ವಾಲಿಬಾಲ್: ರಾಷ್ಟ್ರ ಮಟ್ಟಕ್ಕೆ ತೀರ್ಥಹಳ್ಳಿಯ ಶಬರೀಶ್ ಗೌಡ ಆಯ್ಕೆ

ಹಂಚಿಕೊಳ್ಳಿ
WhatsApp Facebook X Telegram
Thirthalli Boy Represent Karnataka in Volleyball
Thirthalli Boy Represent Karnataka in Volleyball

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹಾರೆಕೊಪ್ಪದ ಯುವ ಪ್ರತಿಭೆ ಶಬರೀಶ್ ಗೌಡ ಅವರು ರಾಷ್ಟ್ರ ಮಟ್ಟದ ಯೂಥ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕ ತಂಡದ ಪರವಾಗಿ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ! 

ತೀರ್ಥಹಳ್ಳಿಯ ದಬ್ಬಣಗದ್ದೆ ಸಮೀಪದ ಹಾರೆಕೊಪ್ಪ ನಿವಾಸಿಗಳಾದ ರಂಜಿತಾ ಮತ್ತು ಜಗದೀಶ್ ದಂಪತಿಯ ಪುತ್ರನಾದ ಶಬರೀಶ್, ತೀರ್ಥಹಳ್ಳಿಯ ಪ್ರತಿಷ್ಠಿತ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದವರು. ಪ್ರಸ್ತುತ ಬೆಂಗಳೂರು ಜಯನಗರದ ಸುರಾನಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ಶಬರೀಶ್ ಗೌಡ ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಕಠಿಣ ಪರಿಶ್ರಮ ಪಟ್ಟಿದ್ದರು. ಇವರ ಕೌಶಲವನ್ನು ಗುರುತಿಸಿದ ಕ್ರೀಡಾ ಇಲಾಖೆಯು ಇವರನ್ನು ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆ ಮಾಡಿದೆ. ಮಾರ್ಚ್ 15 ರಿಂದ 20 ರವರೆಗೆ ಒಡಿಶಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಯೂಥ್ ನ್ಯಾಷನಲ್ ವಾಲಿಬಾಲ್ ಟೂರ್ನಿಯಲ್ಲಿ ಶಬರೀಶ್ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. 

Thirthalli Boy Represent Karnataka in Volleyball

Thirthahalli Boy Represent Karnataka in Volleyball
Thirthalli Boy Represent Karnataka in Volleyball
shivamogga car decor sun control house
shivamogga car decor sun control house
Malenadu Today ePaper PDF 03-03-2026 / ಮಲೆನಾಡು ಟುಡೆ ಜನಮನದ ಜೀವನದಿ ಈ ಪತ್ರಿಕೆಯನ್ನು ನೀವಿಲ್ಲಿ ಓದಬಹುದು! ಡೌನ್​​ಲೋಡ್​ ಮಾಡಿಕೊಳ್ಳಬಹುದು

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor