Thirthahalli ತೀರ್ಥಹಳ್ಳಿ : ಅಯ್ಯೋ ನಿಮ್ಗೊಂದು ವಿಷಯ ಗೊತ್ತೇನ್ರಿ? ಹೋದ್ ವರ್ಸಕ್ಕಿಂತ ಈ ಸತಿ ಬಾರಿ ಜಾಸ್ತಿಯಾಗ್ಯಾದಂತೆ, ಬಿಸ್ಲು ಜಾಸ್ತಿ ಅದೆ ಅಂತ ಜನ ಕುಡ್ದಿದ್ದೇ ಕುಡ್ದಿದ್ದು ಕುಡ್ದಿದ್ದೇ ಕುಡಿದ್ದು… ಎಂತ ಎಳ್ನೀರಾ ಕುಡ್ದ್ಯಾರೆ ಅಂತ ಅನ್ಕೊಂಡ್ರಾ ? ಛೇ ಅಲ್ಲಾಪ ಅವ್ರು ಕುಡ್ದಿದ್ದು ನೀರಲ್ಲ ಬಿಯರು, ಅದ್ರಲ್ಲೂ ನಮ್ ತೀರ್ಥಳ್ಳಿ ಕಡೆವ್ರು ಅದರಲ ಅವ್ರು ಜಿಲ್ಲೇಲೆ 7ನೇ ಸ್ಥಾನದಲ್ಲಿ ಅದರಂತೆ. ಇದ್ನಾ ನಾ ಹೇಳಿದ್ದಲ್ಲಾ ನಮ್ ಅಬ್ಕಾರಿ ಇಲಾಕೆ ಅವ್ರು ಕೊಟ್ಟಿರೋ ಮಾಹಿತಿ ಕಂಡ್ರಿ. ಹಂಗಂತ ತೀರ್ಥಹಳ್ಳಿಯವ್ರೆಲ್ಲಾ ಕುಡಿತಾರೆ ಅಂತ ಹೇಳ್ತಿಲ್ಲಾ ತಪ್ ತಿಳ್ಕೋಬೇಡಿ, ಏನೋ ಈ ಸತಿ ಸ್ವಲ್ಪ ಬಿಸ್ಲು ಜಾಸ್ತಿ ಆಗದೆ. ಇದರ ಮಧ್ಯೆ ದೇವ್ರ್ ಹರ್ಕೆ ಸೀಜನ್ ಬೇರೆ. ಏನೋ ಸ್ವಲ್ಪ ಬಾರಲ್ಲಿ ಹೋದ್ ವರ್ಸಕ್ಕಿಂತ ವ್ಯಾಪಾರ ಜಾಸ್ತಿ ಆಗ್ಯದಪ್ಪ
Thirthahalli ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್ ಇರಲ್ಲ
ಇದ್ರು ಮಧ್ಯ ನಾ ಎಂತ ಹೇಳಕ್ಕೆ ಹೊರ್ಟೀನಿ ಅಂತ ಡೈರೆಕ್ಟಾಗಿ ವಿಶ್ಯಕ್ಕೆ ಬರ್ತೀನಿ ತಡಿ. ವಿಚಾರ ಏನಂದರೆ ಈ ಸತಿ ಜಿಲ್ಲೆಲಿ ಹೋದ್ ಸತಿಗಿಂತ ಬಿಯರ್ ಕುಡಿಯೋರು ಜಾಸ್ತಿ ಆಗ್ಯಾರಂತೆ. ನಮ್ ಶಿವಮೊಗ್ಗ ಜಿಲ್ಲೆಲಿ ಬರಿ ಬೀರ್ ಇಂದಾನೆ ಅಬ್ಕಾರಿ ಖಜಾನೆಗೆ ಬರೋಬ್ಬರಿ 38.05 ಕೋಟಿ ಆದಾಯ ಬಂದ್ಯಾದಂತೆ. ಹೋದ್ ಸತಿ ಇದ್ದಿದ್ದು 36.70 ಕೋಟಿ ಕಂಡ್ರಿ. ಇದು ವರ್ಷದ್ ಲೆಕ್ಕಾ ಅಲ್ಲ ಮಾರ್ಚ್‌ನಿಂದ ಮೇ ವರೆಗೆ ಬರೀ 3 ತಿಂಗ್ಲು ಲೆಕ್ಕಾ ಹಂಗಾರ್ ಲೆಕ್ಕ ಹಾಕಿ ನೀವೆ ಎಸ್ಟ್ ಜಾಸ್ತಿ ಆಗ್ಯಾದೆ ಅಂತ.
ಈ ವರ್ಸಾ ಮಾರ್ಚ್ಯಿಂದ ಮೇ 20 ರ ತಂಕ ಶಿವಮೊಗ್ಗ ಜಿಲ್ಲೇಲಿ ಒಟ್ಟು 2,94,500 ಬೀರ್ ಬಾಕ್ಸ್‌ಗಳು ಸೇಲ್ ಆಗ್ಯಾವೆ ನೋಡಿ, ಇದ್ರಿಂದಾಗಿ ಮೂರೇ ತಿಂಗ್ಳಲ್ಲಿ 38.05 ಕೋಟಿ ಆದಾಯ ಬಂದ್ಯಾದೆ. ಆದ್ರೆ ಹೋದ್ ವರ್ಸಾ ಇದೇ ಟೈಮಲ್ಲಿ ಮಾರ್ಚ್‌ನಿಂದ ಮೇ 20 ವರ್ಗೆ 2,58,694 ಬಾಕ್ಸ್‌ಗಳು ಸೇಲಾಗಿ, 36.70 ಕೋಟಿ ಆದಾಯ ಕಲೆಕ್ಸನ್ ಆಗಿತ್. ಹೋದ್ ಸತಿಗೆ ಹೋಲ್ಸುದ್ರೆ ಈ ವರ್ಸಾ ಇಡೀ ಜಿಲ್ಲೇಲಿ 35,806 ಬಾಕ್ಸ್ ಬೀರ್ ಸೇಲ್ ಆಗ್ಯಾವೆ ನೋಡಿ ಹೊಡ್ತಾ ಹೆಂಗೈತೆ.
ಇದ್ರು ಸಂದೀಲಿ ನಮ್ಮ ತೀರ್ಥಳ್ಳಿ ಕಡೆ ಬರೋದಾದ್ರೆ ಬೀರ್ ಕೊಡಿಯೋದ್ರಲ್ ನಾವ್ ಏನ್ ಕಮ್ಮಿ ಇಲ್ಲ ಅಂತಾರೆ ನಮ್ ಕಡೇವ್ರು , ಯಾವಾಗ್ಲು ಬೇಸ್ಗೆ ಟೈಮಲ್ಲಿ ಹೆಚ್ ಬಿಸಿನೂ ಇಲ್ದೇ. ಬಿಸಿ ಮತ್ತೆ ತಂಪು ಎರಡನ್ನ ಮ್ಯಾನೇಜ್ ಇರೋ ಮಲ್ನಾಡಲ್ಲಿ ಈ ಸತಿ ಸೆಕೆ ಜಾಸ್ತಿ ಆಗ್ಯಾದೆ ಅಂತ ಇಲ್ಲಿ ಸೇಲ್ ಆಗಿರೋ ಬೀರ್ ಇಂದ ಲೆಕ್ಕಾ ಹಾಕ್ಬೋದ್ ನೋಡಿ. ಏಕಂದ್ರೆ ತೀರ್ಥಳ್ಳಿಲಿ ಹೋದ್ ಸತಿಗಿಂತಾ ಈ ಸತಿ ಬೀರ್ ಸೇಲ್ ಆಗೋದ್ರಲ್ಲಿ ಭರ್ಜರಿ ಏರ್ಯಾದೆ ಕಂಡ್ರಿ.
ಎಷ್ಟು ಅಂತಿರಾ ಕಳೆದ ವರ್ಷ ತೀರ್ಥಹಳ್ಳಿ ವಲಯದಲ್ಲಿ ಒಟ್ಟು 28,024 ಬಾಕ್ಸ್ ಬೀರ್ ಸೇಲ್ ಆಗಿದ್ರೆ, ಈ ವರ್ಷ ತೀರ್ಥಹಳ್ಳಿ ವಲಯವೊಂದರಲ್ಲೇ 30,734 ಬಾಕ್ಸ್ ಬೀರ್ ಖಾಲಿಯಾಗ್ಯದೆ. ಅಂದರೆ ಕಳೆದ ವರ್ಸಕ್ಕೆ ಹೋಲ್ಸುದ್ರೆ ಈ ಬಾರಿ ತೀರ್ಥಳ್ಳಿಲಿ ಬರೋಬ್ಬರಿ 2,710 ಬಾಕ್ಸ್ ಬೀರ್ ಹೆಚ್ಚು ಸೇಲ್ ಆಗ್ಯಾದೆ. ಇನ್ನು ತೀರ್ಥಹಳ್ಳಿ ಉಪವಿಭಾಗದ ಒಟ್ಟು ಸೇಲ್ ಆಗಿದ್ ನೋಡೋದಾದರೆ ಹೋದ್ ಸತಿ 43,878 ಬಾಕ್ಸ್ ಸೇಲ್ ಆಗಿದ್ರೆ, ಈ ಸತಿ ಅದು 47,922 ಬಾಕ್ಸ್‌ಗಳ್ಗೆ ಏರಿ, ಒಟ್ಟಾರೆ 4,044 ಬಾಕ್ಸ್‌ಗಳ ಭರ್ಜರಿ ಹೆಚ್ಚಾಗ್ಯದೆ. ಇಲ್ಲೇ ಲೆಕ್ಕಾ ಹಾಕಿ ಜನ ಬಿಸ್ಲಲ್ಲಿ ಬೆಂದು ಬೀರ್ ಕುಡ್ದಿದ್ ಹೊಡ್ತಾ ಹೆಂಗದೆ ಅಂತ.
ಇನ್ನೂ ಜಿಲ್ಲೇಲಿ ಬೀರ್ ಸೇಲ್ ಆಗಿದ್ ಜಾಸ್ತಿ ಎಲ್ ಗೊತ್ತಂದ್ರಿ ಅದು ಶಿವಮೊಗ್ಗ ಉಪವಿಭಾಗದಲ್ಲೇ ಅತಿ ಹೆಚ್ ಅಂದ್ರೆ ಈ ವರ್ಸ ಇಲ್ಲಿ 1,58,708 ಬೀರ್ ಬಾಕ್ಸ್‌ಗಳು ಸೇಲ್ ಆಗ್ಯವೆ; ಹೋದ್ ವರ್ಸಾ ಇದು 1,37,935 ರಷ್ಟಿತ್ತು. ಶಿವಮೊಗ್ಗ ಉಪವಿಭಾಗವೊಂದರಲ್ಲೇ ಹೋದ್ ವರ್ಸದ್ ಲೆಕ್ಕಕ್ಕೆ ಹೋಲ್ಸುದ್ರೆ ಈ ಸತಿ 20,773 ಬೀರ್ ಬಾಕ್ಸ್‌ಗಳು ಭರ್ಜರಿ ಹೆಚ್ಚಾಗ್ಯದೆ ಕಂದ್ರಿ.
Thirthahalli ಇನ್ನೂ ಬೀರ್ ಕುಡಿಯೋದ್ ಹೆಚ್ ಆಗಕ್ಕೆ ಕಾರ್ಣ ಎಂತ ಗೊತ್ತಾ.
ಬೀರ್ ಕುಡಿಯೋರ್ ಈ ತರ ಹೆಚ್ಚಾಗಕ್ಕೆ ಎಂತಾದ್ರು ಕಾರ್ಣ ಬೇಕಾಲ ಅಂತಾ ಸಂಶೋಧ್ನೆ ಮಾಡ್ದಾಗ ನಮ್ಗ್ ಸಿಕ್ಕಿದ್ ಉತ್ರ ಇದ್ ಕಂಡ್ರಿ ಏನಂದ್ರೆ ಅಬ್ಕಾರಿ ಇಲಾಖೆ ಪ್ರಕಾರ ಸರ್ಕಾರ aib ಅಂತ ಒಂದು ಯೋಜ್ನೆನ ಜಾರಿ ಮಾಡ್ಯದೆ. ಅದು ಎಂತಂದ್ರೆ ಯಾವ್ಯಾವ್ ಬೀರು ಶೇ 5 ಪೆರ್ಸಂಟ್ಗಿಂತಾ ಕಡ್ಮೆ ಆಲ್ಕೋಹಲ್ ಪೆರ್ಸಂಟೇಜ್ ಹೊಂದಿರ್ತವಲಾ, ಅದಕ್ಕೆ ರೇಟ್ ಕಮ್ಮಿ ಮಾಡ್ಯಾರೆ. ಇದ್ರಿಂದಾಗಿ ಕೆಲವ್ ಬೀರ್ಗಳ ರೇಟು 20 ರಿಂದ 25 ಪೆರ್ಸೆಂಟ್ ಕಮ್ಮಿ ಆಗ್ಯದ್ರಿ. ಅಬ್ಕಾರಿ ಇಲಾಕೆಯವ್ರು ಹೇಳೋ ಪ್ರಕಾರ ಹೊಸ ದರ ಪಟ್ಟಿಯಲ್ಲಿ 650 ಎಂ ಎಲ್ ಮೈಲ್ಡ್ ಬೀರ್ ಬ್ರ್ಯಾಂಡ್‌ಗಳ ಬೆಲೆ ಭಾರಿ ಕಮ್ಮಿ ಆಗ್ಯದೆ. ಅದರಲ್ಲಿ ಕಿಂಗ್‌ಫಿಷರ್ ಪ್ರೀಮಿಯಂ ಮತ್ತು ಅಲ್ಟ್ರಾ ರೇಟ್ಲ್ಲಿ 75, ಹೈನೆಕೆನ್ ರೇಟ್ಲ್ಲಿ 70, ಬಿ ಎಕ್ಸ್‌ಪೋರ್ಟ್ ರೇಟ್ಲ್ಲಿ 25 ಹಾಗೂ ಬಡ್‌ವೈಸರ್ ಪ್ರೀಮಿಯಂ ರೇಟಲ್ಲಿ 20 ರಷ್ಟು ಕಮ್ಮಿ ಆಗ್ಯದೆ. ಈ ಸತಿ ಬಿಸ್ಲು ಜಾಸ್ತಿ ದೇವ್ರ್ ಹರ್ಕೆ, ಮಧ್ವೆ ಮನೆ, ಬೀಗ್ರೂಟ ಚಪ್ಪರ್, ಶಾಸ್ತದ್ ಸೀಜನ್ ಅಲ್ರಿ ಹಂಗಾಗಿ ನಮ್ ಹುಡುಗ್ರು ಸೆಕೆ ಒಂದ್ ಖುಷಿ ಒಂದ್ ಬದಿ ಅಂತ ಬೀರ್ ಕುಡಿಯೋದ್ ಜಾಸ್ತಿ ಮಾಡ್ಯಾರೆ ಅಂತ ನಮ್ಮೂರ್ ಸಂಕ್ರಣ್ಣ ಹೇಳ್ತಿದ್ರು, ಮತ್ ನಾನ್ ಹೇಳಿದ್ದಲ್ಲ ಆತಾ.
ಎಲ್ಲೆಲ್ಲಿ ಎಷ್ಟೆಸ್ಟ್ ಬೀರ್ ಸೇಲ್ ಆಗ್ಯದೆ ಗೊತ್ತಾ : ಇಲ್ಲಿದೆ ನೋಡಿ ಚಾರ್ಟ್

ಎಂತದೇ ಆಗ್ಲಿ ಬೀರ್ ರೇಟ್ ಕಮ್ಮಿ ಅಗ್ಯಾದೆ, ಸೆಕೆ ಜಾಸ್ತಿ ಇದೇ ಅಂತ ಜಾಸ್ತಿ ಬೀರ್ ಕುಡಿಬೇಡಿ ಜ್ಯೂಸ್ ಕುಡೀರಿ ಆತ. ಬೀರ್ ಕುಡಿಯಕ್ ಹೋಗಿ ಆರೋಗ್ಯ ಹಾಳ್ ಮಾಡಕಬೇಡಿ ಕಂಡ್ರಾ.
ವರದಿ : ಪ್ರತಾಪ್ ತೀರ್ಥಹಳ್ಳಿ
