ಶಿವಮೊಗ್ಗದಲ್ಲಿ ಬೃಹತ್​​ ಕಳ್ಳತನ, ಬೀಗ ಹಾಕಿದ್ದ ಮನೆಯಿಂದ 60 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಲೂಟಿ

ಹಂಚಿಕೊಳ್ಳಿ
WhatsApp Facebook X Telegram
Shivamogga Crime Shivamogga Crime Shopkeeper Shivamogga Crime Bolero Pick Up Shimoga House Robbery Cloth Merchant Gold Coin Scam Shimoga Cow Theft Major thjeft case in Shivamogga Srirampura 4.2 Lakh Worth Gold and Cash Stolen in tunga nagara police station
Shivamogga Crime Shivamogga Crime Shopkeeper Shivamogga Crime Bolero Pick Up Shimoga House Robbery Cloth Merchant Gold Coin Scam Shimoga Cow Theft Burglary in Shivamogga Areca Nut Theft

ಶಿವಮೊಗ್ಗ | ನಗರದ ಚಾಲುಕ್ಯನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಮ್ಯಾನೇಜರ್ ಒಬ್ಬರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.  ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಶಿವಮೊಗ್ಗ : ಬಟ್ಟೆ ವ್ಯಾಪಾರಿಗೆ ಲಾಂಗ್ ತೋರಿಸಿ ಹಣ ಸುಲಿಗೆ, ಪ್ರಕರಣ ದಾಖಲು

ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಯ ದೇವರ ಕಾರ್ಯಕ್ರಮಕ್ಕಾಗಿ ಏಪ್ರಿಲ್ 17 ರಂದು  ಮನೆಯ ಮಾಲೀಕರು ಕುಟುಂಬ ಸಮೇತ ತೆರಳಿದ್ದರು. ಏಪ್ರಿಲ್ 20ರಂದು ರಾತ್ರಿ ಅವರು ಶಿವಮೊಗ್ಗಕ್ಕೆ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಮನೆಯ ಹಿಂಭಾಗದ ಮರದ ಬಾಗಿಲು ಮತ್ತು ಕಬ್ಬಿಣದ ಗೇಟ್ ಅನ್ನು ಆಯುಧಗಳಿಂದ ಮೀಟಿ ಮುರಿದಿದ್ದ ಕಳ್ಳರು, ಬೆಡ್ ರೂಂನ ಸೇಫ್ಟಿ ಲಾಕರ್‌ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. 

ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಏಪ್ರಿಲ್ 20ರ ಬೆಳಗಿನ ಜಾವ ಮೂವರು ಖದೀಮರು ಮನೆಗೆ ನುಗ್ಗಿರುವುದು ಕಂಡುಬಂದಿದೆ. ಒಟ್ಟು 349 ಗ್ರಾಂ ತೂಕದ ಚಿನ್ನದ ಸರಗಳು, ವಜ್ರದ ಓಲೆಗಳು, ಬಳೆಗಳು ಸೇರಿದಂತೆ ಸುಮಾರು 52.35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 4.9 ಕೆಜಿ ತೂಕದ ಸುಮಾರು 7.35 ಲಕ್ಷ ಮೌಲ್ಯದ ಬೆಳ್ಳಿ ಸಾಮಾನುಗಳು ಕಳ್ಳತನವಾಗಿವೆ ಎಂದು ಅಂದಾಜಿಸಲಾಗಿದೆ. 

ಒಟ್ಟು 59.70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿರುವ ಮಾಲೀಕರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Shimoga House Robbery Jewelry Worth Lakhs Gone

Shimoga House Robbery Cloth Merchant Gold Coin Scam Shimoga Cow Theft Major thjeft case in Shivamogga Srirampura 4.2 Lakh Worth Gold and Cash Stolen in tunga nagara police station
Shimoga House Robbery
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor