ಬಸ್ಟ್ಯಾಂಡ್​ನಲ್ಲಿ ಅಳುತ್ತಾ ನಿಂತಿದ್ದ ಯುವತಿ, ಯುವಕನ ಮೇಲೆ ಬಿತ್ತು ಕೇಸ್?​​

Published: 04 ಮಾರ್ಚ್ 2026, 11:43 ಫೂರ್ವಾಹ್ನ • 1 min read

ಶಿವಮೊಗ್ಗ : ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನುಯ ಅಕ್ಕ ಪಡೆ ವಶಕ್ಕೆ ಪಡೆದು ಪೋಲೀಸ್​ ಠಾಣೆಯಲ್ಲಿ ಪ್ರಕರಣದ ದಾಖಲಿಸಿರುವ ಘಟನೆ ನಡೆದಿದೆ.

ಇವತ್ತು ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು, ಇ-ಪೇಪರ್​​ ಓದಿ

ಘಟನ ವಿವರ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಕ್ಕಪಡೆ ಸಿಬ್ಬಂದಿಗಳು ಎಂದಿನಂತೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಯುವತಿಯೊಬ್ಬಳು ಒಂಟಿಯಾಗಿ ಅಳುತ್ತಾ ನಿಂತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಮಹಿಳಾ ಸಿಬ್ಬಂದಿಗಳು ಆಕೆಯ ಬಳಿ ತೆರಳಿ ಸಮಾಧಾನಪಡಿಸಿ ವಿಚಾರಣೆ ನಡೆಸಿದ್ದಾರೆ

ಆಗ ಯುವತಿ, ಅಪರಿಚಿತ ಯುವಕನೊಬ್ಬ ಸತತವಾಗಿ ತನಗೆ ಉಪಟಳ ನೀಡುತ್ತಿದ್ದಾನೆ ಎಂದು ದೂರಿದ್ದಾಳೆ. ಈ ಹಿನ್ನೆಲೆ ಸಿಬ್ಬಂದಿಗಳು  ತಕ್ಷಣವೇ ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ಇದ್ದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. 

ಬಂಧಿತ ಯುವಕನನ್ನು ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆತನ ವಿರುದ್ಧ  ಲಘು ಪ್ರಕರಣ ದಾಖಲಿಸಲಾಗಿದೆ. ನಂತರ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

Shimoga Akkapade Police Rescue Girl

Shimoga Akkapade Police Rescue Girl
Shimoga Akkapade Police Rescue Girl
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy