ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಅವರದ್ದೊಬ್ಬರ ತೀರ್ಮಾನವಲ್ಲ, ಇದರ ಹಿಂದೆ ಬೇರೆಯವರೇ ಇದ್ದಾರೆ: ಕೆ.ಎಸ್. ಈಶ್ವರಪ್ಪ 

ಹಂಚಿಕೊಳ್ಳಿ
WhatsApp Facebook X Telegram
KS Eshwarappa on Ramalinga Reddy Resignation
KS Eshwarappa on Ramalinga Reddy Resignation

KS Eshwarappa ಶಿವಮೊಗ್ಗ: ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ನಿರ್ಧಾರ ಕೇವಲ ಅವರೊಬ್ಬರ ವೈಯಕ್ತಿಕ ತೀರ್ಮಾನ ಖಂಡಿತಾ ಅಲ್ಲ. ಈ ಇಡೀ ರಾಜಕೀಯ ಬೆಳವಣಿಗೆಯ ಹಿಂದೆ ಬೇರೆಯವರ ದೊಡ್ಡ ಕೈವಾಡವೇ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಶಿವಮೊಗ್ಗ: 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರ ರಾಜೀನಾಮೆಯ ಹಿಂದಿರುವ ಆ ಸೂತ್ರಧಾರರು ಯಾರು ಎಂಬುದು ಆದಷ್ಟು ಬೇಗ ಇಡೀ ರಾಜ್ಯದ ಮುಂದೆ ಬಹಿರಂಗವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಪಕ್ಷದ ಸದ್ಯದ ವಿದ್ಯಮಾನಗಳ ಕುರಿತು ವಾಗ್ದಾಳಿ ನಡೆಸಿದ ಈಶ್ವರಪ್ಪ, ಆಡಳಿತ ಪಕ್ಷದಲ್ಲಿ ಅತೃಪ್ತ ಆತ್ಮಗಳು ತುಂಬಾ ಜಾಸ್ತಿ ಇದ್ದಾವೆ. ಆ ಅತೃಪ್ತ ಆತ್ಮಗಳ ಮನಸ್ಸಿನಲ್ಲಿದ್ದ ಆಕ್ರೋಶ ಈಗ ಅಧಿಕೃತವಾಗಿ ಸ್ಫೋಟಗೊಂಡಿದೆ. ಅದರ ಮೊದಲ ಭಾಗವಾಗಿ ರಾಮಲಿಂಗಾರೆಡ್ಡಿ ಎಂಬ ಮೊದಲ ಆತ್ಮ ಈಗ ಹೊರಗೆ ಬಂದಿದೆ. ಈ ಕಸರತ್ತಿನ ಹಿಂದೆ ಯಾರೆಲ್ಲಾ ಇದ್ದಾರೆ, ಯಾವೆಲ್ಲಾ ಆತ್ಮಗಳು ತೆರೆಮರೆಯಲ್ಲಿ ಆಟವಾಡುತ್ತಿವೆ ಎಂಬುದನ್ನು ಮುಂದಿನ ದಿನಗಳಲ್ಲಿ ನಾನೇ ಖುದ್ದಾಗಿ ಬಹಿರಂಗಪಡಿಸುತ್ತೇನೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ನ ಸದ್ಯದ ಆಂತರಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸರ್ಕಾರ ಯಾವುದೇ ಕಾರಣಕ್ಕೂ ಎರಡು ವರ್ಷ ಪೂರೈಸಲು ಸಾಧ್ಯವೇ ಇಲ್ಲ. ಬಹಳ ಬೇಗನೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ನಾನು ಅತ್ಯಂತ ಸ್ಪಷ್ಟವಾಗಿ ಹೇಳಬಲ್ಲೆ ಎಂದರು. ಅಲ್ಲದೆ, ಕೆಲವರಿಗೆ ಬೇರೆಯವರು ಅಧಿಕಾರದಲ್ಲಿ ಕೂರುವುದನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ, ಹಾಗೆಯೇ ತಾವು ಅಧಿಕಾರ ಬಿಡಲು ಸಿದ್ಧರಿಲ್ಲ. ಅವರೇ ಯಾವಾಗಲೂ ಅಧಿಕಾರದಲ್ಲಿ ಇರಬೇಕೆಂಬ ಸ್ವಾರ್ಥವೇ ಇದಕ್ಕೆ ಕಾರಣವಾಗಿದ್ದು, ಪೂರ್ಣ ವಿವರಗಳು ತಾನಾಗಿಯೇ ಹೊರಬರಲಿವೆ ಎಂದರು.

KS Eshwarappa on Ramalinga Reddy Resignation

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor