ಲಾಭಾಂಶದ ಆಸೆಗೆ ಬರೋಬ್ಬರಿ 53 ಲಕ್ಷ ಕಳೆದುಕೊಂಡ ಶಿವಮೊಗ್ಗ ವ್ಯಕ್ತಿ, ನಡೆದಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Without Taking Loan
Without Taking Loan

ಶಿವಮೊಗ್ಗ: ಹೆಚ್ಚಿನ ಲಾಭದ ಆಸೆ ತೋರಿಸಿ ಮೊಬೈಲ್ ಆ್ಯಪ್ ಮೂಲಕ ಹೂಡಿಕೆ ಮಾಡಿಸಿಕೊಂಡು, ಸಾರ್ವಜನಿಕರನ್ನು ವಂಚಿಸುತ್ತಿರುವ ಸೈಬರ್ ಜಾಲಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 53.10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ: ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು

ಘಟನೆಯ ವಿವರ 

ದೂರುದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್ ಮೂಲಕ ಮೆಸೇಜ್​  ಕಳುಹಿಸಿ, ಪ್ರೊಸ್ಟಾಕ್ ಎಂಬ ಟ್ರೇಡಿಂಗ್ ಕಂಪನಿಯ ಅಪ್ಲಿಕೇಶನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಇದನ್ನು ಸತ್ಯವೆಂದು ನಂಬಿದ ಸಂತ್ರಸ್ತರು, ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು 53,10,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. 

ಮೋಸ ಹೋಗಿದ್ದು ಹೇಗೆ? 

ಹಣ ಹೂಡಿಕೆ ಮಾಡಿದ ನಂತರ ಸಂತ್ರಸ್ತರು ತಮ್ಮ ಲಾಭಾಂಶ ಮತ್ತು ಅಸಲನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ಎರಡು-ಮೂರು ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಆದರೆ, ಕೆಲವು ದಿನಗಳ ನಂತರ ‘ಪ್ರೊಸ್ಟಾಕ್’ ಆ್ಯಪ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಅನುಮಾನಗೊಂಡ ದೂರುದಾರರು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. 

ಈ  ಸಂಬಂಧ ದೂರುದಾರರು ಶಿವಮೊಗ್ಗದ ಸೈಬರ್​  ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. 

Trading App Scam Man Loses 53 Lakhs

Trading App Scam PMEGP Loan Scam Cyber Fraud in Shimoga ThirthahalliCyber crime today
Trading App Scam

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor