ಸಹೋದ್ಯೋಗಿಗೆ ಹಾಕಿದ್ದು 1500 ರೂಪಾಯಿ ಆದರೆ ಹೋಗಿದ್ದು 98 ಸಾವಿರ, ನಿಮ್ಗೂ ಹೀಗೆ ಆಗ್ಬೋದು ಹುಷಾರ್​.

ಹಂಚಿಕೊಳ್ಳಿ
WhatsApp Facebook X Telegram
Shivamogga Cyber ScamThirthahalli Shivamogga Cyber Crime
Shivamogga Cyber ScamThirthahalli Shivamogga Cyber Crime

Bhadravati Cyber Crime ಭದ್ರಾವತಿ: ಭದ್ರಾವತಿಯ ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಅವರದೇ ಸಹೋದ್ಯೋಗಿಯೊಬ್ಬರು ಸಾಲದ ರೂಪದಲ್ಲಿ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಘಟನೆಯ ವಿವರ

ದೂರುದಾರರು ತಮ್ಮ ಸಹೋದ್ಯೋಗಿಯೊಬ್ಬರಿಗೆ ಗೂಗಲ್ ಪೇ ಮೂಲಕ 1,500 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದರು. ಕೇವಲ 1,500 ರೂಪಾಯಿ ಮಾತ್ರ ವರ್ಗಾವಣೆಯಾಗಿದೆ ಎಂದುಕೊಂಡಿದ್ದ ದೂರುದಾರರಿಗೆ, ಬ್ಯಾಂಕ್‌ನಿಂದ ಹಣ ಕಡಿತಗೊಂಡ ಮೆಸೇಜ್​​ ನೋಡಿ ಒಮ್ಮೆಲೇ ಶಾಕ್ ಎದುರಾಗಿದೆ. ಏಕೆಂದರೆ, ಅವರ ಖಾತೆಯಿಂದ ಕೇವಲ 1,500 ರೂಪಾಯಿ ಕಟ್ ಆಗುವ ಬದಲು ಬರೋಬ್ಬರಿ 98 ಸಾವಿರ ರೂಪಾಯಿ ಕಡಿತವಾಗಿರುವುದಾಗಿ ಮೆಸೇಜ್ ಬಂದಿತ್ತು.
ಈ ಹಿನ್ನೆಲೆಯಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಆಗಮಿಸಿದ ದೂರುದಾರರು, ನನಗೆ ತಿಳಿಯದಂತೆ ನನ್ನ ಸಹೋದ್ಯೋಗಿಯು ನನ್ನ ಮೊಬೈಲ್‌ನಲ್ಲಿ ಆ್ಯಪ್ ಒಂದನ್ನು ಇನ್‌ಸ್ಟಾಲ್ ಮಾಡಿದ್ದರು. ಅದರ ಮೂಲಕ ನನ್ನ ಮೊಬೈಲ್ ಅನ್ನು ಹ್ಯಾಕ್ ಮಾಡಿ, ನನ್ನ ಖಾತೆಯಿಂದ 98 ಸಾವಿರ ರೂಪಾಯಿ ವರ್ಗಾವಣೆಯಾಗುವಂತೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸದ್ಯ ಈ ಕುರಿತು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆರೋಪಿಸಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Bhadravati Cyber Crime Man Loses Rs 98,000

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor