೆ 1,97,888 ಎಂದು ಟಿಟಿಡಿ ತಿಳಿಸಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.