ಹೊಸನಗರ, ನಗರ ಪಿಎಸ್​ಗೆ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಭೇಟಿ! ವಿಶೇಷವಾಗಿತ್ತು

ಹಂಚಿಕೊಳ್ಳಿ
WhatsApp Facebook X Telegram
IGP Dr. B.R. Ravikanthe Gowda Inspects Hosanagara and City Police Stations in Shivamogga

IGP Dr B R Ravikanthe Gowda / ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ / ಇಯರ್ಲಿ ವಿಸಿಟ್​ ಗಾಗಿ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಶಿವಮೊಗ್ಗಕ್ಕೆ ಆಗಮಿಸಿದ್ದರು. ನಿನ್ನೆ ದಿನ ವಾರದ ಕವಾಯತಿನ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ವಾರ್ಷಿಕ ಪರಿವೀಕ್ಷಣೆಯ ಪ್ರೋಟೋಕಾಲ್ ಸಲುವಾಗಿ ಹೊಸನಗರ ತಾಲ್ಲೂಕಿನ ಸ್ಟೇಷನ್​ಗಳಿಗೆ ವಿಸಿಟ್ ನೀಡಿದರು. ಈ ಪೈಕಿ ಹೊಸನಗರ ಪೊಲೀಸ್ ಸ್ಟೇಷನ್​ ಮತ್ತು ನಗರ ಪೊಲೀಸ್ ಸ್ಟೇಷನ್​ಗೆ ಭೇಟಿ ಕೊಟ್ಟ ಅವರು ಅಲ್ಲಿನ ಕೇಸ್​ ಶೀಟ್​ಗಳನ್ನು ಪರಿಶೀಲಿಸಿದರು. ಸಿಬ್ಬಂದಿಗಳನ್ನ ವಿಚಾರಿಸಿದರು, ಕುಂದುಕೊರತೆಗಳನ್ನು ಆಲಿಸದರಷ್ಟೆ ಅಲ್ಲದೆ ಸ್ಟೇಷನ್​ನ ವ್ಯವಸ್ಥೆ ಹಾಗೂ ನಾಗರಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

Whatsapp / https://chat.whatsapp.com/JrsZ8He4nN600n0r3tJItz

ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಠಾಣೆಗೆ (IGP Dr B R Ravikanthe Gowda) ಆಗಮಿಸುತ್ತಲೇ ಎರಡು ಪೊಲೀಸ್ ಸ್ಟೇಷನ್​ನಲ್ಲಿಯು ಅವರಿಗೆ ಗೌರವ ವಂದನೆ ಸಲ್ಲಿಸಲಾಗಿದೆ. ಈ ವೇಳೆ ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ಕೂಡ ಉಪಸ್ಥಿತರಿದ್ದು, ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡರಿಗೆ ತಮ್ಮ ವ್ಯಾಪ್ತಿಯ ಠಾಣೆಯ ಬಗೆಗಿನ ಮಾಹಿತಿಯನ್ನು ಒದಗಿಸಿದರು. ಈ ಕುರಿತಾದ ಫೋಟೋ ಇಲ್ಲಿದೆ.

IGP Dr. B.R. Ravikanthe Gowda Inspects Hosanagara and City Police Stations in Shivamogga
IGP Dr. B.R. Ravikanthe Gowda Inspects Hosanagara and City Police Stations in Shivamogga

ಗೌರವ ವಂದನೆ ಸ್ವೀಕರಿಸಿದ ಬಳಿಕ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ರು ಠಾಣೆಯ ದೈನಂದಿನ ಕಾರ್ಯವೈಖರಿ, ದಾಖಲಾತಿ ಹಾಗೂ ಕಡತಗಳ ನಿರ್ವಹಣೆ ಸೇರಿದಂತೆ ಇತರೆ ಪ್ರಮುಖ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿಮಾರ್ಗದರ್ಶನ ನೀಡಿದರು.

IGP Dr. B.R. Ravikanthe Gowda Inspects Hosanagara and City Police Stations in Shivamogga
IGP Dr. B.R. Ravikanthe Gowda Inspects Hosanagara and City Police Stations in Shivamogga

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಸಂಬಂಧ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡರವರು ಅಂತಿಮವಾಗಿ ಠಾಣಾಧಿಕಾರಿಗಳು ಸಿಬ್ಬಂದಿಗಳ ಜೊತೆಗೆ ಫೋಟೋ ಸೇಷನ್​ನಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಠಾಣೆಯ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

[su_image_carousel source=”media: 36376,36375,36374,36373,36372″ controls_style=”light” crop=”16:9″ target=”self”]

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor