ಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR

ಹಂಚಿಕೊಳ್ಳಿ
WhatsApp Facebook X Telegram
techie Ready for Third Marriage Booked for Dowry Harassment and Cheating in Jiganiಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR
techie Ready for Third Marriage Booked for Dowry Harassment and Cheating in Jiganiಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR

ಅದಾಗಲೇ ಎರಡು ಮದುವೆಯಾಗಿದ್ದಷ್ಟೆ ಅಲ್ಲದೆ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಯುವಕನ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಎರಡನೇ ಹೆಂಡತಿ ನೀಡಿದ ದೂರಿನ ಮೇರೆಗೆ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ತುಮಕೂರು ಮೂಲದ ರವಿ ಹಾಗೂ ಆತನ ಕುಟುಂಬದ 9 ಜನರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಮಹಿಳೆಯರಿಗೆ ವಂಚನೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆರೋಪಿ ರವಿ ತಲೆಮರೆಸಿಕೊಂಡಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ ನಿಶ್ಚಿತಾರ್ಥಕ್ಕೆ ಸಿದ್ದತೆ

ಈಗಾಗಲೇ ಇಬ್ಬರನ್ನು ವರಿಸಿದ್ದ ಆರೋಪಿ ರವಿ, ನಿನ್ನೆ ದಿನ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಯುವತಿಯೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದರಲ್ಲಿದ್ದ. ಈ ವಿಚಾರ ಎರಡನೇ ಪತ್ನಿಗೆ ಗೊತ್ತಾಗಿದೆ. ಹಾಗಾಗಿ ತಕ್ಷಣವೇ ಜಿಗಣಿ ಠಾಣೆಯ ಮೆಟ್ಟಿಲೇರಿದ್ದಾರೆ.

ಆರೋಪಿ ರವಿ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ ಹಾಗೂ ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಐಪಿಸಿ ಸೆಕ್ಷನ್ 351, 358(4), 115(2), 352(2), 89, 85, 880 ಹಾಗೂ 50ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

techie Ready for Third Marriage Booked for Dowry Harassment and Cheating in Jiganiಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR
techie Ready for Third Marriage Booked for Dowry Harassment and Cheating in Jigani ಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor