Shivamogga | ಮಲೆನಾಡು ಟುಡೆ ಸುದ್ದಿ | Horoscope and Panchanga |ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಪಂಚಮಿ ತಿಥಿ ರಾತ್ರಿ 2.45 ರವರೆಗೆ ಇರಲಿದ್ದು, ಆನಂತರ ಷಷ್ಠಿ ತಿಥಿ ಆರಂಭವಾಗಲಿದೆ. ಹಸ್ತ ನಕ್ಷತ್ರವು ರಾತ್ರಿ 2.04 ರವರೆಗೆ ಇದ್ದು, ತದನಂತರ ಚಿತ್ತ ನಕ್ಷತ್ರವು ಪ್ರವೇಶಿಸಲಿದೆ.ಅಮೃತ ಘಳಿಗೆ ರಾತ್ರಿ 7.46 ರಿಂದ 9.28 ರವರೆಗೆ ಇರಲಿದೆ. ರಾಹುಕಾಲವು ಬೆಳಿಗ್ಗೆ 10.30 ರಿಂದ 12.00 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರುತ್ತದೆ.
ದಿನಭವಿಷ್ಯ!/Horoscope and Panchanga
ಮೇಷ |ಹೊಸ ಕಾರ್ಯಗಳನ್ನು ಆರಂಭಿಸಲು ಶುಭದಾಯಕ ದಿನ. ಕುಟುಂಬ ಮತ್ತು ಮಿತ್ರರೊಂದಿಗೆ ಔತಣಕೂಟಗ, ದೂರದ ಊರುಗಳಿಂದ ವರ್ತಮಾನ ಬರುವುದು. ಆರ್ಥಿಕವಾಗಿ ಪ್ರಗತಿ, ವ್ಯಾಪಾರ ವ್ಯವಹಾರಗಳಲ್ಲಿ ಏಳಿಗೆ, ಉದ್ಯೋಗದಲ್ಲಿ ತೃಪ್ತಿಕರ ದಿನ.
ವೃಷಭ | ಕೌಟುಂಬಿಕ ಸಮಸ್ಯೆ, ಅನಗತ್ಯ ಖರ್ಚು. ಯೋಜಿತ ಕಾರ್ಯ ಅನುಷ್ಠಾನಕ್ಕೆ ತರುವಲ್ಲಿ ಶ್ರಮವಹಿಸಬೇಕಾಗುತ್ತದೆ. ಅನಾರೋಗ್ಯ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ನಿರಾಸೆ ಮೂಡಬಹುದು.
ಮಿಥುನ | ಅಧಿಕ ಶ್ರಮದ ದಿನ ಮತ್ತು ಖರ್ಚು ಜಾಸ್ತಿ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ , ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಅನಿರೀಕ್ಷಿತ ಪ್ರಯಾಣ. ಉದ್ಯೋಗ ಹಾಗೂ ವ್ಯಾಪಾರ ಸಾಧಾರಣ.
ಕರ್ಕಾಟಕ | ಹೊಸ ವ್ಯಕ್ತಿಗಳ ಪರಿಚಯ, ಆರ್ಥಿಕ ಸ್ಥಿತಿ ಆಶಾದಾಯಕ. ಆಪ್ತರಿಂದ ಅಗತ್ಯ ಸಹಕಾರ, ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ಹೊಸ ಉತ್ಸಾಹ.

ಸಿಂಹ | ಪ್ರಮುಖ ಕೆಲಸ ಮುಂದೂಡುವ ಪರಿಸ್ಥಿತಿ ಮತ್ತು ಹೆಚ್ಚಿನ ದೈಹಿಕ ಶ್ರಮ. ಸಂಬಂಧಿಕರಿಂದ ಒತ್ತಡ , ದೈವದರ್ಶನ , ಮಾನಸಿಕ ನೆಮ್ಮದಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕೆಲವು ಅಡೆತಡೆ.
ಕನ್ಯಾ | ಕೈಗೆತ್ತಿಕೊಂಡ ಕೆಲಸಗಳಲ್ಲಿ ಉತ್ತಮ ಪ್ರಗತಿ, ಸಮಾಜದಲ್ಲಿ ಗೌರವ. ಆಲೋಚನೆಗಳು ಕಾರ್ಯರೂಪಕ್ಕೆ ಬರಲಿದೆ, ವ್ಯಾಪಾರ ವಿಸ್ತರಣೆಗೆ ಅವಕಾಶ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ.
ತುಲಾ | ಸಾಲ ಮಾಡಬೇಕಾದ ಪರಿಸ್ಥಿತಿ ಮತ್ತು ಅನಿರೀಕ್ಷಿತ ಪ್ರಯಾಣ. ಕೌಟುಂಬಿಕ ವಿಚಾರದಲ್ಲಿ ಅಸಮಾಧಾನ. ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಶ್ರಮ.
ವೃಶ್ಚಿಕ | ಶುಭ ವಾರ್ತೆ. ಆರ್ಥಿಕವಾಗಿ ಚೇತರಿಕೆ, ಕೆಲಸಕಾರ್ಯ ಉತ್ಸಾಹದಿಂದ ಪೂರೈಸುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರೋತ್ಸಾಹ.

ಧನು | ಪ್ರಮುಖ ನಿರ್ಧಾರ, ವ್ಯವಹಾರಗಳಲ್ಲಿ ಮಂದಗತಿ. ಪ್ರವಾಸದ ಯೋಜನೆಗಳಲ್ಲಿ ಬದಲಾವಣೆ, ಅನಿರೀಕ್ಷಿತ ಖರ್ಚು ಎದುರಾಗಲಿವೆ. ಉದ್ಯೋಗ ಮತ್ತು ವ್ಯಾಪಾರ ಲಾಭದಾಯಕವಾಗಿರುವುದಿಲ್ಲ.
ಮಕರ | ಹೊಸ ಮಿತ್ರರ ಆಗಮನ, ವಾಹನ ಯೋಗ. ಆಸ್ತಿ ಅಥವಾ ಹೊಸ ವಾಹನ ಖರೀದಿಸುವ ಸಾಧ್ಯತೆ. ಉದ್ಯೋಗ ಮತ್ತು ವ್ಯಾಪಾರದಲ್ಲಿನ ಒತ್ತಡ ದೂರ.
ಕುಂಭ | ಪರಿಸ್ಥಿತಿ ಪೂರಕವಾಗಿರಲಿದ್ದು, ಹೊಸ ಸಂಪರ್ಕ ವೃದ್ಧಿಯಾಗಲಿವೆ. ಶುಭ ಸಮಾಚಾರಗಳ ಜೊತೆಗೆ ದೇವಸ್ಥಾನಗಳಿಗೆ ಭೇಟಿ. ವ್ಯಾಪಾರವು ಚೇತರಿಕೆ, ಉದ್ಯೋಗಸ್ಥರಿಗೆ ಬಡ್ತಿ.
ಮೀನ | ಮಿತ್ರರೊಂದಿಗೆ ಕಲಹ. ಆರ್ಥಿಕ ವಹಿವಾಟು ಚೇತರಿಕೆ, ಕೆಲಸಗಳಲ್ಲಿ ವಿಳಂಬ. ಉದ್ಯೋಗ ಮತ್ತು ವ್ಯಾಪಾರ ಸಾಮಾನ್ಯ ಮಟ್ಟದಲ್ಲಿರಲಿವೆ.

ಇಂದಿನ ರಾಶಿಫಲ ಮತ್ತು ಪಂಚಾಂಗ ಫೆಬ್ರವರಿ 6, 2026 | ಮಲೆನಾಡು ಟುಡೆ Today Horoscope and Panchanga February 6 2026 Daily Predictions
Daily horoscope and Panchanga, ಇಂದಿನ ರಾಶಿಫಲ, ಪಂಚಾಂಗ, ಫೆಬ್ರವರಿ 6 ಭವಿಷ್ಯ, Today Horoscope, Daily Astrology,
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
