ಬೆಂಗಳೂರು: ಪತಿ ಮತ್ತು ಪತ್ನಿಯ ನಡುವಿನ ವೈಯಕ್ತಿಕ ಜಗಳದ ಕಾರಣಕ್ಕೆ ಪತಿಯ ಮನೆಯವರೆಲ್ಲರನ್ನೂ ವಿನಾಕಾರಣವರದಕ್ಷಿಣೆ ಕೇಸ್‌ಗೆ ಎಳೆಯುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೆಂಗಳೂರಿನ ಮಹಿಳೆಯೊಬ್ಬರು ತನ್ನ ಅತ್ತೆ, ಮಾವ ಮತ್ತು ನಾದಿನಿಯ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ಈಗ ರದ್ದುಗೊಳಿಸಿದೆ.
ಶಿವಮೊಗ್ಗದಲ್ಲಿ 2 ದಿನ ವಿದ್ಯುತ್ ವ್ಯತ್ಯಯ, ಯಾವಾಗ, ಎಲ್ಲೆಲ್ಲಿ ಕರೆಂಟ್ ಇರಲ್ಲ
Bengaluru High Court ಮದುವೆಗೆ ಮಾಡಿದ ಖರ್ಚು ವರದಕ್ಷಿಣೆಯಲ್ಲ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ದೂರಿನಲ್ಲಿ ಮದುವೆಯ ಸಂದರ್ಭದಲ್ಲಿ ಆದ ಖರ್ಚುಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಮದುವೆಗೆ ಹಣ ಖರ್ಚು ಮಾಡುವುದನ್ನೇ ವರದಕ್ಷಿಣೆ ಬೇಡಿಕೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಮದುವೆಗೆ ಹಣ ವ್ಯಯಿಸಿದ್ದು ನಿಜವಾಗಿದ್ದರೂ, ಸಂಸಾರದಲ್ಲಿ ಬಿರುಕು ಮೂಡಿದಾಗ ಅದನ್ನೇ ವರದಕ್ಷಿಣೆ ಕಿರುಕುಳ ಎಂದು ಕುಟುಂಬದ ಎಲ್ಲರ ಮೇಲೆ ಕೇಸ್ ಹಾಕಲು ಬಳಸಬಾರದು ಎಂದು ಕೋರ್ಟ್ ಹೇಳಿದೆ.
19 ದಿನದ ಸಂಸಾರಕ್ಕೆ ಆರು ತಿಂಗಳಲ್ಲೇ ಕೇಸ್:
ಮಹಿಳೆ ಮತ್ತು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿಗೆ 2018ರಲ್ಲಿ ಮದುವೆಯಾಗಿತ್ತು. ಆದರೆ ವಿಪರ್ಯಾಸವೆಂದರೆ, ಈ ದಂಪತಿಗಳು ಒಟ್ಟಿಗೆ ಬಾಳಿದ್ದು ಕೇವಲ 19 ದಿನಗಳು ಮಾತ್ರ. ಮದುವೆಯಾದ ಆರೇ ತಿಂಗಳಿಗೆ ದಾಂಪತ್ಯದಲ್ಲಿ ಸಮಸ್ಯೆ ಶುರುವಾಗಿ, ಪತ್ನಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪತಿ ಮತ್ತು ಆತನ ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದರು.
ವಿನಾಕಾರಣ ಸಂಬಂಧಿಕರನ್ನು ಸಿಲುಕಿಸಬೇಡಿ:
ಪತಿಯ ವಿರುದ್ಧದ ತನಿಖೆ ಮುಂದುವರಿಯಲಿದೆಯಾದರೂ, ಯಾವುದೇ ಸಂಬಂಧವಿಲ್ಲದ ಅತ್ತೆ-ಮಾವ ಮತ್ತು ನಾದಿನಿಯನ್ನು ಈ ಕೇಸ್‌ಗೆ ಎಳೆದಿರುವುದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೌಟುಂಬಿಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡ ಕ್ರಿಮಿನಲ್ ಅಪರಾಧದಂತೆ ಬಿಂಬಿಸುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ. ಯಾವುದೇ ಬಲವಾದ ಕಾರಣ ಅಥವಾ ಪುರಾವೆ ಇಲ್ಲದೆ ಪತಿಯ ಸಂಬಂಧಿಕರನ್ನು ಇಂತಹ ಕೇಸ್‌ಗಳಲ್ಲಿ ಆರೋಪಿಗಳನ್ನಾಗಿ ಮಾಡಬಾರದು ಎಂದು ಕೋರ್ಟ್ ಎಚ್ಚರಿಸಿದೆ.
Bengaluru HC Quashes Dowry Case Against In-laws

