ಡಿ-ಗ್ರೂಪ್ ನೌಕರನ ಪುತ್ರಿಯ ಶೈಕ್ಷಣಿಕ ಸಾಧನೆಗೆ ಜಿಲ್ಲಾಧಿಕಾರಿಗಳ ಭೇಷ್!

Shimoga DC ಶಿವಮೊಗ್ಗ: ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಕೀರ್ತಿ ಎಸ್ ರವರ ಸಂತೋಷಕ್ಕೆ ಪಾರವೇ ಇರಲಿಲ್ಲ. ನಿನ್ನೆಯ ದಿನ ಅವರ ಜೀವನದಲ್ಲಿ ಅದು ಅವಿಸ್ಮರಣೀಯ ದಿನಗಳಲ್ಲಿ ಒಂದು ಎಂದೇ ಹೇಳಬಹುದು. ಅದಕ್ಕೆ ಕಾರಣವಾಗಿದ್ದು ಅವರ ಮಗಳು ನೇಹಾ ಕೆ. ಅವರ ಅದ್ವಿತೀಯ ಶೈಕ್ಷಣಿಕ ಸಾಧನೆ .

ಶಿವಮೊಗ್ಗದ ಸೂಗೂರಿನಲ್ಲಿ ಆರು ಕಾಲುಗಳ ಕರುವಿನ ಜನನ!

ಹೌದು, ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರೂಪ್-ಡಿ ನೌಕರರಾಗಿರುವ ಕೀರ್ತಿ ಎಸ್ ರವರ ಮಗಳು ನೇಹಾ ಕೆ ಅವರು ಕಲಾ ವಿಭಾಗದಲ್ಲಿ 600 ಅಂಕಗಳಿಗೆ 576 ಗಳಿಸಿ ಜಿಲ್ಲೆಯ ಗಮನ ಸೆಳೆದಿದ್ದಾರೆ. ನಗರದ ಡಿವಿಎಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದ ಈ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಪೋಷಕರು ಪಡುವ ಕಷ್ಟಕ್ಕೆ ಮಗಳು ಸಾರ್ಥಕ ಪ್ರತಿಫಲ ನೀಡಿದ್ದಾಳೆ. ಮಕ್ಕಳು ಶೈಕ್ಷಣಿಕವಾಗಿ ಇಂತಹ ಎತ್ತರಕ್ಕೆ ಬೆಳೆದಾಗ ತಂದೆ-ತಾಯಿಯರ ಸಂತೋಷಕ್ಕೆ ಪಾರವೇ ಇರುವುದಿಲ್ಲ, ಎಂದು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. 

ನೇಹಾರವರ ತಂದೆ ಕೀರ್ತಿ ಎಸ್ ಮಾತನಾಡಿ, ನನ್ನ ಮಗಳು ಇಷ್ಟು ದೊಡ್ಡ ಸಾಧನೆ ಮಾಡಿದ್ದು ತುಂಬಾ ಖುಷಿ ತಂದಿದೆ. ಅವಳು ಮುಂದಿನ ದಿನಗಳಲ್ಲಿ ಏನನ್ನು ಓದುತ್ತಾಳೋ ಅದನ್ನು ಓದಿಸುತ್ತೇವೆ, ಎಂದು ತಿಳಿಸಿದರು.

ಇನ್ನು ಶಿವಮೊಗ್ಗ ಜಿಲ್ಲೆಯ ಈ ಬಾರಿಯ ಫಲಿತಾಂಶದತ್ತ ನೋಡುವುದಾದರೆ, ಜಿಲ್ಲೆಯು ಒಟ್ಟಾರೆ ಶೇ. 87.62 ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 14ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ಶೇ. 79.91 ರಷ್ಟು ಫಲಿತಾಂಶದೊಂದಿಗೆ 7ನೇ ಸ್ಥಾನದಲ್ಲಿದ್ದ ಜಿಲ್ಲೆಯು, ಈ ಬಾರಿ ಶೇ. 7.71 ರಷ್ಟು ಫಲಿತಾಂಶ ಸುಧಾರಣೆ ಕಂಡಿದ್ದರೂ, ಜಿಲ್ಲಾವಾರು ಪಟ್ಟಿಯಲ್ಲಿ 7 ಸ್ಥಾನ ಕುಸಿತ ಕಂಡಿದೆ. ಈ ಬಾರಿ 17,532 ಅಭ್ಯರ್ಥಿಗಳ ಪೈಕಿ 15,361 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ 

ವಿಭಾಗವಾರು ನೋಡುವುದಾದರೆ, ವಿಜ್ಞಾನ ವಿಭಾಗವು ಶೇ. 93.66 ರಷ್ಟು ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿದೆ. ವಾಣಿಜ್ಯ ವಿಭಾಗದಲ್ಲಿ ಶೇ. 87.62 ರಷ್ಟು ಹಾಗೂ ಕಲಾ ವಿಭಾಗದಲ್ಲಿ ಶೇ. 74.26 ರಷ್ಟು ಫಲಿತಾಂಶ ದಾಖಲಾಗಿದೆ. 

Shimoga DC Honors PUC Topper Neha

Shimoga DC Honors PUC Topper Neha
Shimoga DC Honors PUC Topper Neha
shivamogga car decor sun control house
shivamogga car decor sun control house