ಮೇ 08, 2026: ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗ! ಅಚ್ಚರಿಯ ಸಂಗತಿಗಳಿವೆ

ಹಂಚಿಕೊಳ್ಳಿ
WhatsApp Facebook X Telegram
ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
Panchanga and Daily Horoscope February 25, 2026 | February 25, 2026 ರ ಇಂದಿನ ಪಂಚಾಂಗ, ರಾಹುಕಾಲ, ಶುಭ ಮುಹೂರ್ತ ಮತ್ತು 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ Daily Horoscope

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಷಷ್ಠಿ ತಿಥಿಯು ಬೆಳಿಗ್ಗೆ 8.20ರವರೆಗೆ ಇದ್ದು, ತದನಂತರ ಸಪ್ತಮಿ ಇರಲಿದೆ. ಉತ್ತರಾಷಾಢ ನಕ್ಷತ್ರ ಸಂಜೆ 5.36ರವರೆಗೆ ಇದ್ದು, ಆ ಬಳಿಕ ಶ್ರವಣ ನಕ್ಷತ್ರ ಆರಂಭವಾಗಲಿದೆ. ಬೆಳಿಗ್ಗೆ 10.30ರಿಂದ 12.00ರವರೆಗೆ ರಾಹುಕಾಲ, ಮಧ್ಯಾಹ್ನ 3.00ರಿಂದ 4.30ರವರೆಗೆ ಯಮಗಂಡ ಕಾಲವಿರಲಿದೆ.

ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗ

ಮೇಷ / ರಾಶಿಯವರಿಗೆ ಉದ್ಯೋಗ ಪ್ರಯತ್ನಗಳಲ್ಲಿ ಮುನ್ನಡೆ , ಕೆಲಸ ಯಶಸ್ವಿಯಾಗಿ ಸಾಗಲಿವೆ, ಹೆಚ್ಚುವರಿ ಆದಾಯ ಹರಿದುಬರಲಿದೆ, ವ್ಯಾಪಾರ ವಹಿವಾಟುಗಳಲ್ಲಿ ಲಾಭ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿವೆ.

ವೃಷಭ / ವೈಮನಸ್ಯ ಉಂಟಾಗಬಹುದು, ಕೆಲಸದಲ್ಲಿ ಅಡೆತಡೆಗಳು, ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ, ಅನಾರೋಗ್ಯ, ಉದ್ಯೋಗದಲ್ಲಿ ಬದಲಾವಣೆ ಹಾಗೂ ವ್ಯಾಪಾರದಲ್ಲಿ ಸಮಸ್ಯೆ ತಲೆದೋರಲಿವೆ.

ಮಿಥುನ / ದೂರ ಪ್ರಯಾಣ, ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳುವುದು ಒಳಿತು, ಆಪ್ತರೊಂದಿಗೆ ಭಿನ್ನಾಭಿಪ್ರಾಯ, ವ್ಯಾಪಾರ ವಿಸ್ತರಣೆಯ ಪ್ರಯತ್ನಗಳಿಗೆ ವಿಘ್ನ ಹಾಗೂ ಉದ್ಯೋಗದಲ್ಲಿ ವರ್ಗಾವಣೆ.

ಕಟಕ / ಹೊಸ ವ್ಯಕ್ತಿಗಳ ಪರಿಚಯ, ಆಲೋಚನೆಗಳನ್ನು ಕಾರ್ಯಗತಗೊಳಿಸುವಿರಿ, ಯಾವುದೋ ಒಂದು ಪ್ರಕಟಣೆ ನಿಮ್ಮ ಗಮನ ಸೆಳೆಯಲಿದ್ದು, ವಾಹನ ಹಾಗೂ ಜಾಗ ಖರೀದಿ, ವ್ಯಾಪಾರದಲ್ಲಿ ಪ್ರಗತಿ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣವಿರಲಿದೆ.

ಸಿಂಹ / ಹೊಸ ಉತ್ಸಾಹ ಕಂಡುಬರಲಿದ್ದು, ಆರ್ಥಿಕ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿವೆ, ಆತ್ಮೀಯರೊಂದಿಗೆ ಕಷ್ಟಸುಖಗಳನ್ನು ಹಂಚಿಕೊಳ್ಳುವಿರಿ, ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ, ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಕನ್ಯಾ / ಆರ್ಥಿಕ ಮುಗ್ಗಟ್ಟು , ಅನಿರೀಕ್ಷಿತ ಪ್ರಯಾಣ, ಆರೋಗ್ಯ ಸಮಸ್ಯೆಗಳು ಬಾಧಿಸಲಿವೆ, ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ , ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ.

ತುಲಾ / ಕುಟುಂಬದ ಸದಸ್ಯರೊಂದಿಗೆ ವಿವಾದ, ಆದಾಯ ಕಡಿಮೆ, ಕೆಲಸಗಳು ಮುಂದುವರೆಯದೆ ಶ್ರಮ ಹೆಚ್ಚಾಗಲಿದ್ದು, ಪಾಲುದಾರಿಕೆ ವ್ಯಾಪಾರದಲ್ಲಿ ಹಿನ್ನಡೆ ಹಾಗೂ ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗಲಿವೆ.

ವೃಶ್ಚಿಕ / ಕೆಲಸಗಳು ಪ್ರಗತಿಯತ್ತ ಸಾಗಲಿದ್ದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ, ವಸ್ತು ಲಾಭ, ಆದಾಯವು ತೃಪ್ತಿದಾಯಕವಾಗಿರಲಿದೆ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಲಭಿಸಲಿದೆ.

ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗ

ಧನುಸ್ಸು / ವ್ಯವಹಾರಗಳಲ್ಲಿ ಅಡೆತಡೆ , ಕಿರಿಕಿರಿ ಜಗಳವಾಗುವ ಸಾಧ್ಯತೆಯಿದೆ, ಅನಾರೋಗ್ಯ , ವ್ಯಾಪಾರದಲ್ಲಿ ಕಿರಿಕಿರಿ ಹಾಗೂ ಉದ್ಯೋಗದಲ್ಲಿ ಹಠಾತ್ ಬದಲಾವಣೆ.

ಮಕರ / ಕೆಲಸಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿದ್ದು, ವಿವಾದ ಬಗೆಹರಿದು ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ, ಆಕಸ್ಮಿಕ ಧನ ಲಾಭ, ವ್ಯಾಪಾರದಲ್ಲಿ ಉತ್ತಮ ಲಾಭದೊಂದಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ

ಕುಂಭ / ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗಲಿದ್ದು, ಆಪ್ತರೊಂದಿಗೆ ಜಗಳ ಹಾಗೂ ಅನಾರೋಗ್ಯ ಕಾಡಲಿದೆ, ವ್ಯಾಪಾರವು ಸಾಧಾರಣವಾಗಿದ್ದು, ಉದ್ಯೋಗದಲ್ಲಿ ಕೊಂಚ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ.

ಮೀನ / ಕಷ್ಟಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದ್ದು, ಆರಂಭಿಸಿದ ಕೆಲಸಗಳು ಸುಸೂತ್ರವಾಗಿ ಸಾಗಲಿವೆ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ, ಹೊಸ ವ್ಯಾಪಾರ ಪ್ರಾರಂಭಿಸುವ ಯೋಗದೊಂದಿಗೆ ಉದ್ಯೋಗಿಗಳಿಗೆ ಉನ್ನತ ಹುದ್ದೆ ಒಲಿಯಲಿವೆ.

ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗ
  ಮೇ 08, 2026: ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗWhat are the astrological predictions and Panchangam details for all 12 zodiac signs on May 08, 2026?

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor