KS Eshwarappa Warns ಶಿವಮೊಗ್ಗ : ಶರಾವತಿ ಪಂಪ್ಟ್ ಸ್ಟೋರೇಜ್ ವಿರುದ್ದದ ಆರಂಭದ ಹೋರಾಟ ಇದಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳು ಶಿವಮೊಗ್ಗಕ್ಕೆ ಬಂದರೆ ಅವರನ್ನು ಮುತ್ತಿಗೆ ಹಾಕಲಾಗುತ್ತದೆ ಎಂದು ಮಾಜಿ ಡಿಸಿಎಂಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದರು.
ಶಿವಮೊಗ್ಗ: ಏಪ್ರಿಲ್ 18 ರಂದು ನಗರದ ಹಲವು ಬಡಾವಣೆಗಳಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯ
ಇಂದು ಶಿವಮೊಗ್ಗದಲ್ಲಿ ಶರಾವತಿ ಪಂಪ್ಟ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ರಾಷ್ಟ್ರ ಭಕ್ತ ಬಳಗ ಪರಿಸರಕ್ಕಾಗಿ ನಾವು ರಾಜ್ಯ ಸಂಘಟನೆ ಸೇರಿದಂತೆ ಹಲವಾರು ಸಂಘಟನೆಗಳು ಬೃಹತ್ ವಾಹನ ಜಾತವನ್ನು ಹಮ್ಮಿಕೊಂಡಿದ್ದವರು. ಬೆಳಿಗ್ಗೆ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಆರಭವಾದ ಈ ಜಾತದಲ್ಲಿ ಅಂದಾಜು 400 ಬೈಕ್, ಕಾರು ಹಾಗೆಯೇ ನೂರಾರು ಸೈಕಲ್ ಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದವು. ವಿನೋಬಾನಗರ ಮುಖ್ಯ ರಸ್ತೆಯ ಮೂಲಕ ಹೊರಟ ಈ ಜಾತ ನೆಹರು ರಸ್ತೆಯ ಮೂಲಕ ತಲುಪಿ ಕೊನೆಗೆ ಮಹಾವೀರಾ ವೃತ್ತದಲ್ಲಿ ಬೃಹತ್ ಬಹಿರಂಗ ಸಭೆಯ ಮೂಲಕ ಸಂತ್ಯಗೊಂಡಿತು.
ಸಭೆಯನ್ನು ಉದ್ದೇಶಿಸಿ ಕೆ ಎಸ್ ಈಶ್ವರಪ್ಪ ಮಾತನಾಡಿ ಇದು ಕೇವಲ ಆರಂಭವಷ್ಟೇ, ನಾವು ಯಾರಿಗೂ ತೊಂದರೆ ಕೊಡಲು ಹೊರಟಿಲ್ಲ. ಆದರೆ, ರಾಜ್ಯ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಸರ್ಕಾರ ಇದಕ್ಕೆ ಗಮನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಇನ್ನು ಮುಂದೆ ರಾಜ್ಯ ಸರ್ಕಾರದ ಮಂತ್ರಿಗಳು ಯಾರೇ ಶಿವಮೊಗ್ಗಕ್ಕೆ ಬಂದರೂ ಅವರಿಗೆ ಮುತ್ತಿಗೆ ಹಾಕಲಾಗುವುದು.
ಯೋಜನೆಗಾಗಿ 17 ಸಾವಿರ ಮರಗಳನ್ನು ಕಡಿಯುವುದರಿಂದ ಹವಾಮಾನ ವೈಪರೀತ್ಯ ಉಂಟಾಗಿ ಬಿಸಿಲು ಜಾಸ್ತಿಯಾಗುತ್ತದೆ. ಈ ಯೋಜನೆಯಿಂದಾಗುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಾರಿ ತಪ್ಪಿಸಿದವರು ಯಾರು ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಇದರ ಬಗ್ಗೆ ತಿಳಿದುಕೊಂಡು ಪ್ರಧಾನ ಮಂತ್ರಿಗಳಿಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಈಗ ನಾವು ಎಲ್ಲಾ ಸ್ವಾಮೀಜಿಗಳೊಂದಿಗೆ ಸೇರಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಯೋಜನೆ ನಿಲ್ಲಿಸಲು ಒತ್ತಾಯಿಸುತ್ತೇವೆ.
KS Eshwarappa Warns ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು ಎಂಬ ಬಗ್ಗೆ ಚರ್ಚಿಸಲು ಏಪ್ರಿಲ್ 22ರಂದು ಮತ್ತೊಂದು ವಿಶೇಷ ಸಭೆ ಕರೆದಿದ್ದೇವೆ. ಅಲ್ಲಿ ಮುಂದಿನ ಹೋರಾಟದ ಹಾದಿ ನಿರ್ಧಾರವಾಗಲಿದೆ. ಇಡೀ ಶಿವಮೊಗ್ಗ ಜಿಲ್ಲೆಯ ಜನತೆ ನಮ್ಮೊಂದಿಗಿದ್ದಾರೆ” ಎಂದು ಈಶ್ವರಪ್ಪ ಗುಡುಗಿದರು.
ಸಭೆ ಮುಗಿದ ಬಳಿಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬೃಹತ್ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿರುವಂತೆ ಈ ಯೋಜನೆಯಿಂದ ಪಶ್ಚಿಮ ಘಟ್ಟದ 16,000ಕ್ಕೂ ಹೆಚ್ಚು ಮರಗಳನ್ನು ಕಡಿಯುವುದರಿಂದ ಹವಾಮಾನ ವೈಪರೀತ್ಯ ಉಂಟಾಗುತ್ತದೆ. 18,000 ಟನ್ ಸ್ಫೋಟಕ ಬಳಸಿ ಭೂಗತ ಬಂಡೆಗಳನ್ನು ಒಡೆಯುವುದರಿಂದ ಪರಿಸರ ನಾಶವಾಗುವುದಲ್ಲದೆ, ಈ ಪ್ರದೇಶವು ಭೂಕಂಪ ಪೀಡಿತವಾಗುವ ಸಾಧ್ಯತೆ ಇದೆ ಎಂದು ತಜ್ಞರ ವರದಿಯನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕದಂತಹ ವನ್ಯಜೀವಿಗಳ ಆವಾಸಸ್ಥಾನಕ್ಕೆ ಇದರಿಂದ ಧಕ್ಕೆ ಬರಲಿದ್ದು, ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ಹಾನಿಯಾಗುವ ಭೀತಿ ಇದೆ. ಅಲ್ಲದೆ, ಇದು ಆರ್ಥಿಕವಾಗಿಯೂ ಲಾಭದಾಯಕವಲ್ಲದ ಯೋಜನೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
KS Eshwarappa Warns to Gherao Ministers


