ಶಿವಮೊಗ್ಗ: ನಿಂತಿದ್ದ ಕಾರ್​ನ ಗ್ಲಾಸ್​​ ಪುಡಿಮಾಡಿದ ಕಿಡಿಗೇಡಿಗಳು

ಹಂಚಿಕೊಳ್ಳಿ
WhatsApp Facebook X Telegram
Vandalism In Sharavathi Nagar 2nd Cross
Vandalism In Sharavathi Nagar 2nd Cross

ಶಿವಮೊಗ್ಗ : ಶರಾವತಿ ನಗರದ 2 ನೇ ಕ್ರಾಸ್​​ನಲ್ಲಿ ನಿನ್ನೆ ರಾತ್ರಿ ಬೈಕ್​ನಲ್ಲಿ ಬಂದ ಇಬ್ಬರು ಮುಸುಕುದಾರಿಗಳು ಕಾರಿನ ಗಾಜನ್ನು ಒಡೆದು ಪರಾರಿಯಾಗಿರುವ ಘಟನೆ ನಡೆದಿದೆ.

ಇರಾನ್​ ಯುದ್ಧ, ಶಿವಮೊಗ್ಗ, ಚಿಕ್ಕಮಗಳೂರಿಗೆ ತುರ್ತು ಸಹಾಯವಾಣಿ ನಂಬರ್! ಇಲ್ಲಿದೆ ಮಾಹಿತಿ

ಮಂಗಳವಾರ ರಾತ್ರಿ ಸುಮಾರು 11:45ರ ವೇಳೆಗೆ ಈ ಘಟನೆ ಸಂಭವಿಸಿದೆ. ಮುಖಕ್ಕೆ ಮಾಸ್ಕ್ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರಲ್ಲಿ ಒಬ್ಬ ಏಕಾಏಕಿ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಮಾರಕಾಸ್ತ್ರಗಳಿಂದ ಕಾರಿನ ಕಿಟಕಿ ಹಾಗೂ ಮುಂಭಾಗದ ಗಾಜನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾನೆ. ಗಾಜು ಒಡೆದ ಶಬ್ದಕ್ಕೆ ಸ್ಥಳೀಯರು ಮನೆಗಳಿಂದ ಹೊರಬರುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

ದಾಳಿಗೊಳಗಾದ ಕಾರಿನ ಮಾಲೀಕ ಮಹೇಶ್ ಲೋಕೇಶ್ ಈ ಕುರಿತು ಮಾತನಾಡಿ ರ. ಬಹಳ ಕಷ್ಟಪಟ್ಟು ಕಾರು ಖರೀದಿಸಿದ್ದೆವು, ಕಿಡಿಗೇಡಿಗಳ ಕೃತ್ಯದಿಂದ ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ಗಾಂಜಾ ನಶೆಯಲ್ಲಿ ಈ ರೀತಿ ಮಾಡಿದ್ದಾರೋ ಅಥವಾ ವೈಯಕ್ತಿಕ ದ್ವೇಷವೋ ತಿಳಿಯುತ್ತಿಲ್ಲ. ಇಂದು ಕಾರಿಗೆ ಹೊಡೆದವರು ನಾಳೆ ಮನುಷ್ಯರ ಮೇಲೆ ಹಲ್ಲೆ ನಡೆಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

ಈದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Vandalism In Sharavathi Nagar 2nd Cross
Vandalism In Sharavathi Nagar 2nd Cross

Vandalism In Sharavathi Nagar 2nd Cross

shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor