ಡಾ. ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣ : ವಾಟ್ಸಾಪ್​ ಸಂದೇಶದಲ್ಲಿ ಏನಿದೆ?

ಹಂಚಿಕೊಳ್ಳಿ
WhatsApp Facebook X Telegram
Dr. Samiksha Reddy Death Case Leaked WhatsApp Chats
Dr. Samiksha Reddy Death Case Leaked WhatsApp Chats

Dr. Samiksha Reddy ಶಿವಮೊಗ್ಗ : ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದ ಪಶು ವೈದ್ಯರಾಗಿದ್ದ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಅವರ ಸಾವಿಗೂ ಮುನ್ನ ಸಮೀಕ್ಷಾ ರೆಡ್ಡಿ ತಮ್ಮ ಆಪ್ತರಿಗೆ ಕಳುಹಿಸಿದ್ದಾರೆ ಎನ್ನಲಾದ ವಾಟ್ಸಾಪ್ ಸಂದೇಶ ಇದೀಗ ಬಹಿರಂಗವಾಗಿದ್ದು, ತಾವರೆಕೊಪ್ಪ ಪ್ರಾಣಿ ಸಂಗ್ರಹಾಲಯದಲ್ಲಿನ ಆಡಳಿತ ವೈಫಲ್ಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುತ್ತಿದೆ. 

ಇಳಿಕೆ ಕಂಡ ಚಿನ್ನದ ಬೆಲೆ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ಗೋಲ್ಡ್ ರೇಟ್!

ಡಾ. ಸಮೀಕ್ಷಾ ರೆಡ್ಡಿ ಸಾವಿನ ಹಿನ್ನೆಲೆಯಲ್ಲಿ ಈ ವಾಟ್ಸಾಪ್ ಚಾಟ್ ಕೇವಲ ಪ್ರಾಣಿ ಸಂಗ್ರಹಾಲಯದ ಸತ್ಯವನ್ನಷ್ಟೇ ಅಲ್ಲ, ಅವರ ಸಾವಿನ ಹಿಂದಿರುವ ಕಾರಣಗಳ ಬಗ್ಗೆಯೂ ಶಂಕೆ ಮೂಡಿಸಿದೆ.ಡಾ. ಸಮೀಕ್ಷಾ ರೆಡ್ಡಿ ತಮ್ಮ ವಾಟ್ಸಾಪ್ ಸಂದೇಶದಲ್ಲಿ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಪ್ರಾಣಿ ಸಂಗ್ರಹಾಲಯದಲ್ಲಿನ ಕೊರತೆಗಳನ್ನು ಅತ್ಯಂತ ಕಳವಳಕಾರಿಯಾಗಿ ಹಂಚಿಕೊಂಡಿದ್ದಾರೆ. ಪ್ರಾಣಿ ಸಂಗ್ರಹಾಲಯದಲ್ಲಿ ಸಂವಹನ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಡಾ. ಸಮೀಕ್ಷಾ ರೆಡ್ಡಿ ಉಲ್ಲೇಖಿಸಿದ್ದಾರೆ.

ಸಂದೇಶದಲ್ಲಿ ಸಮೀಕ್ಷಾ ರೆಡ್ಡಿ ಅವರು ಕಳಪೆ ಸಂವಹನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭದ್ರಾ ಎಂಬ ಪ್ರಾಣಿಗಾಗಿ ಅಳವಡಿಸಲಾಗಿದ್ದ ನೈಟ್ ಕ್ಯಾಮೆರಾವನ್ನು ಎಂದಿಗೂ ರೀಚಾರ್ಜ್ ಮಾಡಿರಲಿಲ್ಲ. ಬದಲಾಗಿ ಅದನ್ನು ತೆಗೆದು ಹಿಪ್ಪೋ ಪಂಜರದಲ್ಲಿ ಇಡಲಾಗಿತ್ತು. ಕೀಪರ್ ಅದನ್ನು ಕೇವಲ ನಿನ್ನೆಯಷ್ಟೇ ಹಿಪ್ಪೋಗಾಗಿ ರೀಚಾರ್ಜ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.ಆಸ್ಪತ್ರೆಯಲ್ಲಿ ಆಪರೇಷನ್ ಟೇಬಲ್, ದೀಪಗಳು ಮತ್ತು ಕನಿಷ್ಠ ಸಿಂಕ್ ಕೂಡ ಇಲ್ಲ ಎಂದು ಬರೆದಿದ್ದಾರೆ. ಇದರ ಜೊತೆಗೆ, ಕುಡಿಯುವ ನೀರು ಹಾಗೂ ವೈಫೈ ನಂತಹ ಕನಿಷ್ಠ ಸೌಲಭ್ಯಗಳು ಸಹ ಇಲ್ಲದಿರುವುದನ್ನು ಅವರು ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಾಣಿಗಳಿಗೆ ನೀಡುವ ಆಹಾರವು ತಪಾಸಣೆಗೆ ಬಂದಾಗ, ಕಳಪೆ ಸಾರಿಗೆ ವ್ಯವಸ್ಥೆ ಮತ್ತು ಸಂವಹನದ ಕೊರತೆ ಎದುರಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ನಿಯಮಿತವಾಗಿ ನೀಡಬೇಕಾದ ಸಿಹಿ ಜೋಳದ ಬದಲಿಗೆ, ಕಳೆದ ವಾರ ಸಂಪೂರ್ಣವಾಗಿ ಒಣಗಿದ ಬೆಳೆಯನ್ನು ಪ್ರಾಣಿಗಳಿಗೆ ನೀಡಲಾಗಿದೆ ಎಂದು ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ, ಗುಣಮಟ್ಟದ ಆಹಾರ ಮತ್ತು ಪರ್ಯಾಯ ವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಆಗುತ್ತಿರುವ ನಿರ್ಲಕ್ಷ್ಯದಿಂದಾಗಿ ಪ್ರಾಣಿಗಳಿಗೆ ಆಹಾರವೇ ಇಲ್ಲದಂತಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಉಡ ಮತ್ತು ಭದ್ರಾ ನಂತಹ ಪ್ರಾಣಿಗಳನ್ನು ನೋಡಿಕೊಳ್ಳಲು ರಾತ್ರಿ ಪಾಳಿಯ ಕೀಪರ್ ಇಲ್ಲದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಂದೇಶದಲ್ಲಿ ವಿಶೇಷವಾಗಿ ಗುರುತಿಸಲಾದ ಸಾಲಿನಲ್ಲಿ, ತಮಗೆ ಯಾವುದೇ ಸುರಕ್ಷತೆ ಅಥವಾ ಹೆಚ್ಚುವರಿ ಸಹಾಯವಿಲ್ಲ ಎಂಬುದನ್ನು ಹೇಳಿದ್ದಾರೆ.

ಭದ್ರಾ ನಂತಹ ಪ್ರಾಣಿಗಳ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿಯನ್ನು ಕಳುಹಿಸುವಂತೆ ನಾವು ಅಕ್ಷರಶಃ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ ಎಂದು ಡಾ. ಸಮೀಕ್ಷಾ ರೆಡ್ಡಿ ತಮ್ಮ ವಾಟ್ಸಾಪ್ ಸಂದೇಶದಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ.

Dr. Samiksha Reddy ಪ್ರಾಣಿ ಸಂಗ್ರಹಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಪ್ರಾಣಿ ಸಂಗ್ರಹಾಲಯದಲ್ಲಿನ ತೀವ್ರ ಕೊರತೆಗಳನ್ನು ಎತ್ತಿ ತೋರಿಸುತ್ತಿರುವ ಈ ವಾಟ್ಸಾಪ್‌ ಚಾಟ್ ಅವರ ಸಾವಿನ ಹಿಂದಿರುವ ಕಾರಣಗಳ ಬಗ್ಗೆಯೂ ಶಂಕೆ ಮೂಡಿಸಿದೆ.

Dr. Samiksha Reddy Death Case Leaked WhatsApp Chats

Dr. Samiksha Reddy Death Case Leaked WhatsApp Chats
Dr. Samiksha Reddy Death Case Leaked WhatsApp Chats
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor