ವಾಕ್ ಮಾಡ್ತಿದ್ದ ವೃದ್ಧೆಗೆ ಶಾಕ್ ಕೊಟ್ರು ಬೈಕಲ್ಲಿ ಬಂದೋರು; ಕ್ಷಣ ಮಾತ್ರದಲ್ಲಿ 2.5 ಲಕ್ಷದ ಮಾಲು ಮಾಯ!

This Article Written by / Prathapa thirthahalli / ಮೇ 18, 2026

Shivamogga Cricket Betting ಶಿRacket Busted in Shivamogga

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಾಕಿಂಗ್ ಮಾಡುತ್ತಿದ್ದ ವೃದ್ಧೆಯನ್ನು ಅಡ್ಡಗಟ್ಟಿ, ಲಕ್ಷಾಂತರ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ವಿನೋಬಾನಗರದಲ್ಲಿ ನಡೆದಿದೆ.

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

Shivamogga ಘಟನೆಯ ವಿವರ

ಮಹಿಳೆಯು ಎಂದಿನಂತೆ ತಮ್ಮ ಮನೆಯ ಪಕ್ಕದಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಏಕಾಏಕಿ ವೃದ್ಧೆಯ ಮಾಂಗಲ್ಯ ಸರಕ್ಕೆ ಕೈಹಾಕಿ ಎಳೆದಿದ್ದಾರೆ. ಇದರಿಂದ ತಕ್ಷಣ ಜಾಗೃತರಾದ ಮಹಿಳೆ, ತಮ್ಮ ಕೈಯಿಂದ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಸರದ ಸ್ವಲ್ಪ ಭಾಗ ವೃದ್ಧೆಯ ಕೈಯಲ್ಲೇ ಉಳಿದಿದ್ದು, ಉಳಿದ ಅರ್ಧ ಭಾಗವನ್ನು ಕಳ್ಳರು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಕಳ್ಳತನವಾಗಿರುವ ಸರದ ತೂಕ ಒಟ್ಟು 18 ರಿಂದ 20 ಗ್ರಾಂ ಇದ್ದು, ಅದರ ಅಂದಾಜು ಬೆಲೆ 2,75,000 ರೂಪಾಯಿ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ವೃದ್ಧೆಯ ಮಗಳು ಕಳ್ಳರನ್ನು ಪತ್ತೆಹಚ್ಚಿ ಕೊಡುವಂತೆ ಕೋರಿ ವಿನೋಬಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Shivamogga Rs 2.75 Lakh Gold Chain Snatched

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿನೋಬಾನಗರ ಕಳ್ಳತನ ಪ್ರಕರಣ,ವೃದ್ಧೆಯ ಚಿನ್ನದ ಸರ ಲೂಟಿ,ಶಿವಮೊಗ್ಗ ಸರಗಳ್ಳತನ ಸುದ್ದಿ

ಮುಂದಿನ ಸುದ್ದಿ ಒದಿ