ಅಪ್ಪ-ಮಗನ ಜಗಳಕ್ಕೆ ಪೊಲೀಸ್ ಎಂಟ್ರಿ , ಬೈಕ್​. ಕಾರು ಅಪಘಾತ ಸೇರಿದಂತೆ ಇನ್ನಿತರೇ ಟಾಪ್​ 03 ಚಟ್​ಪಟ್​​ ಸುದ್ದಿಗಳು

Shivamogga Police 112 ಶಿವಮೊಗ್ಗ:  ಪ್ರತಿನಿತ್ಯ 112 ಸಿಬ್ಬಂದಿಗಳಿಗೆ ಅನೇಕ ವಿಧದ ಕೇಸ್​ಗಳಿಗೆ ಸಂಬಂಧಿಸಿದಂತೆ ಕರೆಗಳು ಬರುತ್ತಲೇ ಇರುತ್ತವೆ. ಅದರಂತೆ ಸಿಬ್ಬಂದಿಗಳು ಸಹ ತಕ್ಷಣ ಸ್ಥಳಕ್ಕೆ ತೆರಳಿ ಸ್ಪಂದಿಸಿ ಕೇಸ್​ನ್ನು ಬಗೆ ಹರಿಸಿ ಬರುತ್ತಾರೆ. ಅದರಂತೆ ಶಿವಮೊಗ್ಗದ ವಿವಿಧ ಪ್ರದೇಶಗಳಲ್ಲಿ ನಡೆದ ಕೆಲವೊಂದು ಪ್ರಕರಣಗಳನ್ನು ಆಯ್ದು ಇಲ್ಲಿ ಶಾರ್ಟ್​ ನ್ಯೂಸ್ ಮಾಡಲಾಗಿದೆ .

1. ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನ ಕಿತ್ತಾಟ: 

ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ  ಗಲಾಟೆ ಸಂಭವಿಸಿತ್ತು. ಈ ಬಗ್ಗೆ 112ಗೆ ದೂರು ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಇಬ್ಬರ ನಡುವಿನ ಜಗಳವನ್ನು ಶಾಂತಗೊಳಿಸಿದರು. ಇನ್ನೊಮ್ಮೆ ಇಂತಹ ವರ್ತನೆ ತೋರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರಿಗೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಪ್ರಕರಣವನ್ನು ಬಗೆಹರಿಸಿದ್ದಾರೆ

2. ಬೈಕ್-ಕಾರ್ ಅಪಘಾತ

ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದ ಬಗ್ಗೆ ಕರೆ ಬಂದಿತ್ತು. ERV ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ತೆರಳುವಷ್ಟರಲ್ಲಿ ಸಾರ್ವಜನಿಕರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಪೊಲೀಸರು ಘಟನೆಯ ಮಾಹಿತಿಯನ್ನು ಪಡೆದು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಿದ್ದಾರೆ .

3. ರಸ್ತೆಯಲ್ಲಿ ಮರಳು ಸುರಿದು ಸಾರ್ವಜನಿಕರಿಗೆ ಕಿರಿಕಿರಿ

ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರ ನಿರ್ಮಾಣಕ್ಕಾಗಿ ರಸ್ತೆಯ ಮೇಲೆ ಮರಳು ಸುರಿಯಲಾಗಿತ್ತು. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಮನೆಯ ಮಾಲೀಕನಿಗೆ ರಸ್ತೆಯಿಂದ ಮರಳನ್ನು ತಕ್ಷಣ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಮಸ್ಯೆ ಬಗೆಹರಿಸಿದ್ದಾರೆ.

Shivamogga Police 112 Solving Father-Son Feud

Shivamogga Police 112  Rowdy Fauzan Threatens shimoga Credit Card Fraud Bhadravathi Caste Abuse Bee Attack Shivamogga Sharavathi Project Sagara PoliceShimoga Court Shivamogga Careers Ripponpete Shivamogga Unknown Body Found Near Tuppur Hybrid Vegetable Seeds Shikaripura Laborer Dies Shivamogga Court Bhadravati Court Unidentified Man Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Shivamogga Police 112
shivamogga car decor sun control house
shivamogga car decor sun control house