SHIVAMOGGA NEWS TODAY

ಹೊಸನಗರದಲ್ಲಿ ಸಾಗರ ಬಸ್​ & ಲಾರಿ ಮಧ್ಯೆ ಡಿಕ್ಕಿ

KSRTC Bus and Truck Collide Near Hosanagara on Sagara Road
ಶೇರ್ ಮಾಡಿ WhatsApp Facebook X

Near Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹೊಸನಗರ / ಜಿಲ್ಲೆಯ ಹೊಸನಗರ ತಾಲ್ಲೂಕು, ಪಟ್ಟಣದ ಹೊರವಲಯದಲ್ಲಿ (Near Hosanagara)ಅಪಘಾತವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ. ಆದಾಗ್ಯು ವಾಹನಗಳು ಜಖಂಗೊಂಡು, ಸಂಚಾರಕ್ಕೆ ಅಡೆತಡೆಯಾದ ಬಗ್ಗೆ ಹೊಸನಗರದ ಸ್ಥಳೀಯರು ತಿಳಿಸಿದ್ದಾರೆ.

ಹೊಸನಗರ ಪಟ್ಟಣ ಹೊರವಲಯದ ಸಾಗರ ರಸ್ತೆಯ ಅಂಕ್ರೋಡಿ ಮೋರಿ ತಿರುವಿನಲ್ಲಿ ನಿನ್ನೆ ದಿನ ಅಂದರೆ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ.

ಸಾಗರದಿಂದ ಹೊಸನಗರಕ್ಕೆ ಬರುತ್ತಿದ್ದ ಬಸ್ ಹಾಗೂ ಜಯನಗರದಿಂದ ಆನಂದಪುರಂಗೆ ತೆರಳುತ್ತಿದ್ದ ಲಾರಿ ಹೆದ್ದಾರಿ ತಿರುವಿನಲ್ಲಿ ಡಿಕ್ಕಿ ಹೊಡೆಯಿತು. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಲಾರಿ ಚಾಲಕನಿಗೆ ಯಾವುದೇ ಹಾನಿ ಆಗಿಲ್ಲ, ನಡು ರಸ್ತೆಯಲ್ಲಿ ಎರಡೂ ವಾಹನಗಳು ನಿಂತ ಪರಿಣಾಮ ಕೆಲ ಕಾಲ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಇನ್ನೂ ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿ, ವಾಹನಗಳನ್ನ ಸ್ಥಳದಿಂದ ತೆರವುಗೊಳಿಸಿದರು.

Whatsapp / https://chat.whatsapp.com/JrsZ8He4nN600n0r3tJItz

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಶಿವಮೊಗ್ಗ: ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಶೋಯೆಬ್ ಎಂಬಾತ ಬಂಧಿತ ಆರೋಪಿ. ಈತ ಶಿಕಾರಿಪುರದ ಪಿಸಿಜೆ ಮತ್ತು ಜೆಎಂಎಫ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಶಿಕಾರಿಪುರ ಠಾಣೆ ಪಿಐ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor