ಸೌದೆ ಒಲೆಯಲ್ಲಿ ಸಿದ್ಧವಾಯಿತು ಬಿರಿಯಾನಿ: ಶಿವಮೊಗ್ಗದಲ್ಲಿ ಅಪ್ಪು ಜನ್ಮದಿನ ಹೇಗಿತ್ತು ಗೊತ್ತಾ,

ಶಿವಮೊಗ್ಗ : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 51ನೇ ಜನ್ಮದಿನವನ್ನು ಇಂದು ರಾಜ್ಯದಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮದ ಅಂಗವಾಗಿ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಅಪ್ಪು ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು.

ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು

ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೆರೆದಿದ್ದ ಅಭಿಮಾನಿಗಳಿಗೆ ಮೊದಲಿಗೆ ಕಲ್ಲಂಗಡಿ ಜ್ಯೂಸ್​​ನ್ನು ವಿತರಿಸಲಾಯಿತು. ನಂತರ ಅಪ್ಪು ನೆನಪಿಗಾಗಿ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಆಕಾಶ್ ಚಲನಚಿತ್ರವನ್ನು ಮರುಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ನೆಚ್ಚಿನ ನಟನ ಕಟೌಟ್‌ಗೆ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. 

ಇದೇ ಸಂದರ್ಭದಲ್ಲಿ ಸುಮಾರು 3000 ಜನರಿಗೆ ವೆಜ್ ಬಿರಿಯಾನಿ ಉಣಬಡಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಿಲಿಂಡರ್‌ಗಳ ಕೊರತೆಯಿಂದಾಗಿ ಅಡುಗೆಯವರು ಸೌದೆ ಒಲೆಯನ್ನು ಬಳಸಿ ಬಿರಿಯಾನಿ ತಯಾರಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಗ್ಯಾಸ್ ಸಮಸ್ಯೆ ಎದುರಾದರೂ ಅಪ್ಪು ಮೇಲಿನ ಪ್ರೀತಿಯಿಂದ ಅಭಿಮಾನಿಗಳು ಸಾಂಪ್ರದಾಯಿಕ ಶೈಲಿಯಲ್ಲೇ ಯಶಸ್ವಿಯಾಗಿ ಅನ್ನದಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಬಳಗದ ಪ್ರಮುಖರಾದ ಮಧು ಮಾತನಾಡಿ, ‘ನಾವು ಬೆಳಿಗ್ಗೆಯಿಂದಲೇ ಅಪ್ಪು ಅವರ ಹುಟ್ಟುಹಬ್ಬಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಆಗಮಿಸುವ ಎಲ್ಲಾ ಅಭಿಮಾನಿಗಳಿಗೆ ಜ್ಯೂಸ್ ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಮಧ್ಯಾಹ್ನದ ಊಟಕ್ಕೆ ಸುಮಾರು 3 ಸಾವಿರ ಜನರಿಗೆ ವೆಜ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆಯವರೆಗೂ ನಮಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂಬ ಭರವಸೆ ಇತ್ತು. ಆದರೆ ಇಂದು ಬೆಳಿಗ್ಗೆ ಗ್ಯಾಸ್ ಲಭ್ಯವಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಯಿತು. ಆದರೂ ನಮ್ಮ ಅಡುಗೆ ಭಟ್ಟರು ಸೌದೆ ಒಲೆಯಲ್ಲೇ ಬಿರಿಯಾನಿ ತಯಾರಿಸಿಕೊಡುವ ಮೂಲಕ ಸಹಕರಿಸಿದ್ದಾರೆ’ ಎಂದು ತಿಳಿಸಿದರು.

appu Birthday Celebration in Shivamogga

appu Birthday Celebration in Shivamogga
appu Birthday Celebration in Shivamogga
shivamogga car decor sun control house
shivamogga car decor sun control house