ಎಣ್ಣೆ ಸಾಲ ಕೊಡದ ವೈನ್​ಶಾಪ್​ಗೆ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಲು ಮುಂದಾದ ಯುವಕ!

This Article Written by / ajjimane ganesh / ಮೇ 18, 2026

Shivamogga Attempt to Set Fire to Wine Store in Santekaduru

ಶಿವಮೊಗ್ಗ ಸುದ್ದಿ / ಎಣ್ಣೆ ಸಾಲ ಕೊಟ್ಟಿಲ್ಲ ಅಂತಾ ವೈನ್​ಶಾಪ್​ಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆಯೊಂದು ಸಂತೆಕಡೂರಿನಲ್ಲಿ ವರದಿಯಾಗಿದೆ. ವ್ಯಕ್ತಿಯೊಬ್ಬ ವೈನ್ಸ್ ಸ್ಟೋರ್‌ಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಪೂರ್ತಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಇಲ್ಲಿನ ವೈನ್ಸ್ ಶಾಪ್​ನ ಮ್ಯಾನೇಜರ್ ದೂರು ನೀಡಿದ್ದಾರೆ. ಅದರಂತೆ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಆರೋಪಿ ಕಳೆದ ಮೇ 15 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಆರೋಪಿ ಸಂತೆಕಡೂರಿನಲ್ಲಿರುವ ವೈನ್ಸ್‌ಶಾಪ್​ಗೆ ಬಂದಿದ್ದ. ಈ ವೇಳೆ ಮ್ಯಾನೇಜರ್ ಬಳಿ ತನಗೆ ಎಣ್ಣೆ ಸಾಲ ಕೊಡುವಂತೆ ಕೇಳಿದ್ದಾನೆ. ಆದರೆ, ಮ್ಯಾನೆಜರ್ ಇದಕ್ಕೆ ಒಪ್ಪಿಲ್ಲ.

ಅಲ್ಲಿ ಮಾತುಕತೆ ನಡೆದು ಆನಂತರ ಆರೋಪಿ ವಾಪಸ್ ಆಗಿದ್ದ, ಬಳಿಕ ಸಂಜೆ 7 ಗಂಟೆಯ ಸುಮಾರಿಗೆ ಮತ್ತೆ ವೈನ್ಸ್ ಸ್ಟೋರ್ ಬಳಿ ಬಂದು ಅಂಗಡಿಯೊಳಗೆ ನುಗ್ಗಿದ್ದಾನೆ. ಬರುತ್ತಲೇ ಪೆಟ್ರೋಲ್​ ತುಂಬಿದ್ದ ಬಾಟಲಿ ಹಿಡಿದು ಬಂದಿದ್ದ ಆತ ಇಲ್ಲಿ ವೈನ್ಸ್ ಸ್ಟೋರ್ ಅನ್ನು ಹೇಗೆ ನಡೆಸುತ್ತೀರಾ, ನಿಮ್ಮ ಅಂಗಡಿಯೂ ಇರಬಾರದು ಎನ್ನುತ್ತಾ, ಪೆಟ್ರೋಲ್​ ಎರಚಲು ಆರಂಭಿಸಿದ್ದ. ಅಷ್ಟೊತ್ತಿಗೆ ಬಾರ್ ಸಿಬ್ಬಂದಿ ಆರೋಪಿಯನ್ನು ಹಿಡಿದು, ಆತ ಬೆಂಕಿ ಹಚ್ಚುವುದನ್ನ ತಪ್ಪಿಸಿದ್ದಾರೆ.

ಈ ಮಧ್ಯೆ ಪ್ರಕರಣ ರಾಜಿ ಆಗದ ಹಿನ್ನೆಲೆಯಲ್ಲಿ ಇದೀಗ ಎಫ್​ಐಆರ್ ದಾಖಲಾಗಿದೆ. ಮೇ 17 ರಂದು ದಾಖಲಾಗಿರುವ ಎಫ್​ಐಆರ್​ ಅಡಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ವೈನ್​ಶಾಪ್

ಮುಂದಿನ ಸುದ್ದಿ ಒದಿ