ಪಾಸ್‌ಪೋರ್ಟ್ ನಿಯಮದಲ್ಲಿ ಬದಲಾವಣೆ, ಇನ್ಮುಂದೆ ಈ ಒಂದು ದಾಖಲೆ ಕಡ್ಡಾಯ!

ಕೊನೆಯ ನವೀಕರಣ: 13 ಮಾರ್ಚ್ 2026, 5:11 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
New Passport Rules Birth Certificate Mandatory
New Passport Rules Birth Certificate Mandatory

New Passport Rules ಸರ್ಕಾರವು 1980ರ ಪಾಸ್‌ಪೋರ್ಟ್ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದ್ದು, ಜನ್ಮ ದಿನಾಂಕದ ಪುರಾವೆಗಾಗಿ ಹೊಸ ಮಾನದಂಡಗಳನ್ನು ಘೋಷಿಸಿದೆ. ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು 2025 ರ ಅಡಿಯಲ್ಲಿಅಕ್ಟೋಬರ್ 1, 2023ರ ನಂತರ ಜನಿಸಿದ ಮಕ್ಕಳಿಗೆ ಜನನ ಪ್ರಮಾಣಪತ್ರವೇ ಏಕೈಕ ಅಧಿಕೃತ ದಾಖಲೆಯಾಗಲಿದೆ. 

ಶಿವಮೊಗ್ಗ : ಮಹಿಳಾ ಕಲಾವಿದರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ, ಪ್ರಥಮ ಬಹುಮಾನ 8 ಸಾವಿರ, ಏನಿದು ಸ್ಪರ್ಧೆ

ಹೊಸ ನಿಯಮದ ಪ್ರಕಾರ, ಈ ನಿಗದಿತ ದಿನಾಂಕದ ನಂತರ ಜನಿಸಿದ ಅರ್ಜಿದಾರರು ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969ರ ಅಡಿಯಲ್ಲಿ ಅಧಿಕಾರ ಪಡೆದ ಪ್ರಾಧಿಕಾರ ನೀಡಿದ ಜನನ ಪ್ರಮಾಣಪತ್ರವನ್ನೇ ಸಲ್ಲಿಸುವುದು ಕಡ್ಡಾಯ. ಇದು ಪರಿಶೀಲನಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ದಾಖಲೆಗಳ ದೃಢೀಕರಣವನ್ನು ಹೆಚ್ಚಿಸುವ ಗುರಿ ಹೊಂದಿದೆ. 

ಇನ್ನು ಅಕ್ಟೋಬರ್ 1, 2023ಕ್ಕಿಂತ ಮೊದಲು ಜನಿಸಿದ ಅರ್ಜಿದಾರರಿಗೆ ಹಳೆಯ ನಿಯಮಗಳೇ ಅನ್ವಯವಾಗಲಿದ್ದು, ಅವರು ಜನ್ಮ ದಿನಾಂಕದ ಪುರಾವೆಗಾಗಿ ಶಾಲಾ ವರ್ಗಾವಣೆ ಪ್ರಮಾಣಪತ್ರ (TC), ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ಆಯ್ಕೆಗಳನ್ನು ಬಳಸಬಹುದಾಗಿದೆ. 

ಪಾಸ್‌ಪೋರ್ಟ್ ಸೇವೆಗಳನ್ನು ಆಧುನೀಕರಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ಸರ್ಕಾರವು ಈ ಕ್ರಮ ಕೈಗೊಂಡಿದೆ. 1980ರಲ್ಲಿ ಜಾರಿಗೆ ಬಂದಿದ್ದ ಈ ನಿಯಮಗಳಿಗೆ ಕಾಲಕಾಲಕ್ಕೆ ತಿದ್ದುಪಡಿ ತರಲಾಗುತ್ತಿದ್ದು, ಈಗಿನ ಬದಲಾವಣೆಯು ಡಿಜಿಟಲ್ ನೋಂದಣಿಗೆ ಹೆಚ್ಚಿನ ಒತ್ತು ನೀಡಲಿದೆ.

New Passport Rules Birth Certificate Mandatory

New Passport Rules Birth Certificate Mandatory
New Passport Rules Birth Certificate Mandatory
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor