ಗುಡ್​​ ಪ್ರೈಡೇ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ : ನೂರಾರು ಭಕ್ತರಿಗೆ ಕಡಿದ ಹೆಜ್ಜೇನು

ಶಿವಮೊಗ್ಗ :  ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ನೂರಾರು ಭಕ್ತರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಇಂದು ಗುಡ್​ ಪ್ರೈಡೇ ಹಬ್ಬದ ಪರಿಣಾಮ ಶಿವಮೊಗ್ಗ ಸಕ್ರೇಡ್​ ಹಾರ್ಟ್​ ಚರ್ಚ್​ನಲ್ಲಿ  ಶಿಲುಬೆ ಹಾದಿ ಹಮ್ಮಿಕೊಳ್ಳಲಾಗಿತ್ತು  ಈ ವೇಳೆ ಸಾವಿರಾರು ಜನ ಭಕ್ತರು ಚರ್ಚನ ಆವರಣದಲ್ಲಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ದಾಳಿ ನಡೆದಿದೆ. ನೂರಾರು ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದರಿಂದ ಜನರು ಭಯಭೀತರಾದರು.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ 

ಹೆಜ್ಜೇನು ದಾಳಿಯಿಂದ ಪಾರಾಗಲು ಚರ್ಚ್​ನ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಅಷ್ಟರಲ್ಲಾಗಲೇ ನೂರಾರು ಜನರಿಗೆ ಹೆಜ್ಜೇನು ದಾಳಿ ಮಾಡಿತ್ತು. ಹೆಜ್ಜೇನು ದಾಳಿಗೆ ಒಳಗಾದವರನ್ನು ಆ್ಯಂಬುಲೆನ್ಸ್​ ಮೂಲಕ ಚರ್ಚ್​​​ನ ಸಮೀಪವಿರುವ ಅಶೋಕ ಸಂಜೀವಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಹೊಗೆ ಹಾಕುವ ಮೂಲಕ ಹೆಜ್ಜೇನು ಓಡಿಸುವ ಪ್ರಯತ್ನ ಮಾಡಲಾಯಿತು. ಚರ್ಚ್​​ನ ಫಾದರ್​​​ಗೂ ಹೆಜ್ಜೇನು ದಾಳಿ ಮಾಡಿವೆ.

ಕಳೆದ ಕೆಲ ದಿನಗಳ ಹಿಂದೆ ಚರ್ಚ್​​​ನ ಆವರಣದಲ್ಲಿರುವ ಮರಗಳಲ್ಲಿ ಹೆಜ್ಜೇನು ಗೂಡು ಕಟ್ಟಿದ್ದವು. ಆದರೆ ಹಬ್ಬದ ಹಿನ್ನಲೆಯಲ್ಲಿ ಗೂಡುಗಳನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ,  ಹೆಜ್ಜೆನು ದಾಳಿಯ ಹಿನ್ನೆಲೆಯಲ್ಲಿ ಶಿಲುಬೆ ಹಾದಿ  ಅರ್ಧಕ್ಕೆ ನಿಂತಿತು. ಹೆಜ್ಜೇನು ದಾಳಿಗೆ ಒಳಗಾದರೂ ಸಹ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.

Honeybee Attack at Sacred Heart Church Shimoga

Honeybee Attack at Sacred Heart Church Shimoga
Honeybee Attack at Sacred Heart Church Shimoga