Free Loan Scam /ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಜನರಿಗೆ ಉಚಿತ ಸಾಲ ಸೌಲಭ್ಯ ಕೊಡಿಸ್ತಿವಿ ಅಂತಾ ಹೇಳಿಕೊಂಡು, ಅವರ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಕ್ರಿಯೆಟ್ ಮಾಡಿಸಿ, ಫೇಕ್ ಟ್ರಾಂಜೇಕ್ಷನ್ ನಡೆಸಿ, ಕ್ರೈಂ ಎಸೆಗುತ್ತಿರುವ ಪ್ರಕರಣಗಳು ಚಿಕ್ಕಮಗಳೂರಲ್ಲಿ ಹೆಚ್ಚಾಗಿದೆ.
ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇರೆಯವರ ಅಕೌಂಟ್ ಬಳಸಿದ್ದರ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಪೊಲೀಸ್ ಮಾಹಿತಿ ಆಧರಿತ ವರದಿಯಲ್ಲಿ ಒಬ್ಬ ವ್ಯಕ್ತಿಯ ಬ್ಯಾಂಕ್ ಅಕೌಂಟ್ನ್ನ ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನ ವಿವರಿಸಲಾಗಿತ್ತು,.
ಆದರೆ ಚಿಕ್ಕಮಗಳೂರಿನಲ್ಲಿ , ಬ್ಯಾಂಕ್ನಲ್ಲಿ ಉಚಿತವಾಗಿ ಸಾಲ ಕೊಡಿಸುವುದಾಗಿ ಹೇಳಿ ಈ ರೀತಿಯಾಗಿ ಸ್ಕ್ಯಾಮ್ ಮಾಡಲಾಗುತ್ತಿದೆ. ಬ್ಯಾಂಕ್ಗಳಲ್ಲಿ ಎಲ್ಲರಿಗೂ ಸಾಲ ಸಿಗೋದಿಲ್ಲ, ಸಿಬಿಲ್ ಸ್ಕೋರ್ ರಗಳೆಯಂತು ಹಲವರಿಗೆ ಗೊತ್ತಿರುತ್ತದೆ. ಈ ವಿಚಾರವನ್ನು ಬಂಡವಾಳ ಮಾಡಿಕೊಂಡು, ಬ್ಯಾಂಕ್ನಲ್ಲಿ ರಿಸ್ಕ್ ಇಲ್ದೇ ಪ್ರೀ ಆಗಿ ಲೋನ್ ಮಾಡಿಸಿಕೊಡುತ್ತೇವೆ, ಅಲ್ಲದೆ ಬ್ಯಾಂಕ್ ಖಾತೆ ತೆರೆಯುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುತ್ತೇವೆ, ಹಾಗೂ ಅಕೌಂಟ್ ಓಪನ್ ಆದ ತಕ್ಷಣ 1000 ರೂಪಾಯಿ ಜಮಾ ಮಾಡುತ್ತೇವೆ ಎಂದು ಆಮೀಷ ಒಡ್ಡುತ್ತಿದ್ದಾರೆ.
ಆಮೀಷಕ್ಕೆ ಬಲಿಯಾದವರ ಹೆಸರಲ್ಲಿ ಅಕೌಂಟ್ ಕ್ರಿಯೆಟ್ ಮಾಡಿ ಮೊಬೈಲ್ ನಂಬರ್ ತಮ್ಮದನ್ನ ಸೀಡ್ ಮಾಡಿಕೊಂಡು ಸೈಬರ್ ಕ್ರೈಂಗಳಿಗೆ ಆ ಅಕೌಂಟ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಡುವುದಾಗಿ ಆಮಿಷವೊಡ್ಡಿ ವಂಚಕರು ಈ ಕೃತ್ಯವೆಸಗಿದ್ದಾರೆ.
ಈ ವಂಚನೆ ಜಾಲದ ಕುರಿತು ಸಂತ್ರಸ್ತರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶೇಷ ಅಂದರೆ, ಜನರಿಂಧ ಬ್ಯಾಂಕ್ ಖಾತೆ ತೆರೆಯಲು ಅಗತ್ಯವಿರುವ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಭಾವಚಿತ್ರಗಳನ್ನು ಪಡೆಯುವ ಆರೋಪಿಗಳು ಖಾಲಿ ಕಾಗದದ ಮೇಲೆ ಸಂತ್ರಸ್ತರಿಂದ ಸಹಿ ಹಾಗೂ ಹೆಬ್ಬೆಟ್ಟಿನ ಗುರುತನ್ನು ಸಹ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ವಿವಿಧ ರಾಜ್ಯಗಳ ಸೈಬರ್ ಹೆಲ್ಪ್ ಲೈನ್ ಸಂಖ್ಯೆ 1930 ರ ಮುಖಾಂತರ ಈ ಬ್ಯಾಂಕ್ ಖಾತೆಗಳ ಮೇಲೆ ದೂರುಗಳು ದಾಖಲಾದ ಬೆನ್ನಲ್ಲೆ ಗ್ರಾಹಕರಿಗೆ ತಮ್ಮ ಹೆಸರಿನ ಅಕೌಂಟ್ಗಳಲ್ಲಿ ಈ ಥರ ನಡೆಯುತ್ತಿದೆ ಎಂದು ಗೊತ್ತಾಗಿದೆ. ವಿಚಾರಣೆಗಳು ಹೆಚ್ಚಾದ ಬೆನ್ನಲ್ಲೆ ಸಂತ್ರಸ್ತರು ಈ ಕುರಿತಾಗಿ ದೂರುಗಳನ್ನು ದಾಖಲಿಸುತ್ತಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
