ಶಿವಮೊಗ್ಗ: ಭಾರತ ತಂಡವನ್ನು ಪ್ರತಿನಿಧಿಸಲಿರುವ ಕಾಕನಹಸೂಡಿಯ ರಂಜನ್; ಶ್ರೀಲಂಕಾದಲ್ಲಿ ಅಂತರರಾಷ್ಟ್ರೀಯ ಟೂರ್ನಿ

ಹಂಚಿಕೊಳ್ಳಿ
WhatsApp Facebook X Telegram
Shivamogga Ranjan Selected for Wheelchair Cricket
Shivamogga Ranjan Selected for Wheelchair Cricket

Shivamogga ಶಿವಮೊಗ್ಗ : ಶ್ರೀಲಂಕಾದ ಕೊಲಂಬೊದಲ್ಲಿ ಜರುಗಲಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ವೀಲ್ ಚೇರ್ ಕ್ರಿಕೆಟ್ ಟೂರ್ನಿಗೆ ಶಿವಮೊಗ್ಗ ತಾಲೂಕು ಉಂಬಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕನಹಸೂಡಿ ಗ್ರಾಮದ ಪ್ರತಿಭಾನ್ವಿತ ಆಟಗಾರ ರಂಜನ್ ಕೆ. ಜಿ. ಅವರು ಭಾರತ ತಂಡಕ್ಕೆ ಅಧಿಕೃತವಾಗಿ ಆಯ್ಕೆಯಾಗಿ ಜಿಲ್ಲೆಗೆ ಹೆಮ್ಮೆ ತಂಡಿದ್ದಾರೆ.

ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ  

ರಾಷ್ಟ್ರ ಮಟ್ಟದ ವೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ರಂಜನ್ ಕೆ. ಜಿ ತೋರಿದ ಅತ್ಯುತ್ತಮ ಪ್ರದರ್ಶನ, ತಾಂತ್ರಿಕ ಕೌಶಲ್ಯ ಹಾಗೂ ಅಪ್ರತಿಮ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ಲಯನ್ ವೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾ (LWCAI) ಈ ಮಹತ್ವದ ಆಯ್ಕೆಯನ್ನು ಮಾಡಿದೆ. 

ಶ್ರೀಲಂಕಾದ ಕೊಲಂಬೊದಲ್ಲಿ ಮೇ 26 ರಿಂದ ಮೇ 28, 2026 ರವರೆಗೆ ನಡೆಯಲಿರುವ ಭಾರತ ವಿರುದ್ಧ ಶ್ರೀಲಂಕಾ ಅಂತರರಾಷ್ಟ್ರೀಯ 3T-20 ವೀಲ್ ಚೇರ್ ಕ್ರಿಕೆಟ್ ಚಾಂಪಿಯನ್‌ಶಿಪ್ನ ಲ್ಲಿ ರಂಜನ್ ಭಾರತ ತಂಡವನ್ನು ಪ್ರತಿನಿಧಿಸಿ ಮೈದಾನಕ್ಕಿಳಿಯಲಿದ್ದಾರೆ.  

ಮೇ 24 ರಿಂದ ಮೇ 30 ರವರೆಗಿನ ಒಟ್ಟು 7 ದಿನಗಳ ಅಧಿಕೃತ ಅವಧಿಯಲ್ಲಿ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ಶಿಬಿರ, ವಸತಿ, ಆಹಾರ, ಸ್ಥಳೀಯ ಸಾರಿಗೆ ಹಾಗೂ ಕ್ರೀಡಾ ಕಿಟ್‌ಗಳನ್ನು ಅಸೋಸಿಯೇಷನ್ ವತಿಯಿಂದಲೇ ಕಲ್ಪಿಸಿಕೊಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೀರ ಬಹದ್ದೂರ್ ಸಿಂಗ್ ಅವರು ಬಿಡುಗಡೆ ಮಾಡಿರುವ ಅಧಿಕೃತ ಪತ್ರದಲ್ಲಿ ತಿಳಿಸಿದ್ದಾರೆ.  

Shivamogga Ranjan Selected for Wheelchair Cricket

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor