ಬೆಂಗಳೂರು : ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು (SOP) ಪ್ರಕಟಿಸಿದೆ. ಕಾಡಿನ ಹಾದಿಯಲ್ಲಿ ಚಾರಣಿಗರು ದಾರಿ ತಪ್ಪುವುದನ್ನು ತಡೆಯಲು ಮತ್ತು ತುರ್ತು ಸಂದರ್ಭದಲ್ಲಿ ನೆರವು ನೀಡಲು ಮೊಬೈಲ್ನಲ್ಲಿ ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ ಹಾಗೂ ಮಾರ್ಗದರ್ಶಕರ (Guide) ಸಾಥ್ ಇರುವುದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಡ್ಡಾಯಗೊಳಿಸಿದ್ದಾರೆ.
ಶಿವಮೊಗ್ಗದಲ್ಲಿ ಶರಾವತಿ ಕಿಚ್ಚು, ನೂರಾರು ವಾಹನಗಳ ಬೃಹತ್ ಜಾತ; ಸರ್ಕಾರಕ್ಕೆ ಈಶ್ವರಪ್ಪ ನೀಡಿದ ಎಚ್ಚರಿಕೆ ಏನು?
ಹೊಸ ನಿಯಮದ ಪ್ರಕಾರ, ಅನುಮೋದಿತ ಚಾರಣ ಪಥಗಳಲ್ಲಿ ಅರಣ್ಯ ಇಲಾಖೆಯ ನೇಚರ್ ಗೈಡ್ಗಳಿಲ್ಲದೆ ಪ್ರವೇಶಿಸುವಂತಿಲ್ಲ. ಪ್ರತಿ 10 ಚಾರಣಿಗರ ತಂಡಕ್ಕೆ ಒಬ್ಬರು ಗೈಡ್ ಇರುವುದು ಕಡ್ಡಾಯ. ಅಲ್ಲದೆ, ಪರಿಸರ ಸಮತೋಲನ ಕಾಯ್ದುಕೊಳ್ಳಲು ಒಂದು ಪಥದಲ್ಲಿ ಏಕಕಾಲಕ್ಕೆ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ ಸೀಮಿತಗೊಳಿಸಲಾಗಿದೆ. ಪ್ರತಿಯೊಬ್ಬ ಚಾರಣಿಗನೂ ಜಿಪಿಎಸ್ ಆಧಾರಿತ ಆ್ಯಪ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಚಾರಣದ ಉದ್ದಕ್ಕೂ ಸಂವಹನ ವ್ಯವಸ್ಥೆಯನ್ನು ಬಲಪಡಿಸಲು ವಾಕಿಟಾಕಿ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಚಾರಣಿಗರ ಜೊತೆಗಿರುವ ಗೈಡ್ಗಳು ಬೇಸ್ ಕ್ಯಾಂಪ್ ಅಥವಾ ವಿಶ್ರಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರ ಎಣಿಕೆ ಮಾಡಬೇಕು. ಪ್ರತಿ ಅರ್ಧ ಗಂಟೆಗೊಮ್ಮೆ ವಾಕಿಟಾಕಿ ಮೂಲಕ ಬೇಸ್ ಕ್ಯಾಂಪ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಸಂವಹನ ಸ್ಥಗಿತಗೊಂಡರೆ ಕೂಡಲೇ ಬೇಸ್ ಕ್ಯಾಂಪ್ ಸಿಬ್ಬಂದಿಯೇ ಸಂಪರ್ಕಿಸಿ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಎಸ್ಒಪಿ ಬಿಡುಗಡೆ ಮಾಡಿದ್ದು, ಸಾಹಸ ಪ್ರವೃತ್ತಿಯ ಚಾರಣಿಗರು ಯಾವುದೇ ಅನಾಹುತಕ್ಕೆ ಒಳಗಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದ್ದಾರೆ. ಈ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಅರಣ್ಯ ಇಲಾಖೆಯ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳುವಾಗಲೇ ಈ ಕುರಿತು ಮಾಹಿತಿ ಒದಗಿಸಲಾಗುತ್ತದೆ.
New Trekking Rules GPS App and Guide Mandatory


New Trekking Rules GPS App and Guide Mandatory
