SHIVAMOGGA NEWS TODAY

ಕುರಿ ಮೃತಪಟ್ಟಿದ್ದಕ್ಕೆ ತಿಥಿ ಕಾರ್ಯ: ಶಾಲಾ ಮಕ್ಕಳಿಗೆ ಭೋಜನ ಬಡಿಸಿ ಮಾನವೀಯತೆ ಮೆರೆದ ಮಣಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧಕ್ಕೆ ಶಿವಮೊಗ್ಗದ ಸಿಗಹಟ್ಟಿ ಬಡಾವಣೆ ಸಾಕ್ಷಿಯಾಗಿದೆ. ತಾನು ಮಗನಂತೆ ಸಾಕಿದ್ದ ಫೈಟರ್ ಕುರಿ ಮೃತಪಟ್ಟಿದ್ದಕ್ಕೆ ಮಣಿ ಎಂಬುವವರು ವಿಶಿಷ್ಟ ರೀತಿಯಲ್ಲಿ ಉತ್ತರಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. 

ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು

ಕಳೆದ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟ ಈ ಕುರಿಯನ್ನು ಮಣಿ ಮತ್ತು ಅವರ ಸ್ನೇಹಿತರು ಕೇವಲ ಪ್ರಾಣಿಯಂತೆ ನೋಡಿರಲಿಲ್ಲ. ಮನೆಯ ಸದಸ್ಯನಂತೆಯೇ ಅದಕ್ಕೆ ಪ್ರೀತಿ ನೀಡಿದ್ದರು. ಸಾವು ಸಂಭವಿಸಿದಾಗ ಸಕಲ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಿ ಅದರ ಮೇಲಿದ್ದ ಅತೀವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಸಾಮಾನ್ಯವಾಗಿ ತಿಥಿ ಕಾರ್ಯಕ್ರಮಗಳಲ್ಲಿ ನೆಂಟರಿಷ್ಟರಿಗೆ ಊಟ ಹಾಕುವುದು ರೂಢಿ. ಆದರೆ ಮಣಿ ಬಳಗವು ಈ ದಿನವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಂಡಿತು. ಸುಮಾರು 60ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೊಟ್ಟೆತುಂಬಾ ಊಟದ ವ್ಯವಸ್ಥೆ ಮಾಡಲಾಗಿತ್ತು.

ಊಟದ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಆಸರೆಯಾಗುವಂತೆ ನೋಟ್ ಪುಸ್ತಕಗಳು ಮತ್ತು ಪೆನ್ನುಗಳನ್ನು ವಿತರಿಸಲಾಯಿತು.

Shimoga Man Honors Pet Sheep with Book Donation

Shimoga Man Honors Pet Sheep with Book Donation
Shimoga Man Honors Pet Sheep with Book Donation
shivamogga car decor sun control house
shivamogga car decor sun control house
Malenadu Today ePaper PDF 03-03-2026 / ಮಲೆನಾಡು ಟುಡೆ ಜನಮನದ ಜೀವನದಿ ಈ ಪತ್ರಿಕೆಯನ್ನು ನೀವಿಲ್ಲಿ ಓದಬಹುದು! ಡೌನ್​​ಲೋಡ್​ ಮಾಡಿಕೊಳ್ಳಬಹುದು
Malenadu Today ePaper PDF 03-03-2026 / ಮಲೆನಾಡು ಟುಡೆ ಜನಮನದ ಜೀವನದಿ ಈ ಪತ್ರಿಕೆಯನ್ನು ನೀವಿಲ್ಲಿ ಓದಬಹುದು! ಡೌನ್​​ಲೋಡ್​ ಮಾಡಿಕೊಳ್ಳಬಹುದು

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.