ಪುರದಾಳುವಿನಲ್ಲಿ ಮುಂದುವರೆದ ಕಾಡಾನೆ ದಾಳಿ : 20 ಕ್ಕೂ ಹೆಚ್ಚು ಅಡಿಕೆ ಮರ ನಾಶ

This Article Written by / Prathapa thirthahalli / ಫೆಬ್ರವರಿ 18, 2026

Wild Elephant Attack in Puradalu Shivamogga

ಶಿವಮೊಗ್ಗ: ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ತಡರಾತ್ರಿ ಪುರದಾಳಿನ ಬೇಳೂರು ಗ್ರಾಮದಲ್ಲಿ ಒಂಟಿ ಸಲಗವೊಂದು ರೈತರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.

ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 17 ಮತ್ತು 18 ರಂದು ವಿದ್ಯುತ್ ವ್ಯತ್ಯಯ 

ಬೇಳೂರು ಗ್ರಾಮದ ನಿವಾಸಿ ಗುಮ್ಮನಬೈಲ್ ಉಷಾ ಎಂಬುವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ, ಫಸಲು ನೀಡುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಬೃಹತ್ ಅಡಿಕೆ ಮರಗಳನ್ನು ಆನೆ ಮುರಿದು ಹಾಕಿದೆ. ಅಷ್ಟೇ ಅಲ್ಲದೆ, ತೋಟದಲ್ಲಿದ್ದ ತೆಂಗಿನ ಗಿಡಗಳನ್ನು ಸಹ ಕಿತ್ತು ತಿಂದು ನಾಶಪಡಿಸಿದೆ. 

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಪುರದಾಳು-ಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಆನೆ, ಈಗ ಜನವಸತಿ ಪ್ರದೇಶದ ಮನೆಗಳ ಸನಿಹವೇ ಬರುತ್ತಿದೆ. ರಾತ್ರಿ ವೇಳೆ ಮನೆ ಅಂಗಳಕ್ಕೆ ಆನೆ ಬರುವುದರಿಂದ ಜನರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Wild Elephant Attack in Puradalu Shivamogga
Wild Elephant Attack in Puradalu Shivamogga

Wild Elephant Attack in Puradalu Shivamogga

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Crop Loss,Forest Department,Puradalu,SHIVAMOGGA,Wild Elephant Attack

ಮುಂದಿನ ಸುದ್ದಿ ಒದಿ