BHADRAVATI

ಭದ್ರಾವತಿ : ಖೋಟಾ ನೋಟು ಆರೋಪಿ ಬಂಧನಕ್ಕೆ ಕಾರಣವಾಯ್ತು ಸಿಗರೇಟ್​ ಪ್ಯಾಕ್​​ ?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Bhadravati ಭದ್ರಾವತಿ : ಮಾದನಾಯಕನಹಳ್ಳಿ ಹಾಗೂ ತುಮಕೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ  ಶಿವಮೊಗ್ಗದಿಂದ ಬೆಂಗಳೂರಿಗೆ ಖೋಟಾ ನೋಟುಗಳನ್ನು ತಂದು ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.ಭದ್ರಾವತಿ ಮೂಲದ ರುದ್ರೇಶ್ (41) ಬಂಧಿತ ಆರೋಪಿ.

ಶಿವಮೊಗ್ಗ: ತುಂಗಾ ಜಲಾಶಯ ಭರ್ತಿ! ಎಷ್ಟಿದೆ ನದಿಯ ಒಳಹರಿವು

ಎಂಬಿಎ ಪದವೀಧರನಾದ ಆರೋಪಿ ರುದ್ರೇಶ್​​  ಖೋಟಾ ನೋಟುಗಳನ್ನು ಚಲಾವಣೆ ನಡೆಸುತ್ತಿದ್ದ, ಹೀಗೆ ಒಂದು ದಿನ ಅಂಗಡಿಯಲ್ಲಿ ಸಿಗರೇಟ್  ತರಲು ಹೋದಾಗ  500 ರೂಪಾಯಿ ಮುಖಬೆಲೆಯ ಖೊಟಾ ನೋಟನ್ನು ನೀಡಿದ್ದಾನೆ, ಈ ವೇಳೆ ಅಂಗಡಿ ಮಾಲೀಕ ಅನುಮಾನದಿಂದ ನೋಟನ್ನು ಪರಿಶೀಲಿದ್ದಾರೆ.  ವೇಲೆ 500 ರೂಪಾಯಿ ನೋಟು ಖೋಟಾ ನೋಟು ಎಂಬುವುದು ತಿಳಿದುಬಂದಿದೆ. ಈ  ಹಿನ್ನೆಲೆ ಅಂಗಡಿ ಮಾಲೀಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

ಆರೋಪಿಯು ಬೆಂಗಳೂರಿಗೆ ಬಂದಿರುವ ಬಗ್ಗೆ ತುಮಕೂರು ಜಿಲ್ಲೆಯ ಹುಳಿಯಾರು ಠಾಣೆ ಪೊಲೀಸರು ಸುಳಿವು ಪತ್ತೆಹಚ್ಚಿದ್ದರು. ಬಳಿಕ ಆತ ಸಂಚರಿಸುತ್ತಿದ್ದ ಕಾರಿನ ಸಂಖ್ಯೆಯನ್ನು ಆಧರಿಸಿ ತನಿಖೆ ನಡೆಸಿದಾಗ, ಆತ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವುದು ಪತ್ತೆಯಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳೀಯ ಸಿಬ್ಬಂದಿಯ ನೆರವಿನೊಂದಿಗೆ ಆತನನ್ನು ವಶಕ್ಕೆ ಪಡೆದರು. ಈ ಹಿಂದೆ 2024ರಲ್ಲೂ ಸಹ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಪ್ರಕರಣದಲ್ಲಿ ರುದ್ರೇಶ್ ಸೇರಿ ಆರು ಜನರನ್ನು ದಾವಣಗೆರೆ ಪೊಲೀಸರು ಜೈಲಿಗಟ್ಟಿದ್ದರು. ಆದರೆ, ಜೈಲಿನಿಂದ ಬಿಡುಗಡೆಯಾದ ಮೇಲೂ ಆತ ಮತ್ತೆ ತನ್ನ ಹಳೇ ದಂಧೆಯನ್ನೇ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.