Rowdy Fauzan Threatens ಶಿವಮೊಗ್ಗ : ಈಗಾಗಲೇ ಅನೇಕ ಪ್ರಕರಣದಲ್ಲಿ ಆರೋಪಿಯಾಗಿ ಬೆಳಗಾಂ ಜೈಲಿನಲ್ಲಿರುವ ಫೌಜಾನ್ ಇದೀಗಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ
ಶಿವಮೊಗ್ಗದಲ್ಲಿರುವ ಉದ್ಯಮಿಯ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ನಮ್ಮ ಅಣ್ಣ ಫೌಜಾನ್ ಲೈನ್ ನಲ್ಲಿದ್ದಾರೆ ಮಾತನಾಡು ಎಂದು ಬಲವಂತವಾಗಿ ಫೋನ್ ನೀಡಿದ್ದಾನೆ. ನಂತ ಫೋನ್ ತೆಗೆದುಕೊಂಡ ಉದ್ಯಮಿಗೆ ಜೈಲಿನಲ್ಲಿರುವ ಫೌಜಾನ್ ಅವಾಚ್ಯ ಪದಗಳಿಂದ ನಿಂದಿಸಿ, ಮರುದಿನ ಸಂಜೆಯೊಳಗೆ ನೀನು ನನಗೆ 5 ಲಕ್ಷ ರೂಪಾಯಿ ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಪ್ರಾಣ ಉಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ
ಹಿಂದಿನ ಬಾರಿ ದಾಳಿಯಿಂದ ತಪ್ಪಿಸಿಕೊಂಡಿದ್ದೀಯಾ, ಈ ಸಲ ನಿನಗೆ ಉಳಿಗಾಲವಿಲ್ಲ ಎಂದು ಫೌಜಾನ್ ಉದ್ಯಮಿಯನ್ನು ಗಿ ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ ಸ್ಥಳದಲ್ಲಿದ್ದ ಆರೋಪಿಯ ಸಹಚರ ಕೂಡ ಹಣ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದಾರೆ. ಇದರಿಂದ ಬೇಸತ್ತ ಉದ್ಯಮಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ
ಪೊಲೀಸ್ ತನಿಖೆಯ ವೇಳೆ ಉದ್ಯಮಿಯ ಮೊಬೈಲ್‌ಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಂಟರ್ನೆಟ್ ಕರೆಗಳುಬಂದಿರುವುದು ದೃಢಪಟ್ಟಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಈ ಕ್ರಿಮಿನಲ್, ಹೊರಗಿರುವ ತನ್ನ ಬೆಂಬಲಿಗರ ಮೂಲಕ ಇಂತಹ ಸುಲಿಗೆ ಸಂಚು ರೂಪಿಸುತ್ತಿರುವುದು ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ
Rowdy Fauzan ದೊಡ್ಡಪೇಟೆ ಪೊಲೀಸರು ಈ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಜೈಲಿನಿಂದ ಬಂದ ಕರೆಯ ಮೂಲ ಹಾಗೂ ಸ್ಥಳೀಯವಾಗಿ ಸಹಕರಿಸಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
Rowdy Fauzan Threatens Shivamogga Businessman

