ಶಿವಮೊಗ್ಗದಲ್ಲಿ ಸರಣಿ ಘಟನೆಗಳು! ಬಸ್​ ಅಡಿಗೆ ಬಿದ್ದು ಮಗು ಸಾವು, ಆಟೋ, ಕಾರಿಗೆ ಗುದ್ದಿದ KSRTC, ಸಾಗರದಲ್ಲಿ ಕಾರಿಗೆ ಬೆಂಕಿ

Major serial incident in Shivamogga / ಶಿವಮೊಗ್ಗ / ಜಿಲ್ಲೆಯಲ್ಲಿ ನಿನ್ನೆ ದಿನ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಕಾರೊಂದು ಬೆಂಕಿಗೆ ತುತ್ತಾಗಿರುವುದರ ಬಗ್ಗೆ ವರದಿಯಾಗಿದೆ. ಇತ್ತ ಸಿಟಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ನಡೆದ ಘಟನೆಗಳ ವಿವರ ಹೀಗಿದೆ. 

Major serial incident in Shivamogga
Major serial incident in Shivamogga

ಸಿಟಿಯಲ್ಲಿ ಸರಣಿ ಅಪಘಾತ

ಶಿವಮೊಗ್ಗ ನಗರದ ಬಿಎಚ್ ರಸ್ತೆಯ ಅಶೋಕ ವೃತ್ತದ ಬಳಿ ಮಂಗಳವಾರ ಬೆಳಿಗ್ಗೆ ಕೆಎಸ್ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದದಾಗಿ 

ಚಾಲನೆಯಿಂದಾಗಿ ಸರಣಿ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ವೇಳೆ ಎಎ ವೃತ್ತದ ಕಡೆಯಿಂದ ವೇಗವಾಗಿ ಬಂದ ಕೆಎಸ್ಆರ್‌ಟಿಸಿ ಬಸ್ ಮೊದಲು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಆಟೋವನ್ನು ತಳ್ಳಿಕೊಂಡು ಹೋದ ಬಸ್, ಮುಂದೆ ನಿಂತಿದ್ದ ಕಿಯಾ ಕಾರು ಹಾಗೂ ಶಾಲಾ ಬಸ್‌ಗೆ ಡಿಕ್ಕಿ ಹೊಡೆದಿದೆ. ಎರಡು ವಾಹನಗಳ ನಡುವೆ ಸಿಲುಕಿದ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ರಾಜು ಅವರಿಗೆ ಎಡಗೈ, ಎಡಗಾಲು, ಸೊಂಟ ಹಾಗೂ ಎದೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನೂ ಘಟನೆ ಸಂಬಂಧ ಕೆಎಸ್ಆರ್‌ಟಿಸಿ ಬಸ್ ಚಾಲಕ ದೇವರಾಜ್ ವಿರುದ್ಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಗು ಸಾವು

ಇನ್ನೊಂದು ದಾರುಣ ಘಟನೆಯಲ್ಲಿ, ನಗರದ ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಬಳಿ ಶಾಲಾ ಬಸ್ ಹರಿದು ಒಂದೂವರೆ ವರ್ಷದ ಮಗು ಆರ್ಯನ್ ಸಾವನ್ನಪ್ಪಿದೆ. ಮನೆಯ ಕೆಲಸದಾಕೆಯು ಮಗುವಿನ ಅಣ್ಣನನ್ನು ಸ್ಕೂಲ್ ಬಸ್‌ನಿಂದ ಇಳಿಸಿಕೊಳ್ಳಲು ಹೋಗಿದ್ದಾಗ, ಆಕೆಯ ಹಿಂದೆಯೇ ಓಡಿ ಬಂದ ಮಗು ಆರ್ಯನ್ ಬಸ್‌ನ ಮುಂಭಾಗದ ಚಕ್ರಕ್ಕೆ ಸಿಲುಕಿದೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದು, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Shivamogga Malenadu Today
Major serial incident in Shivamogga

ಸಾಗರ ಆಸ್ಪತ್ರೆಯಲ್ಲಿ ಕಾರಿಗೆ ಬೆಂಕಿ

ಸಾಗರದ ತಾಯಿ ಮಗು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆರೋಗ್ಯ ಇಲಾಖೆಯ ಗುತ್ತಿಗೆ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಮುಂಭಾಗ ಸಂಪೂರ್ಣ ಭಸ್ಮವಾಗಿದೆ. ಹಂದಿಗೋಡು ಕಾಯಿಲೆ ಸಂತ್ರಸ್ತರ ವಿಭಾಗಕ್ಕೆ ಬಳಸುತ್ತಿದ್ದ ಈ ಕಾರಿನ ಗುತ್ತಿಗೆ ಅವಧಿ ಮುಕ್ತಾಯದ ದಿನವೇ ಬೆಂಕಿ ಹತ್ತಿಕೊಂಡಿದೆ, ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ.

Major serial accident in Shivamogga: Child killed by bus, auto driver critically injured

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.