SHIVAMOGGA NEWS TODAY

ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ ಕುಟುಂಬಕ್ಕೆ ಒಪ್ಪಿಸಿದ ಅಕ್ಕ ಪಡೆ! ದೊಡ್ಡಪೇಟೆಯಲ್ಲಿ ಘಟನೆ

ajjimane ganesh ನವೀಕರಣ: 09 ಜುಲೈ 2026, 8:26 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Akka Pade Police Rescue / ಮಲೆನಾಡು ಟುಡೆ / ಶಿವಮೊಗ್ಗ/ ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ಗ್ರೇಟ್ ಎನಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಅಕ್ಕಪಡೆಯ ಪೊಲೀಸ್​. ಹೌದು, ಲೇಡಿ ಪೊಲೀಸರಿಬ್ಬರು ಮನೆಬಿಟ್ಟು ಬಂದು ಅಸ್ವಸ್ಥಳಾಗಿದ್ದ ತಾಯಿಯೊಬ್ಬಳನ್ನು ಮರಳಿ ಮನೆಗೆ ತಲುಪಿಸಿದ್ದಾರೆ.

ದೊಡ್ಪಪೇಟೆ ಲಿಮಿಟ್ಸ್​ ನಲ್ಲಿ ಅಕ್ಕಪಡೆಯ ಮಾನವೀಯ ಕೆಲಸ

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿನ್ನೆ ದಿನ ಈ ಘಟನೆ ನಡೆದಿದೆ. ಇಲ್ಲಿನ ಸಾಗರ ರಸ್ತೆಯಲ್ಲಿ ಮಹಿಳೆಯೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿದ್ದಳು. ಈ ಬಗ್ಗೆ ಯಾರೋ ಪುಣ್ಯಾತ್ಮರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಅದನ್ನ ಆಧರಿಸಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ಅಕ್ಕ ಪಡೆಯ ಎಎಸ್ಐ ಅಮೃತಬಾಯಿ ಹಾಗೂ ಹೆಚ್ ಸಿ ಸವಿತಾ ಸ್ಪಾಟ್​ಗೆ ತೆರಳಿದ್ದರು.

ಸ್ಥಳಕ್ಕೆ ತೆರಳುತ್ತಿದ್ದಂತೆ ಪೊಲೀಸರಿಗೆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತಾಗಿದೆ. ಮಳೆ ಗಾಳಿಗೆ ಮಹಿಳೆ ಪೂರ್ಣವಾಗಿ ಅಸ್ವಸ್ಥಗೊಂಡಿದ್ದಳು. ತಕ್ಷಣವೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ, ಆಕೆಯ ಪರಿಚಯ ವಿಳಾಸ ಹಾಗೂ ಕುಟುಂಬದವರ ಬಗ್ಗೆ ಮಾಹಿತಿ ಕಲೆಹಾಕಿದರು. ಬಳಿಕ ಕುಟುಂಬದವರನ್ನು ಸ್ಥಳಕ್ಕೆ ಕರೆಸಿಕೊಂಡು, ಅವರಿಗೆ ವಿಷಯ ತಿಳಿಸಿ ಹಿರಿ ವಯಸ್ಸಿನ ಮಹಿಳೆಯನ್ನು ಅವರ ಜೊತೆಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.

ಅಸ್ವಸ್ಥ ಮಹಿಳೆಯನ್ನು ಅವರ ಕುಟುಂಬದ ಸದಸ್ಯರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟ ಅಕ್ಕಪಡೆಯ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ