ಅಪಘಾತ ವಿಮೆ ನಿರಾಕರಿಸಿದ ಕಂಪನಿಗೆ 15 ಲಕ್ಷ ರೂ. ದಂಡ ಹಾಗೂ ಬಡ್ಡಿ ಪಾವತಿಸಲು ಆದೇಶ

This Article Written by / Prathapa thirthahalli / ಫೆಬ್ರವರಿ 4, 2026

Thirthahalli Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವಾಹನ ಮಾಲೀಕನ ವಿಮಾ ಮೊತ್ತವನ್ನು ನೀಡದೆ ಸತಾಯಿಸುತ್ತಿದ್ದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಬಿಸಿ ಮುಟ್ಟಿಸಿದೆ. ವಿಮಾ ಮೊತ್ತ 15 ಲಕ್ಷ ರೂಪಾಯಿಗಳನ್ನು ಶೇ. 7ರ ಬಡ್ಡಿಯೊಂದಿಗೆ ನೀಡುವಂತೆ ಫ್ಯೂಚರ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಅವರ ಪೀಠವು ಕಟ್ಟುನಿಟ್ಟಿನ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ

ಶಿಕಾರಿಪುರ ತಾಲ್ಲೂಕಿನ ಅಮ್ಟೆಕೊಪ್ಪ ನಿವಾಸಿ ರತ್ನಮ್ಮ ಎಂಬುವವರ ಮಗ ಮಂಜುನಾಥ್ ಅವರು ಲೈಲ್ಯಾಂಡ್ ವಾಹನದ ಮಾಲೀಕರಾಗಿದ್ದರು. ಅವರು ಫ್ಯೂಚರ್ ಜನರಲ್ ಇನ್ಶೂರೆನ್ಸ್ ಕಂಪನಿಯಿಂದ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆದಿದ್ದರು. 2023ರ ಅಕ್ಟೋಬರ್ 28ರಂದು ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಜುನಾಥ್ ಮೃತಪಟ್ಟಿದ್ದರು. ಮಗನ ಸಾವಿನ ನಂತರ ತಾಯಿ ರತ್ನಮ್ಮ ಅವರು ವಿಮಾ ಮೊತ್ತಕ್ಕಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ, ಕಂಪನಿಯು ಹಣ ನೀಡದೆ ಸೇವಾ ನ್ಯೂನ್ಯತೆ ಎಸಗಿತ್ತು.

ದೂರುದಾರರ ಪರವಾದ ವಾದ ಹಾಗೂ ದಾಖಲೆಗಳನ್ನು ಆಲಿಸಿದ ಆಯೋಗವು, ವಿಮಾ ಕಂಪನಿಯು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ಸೇವಾ ನ್ಯೂನ್ಯತೆಯಾಗಿದೆ ಎಂದು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ, ದೂರುದಾರರಿಗೆ 15 ಲಕ್ಷ ರೂ. ವಿಮಾ ಮೊತ್ತವನ್ನು ಫೆಬ್ರವರಿ 24, 2025 ರಿಂದ ಅನ್ವಯವಾಗುವಂತೆ ಶೇ. 7ರ ಬಡ್ಡಿಯೊಂದಿಗೆ 45 ದಿನಗಳೊಳಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದಲ್ಲಿ ಶೇ. 9ರ ಬಡ್ಡಿ ಪಾವತಿಸಬೇಕೆಂದು ಆದೇಶಿಸಿದೆ. ಜೊತೆಗೆ ದೂರುದಾರರ ಮಾನಸಿಕ ಹಿಂಸೆ ಮತ್ತು ಕಾನೂನು ವೆಚ್ಚಕ್ಕಾಗಿ ಹೆಚ್ಚುವರಿಯಾಗಿ 35,000 ರೂ.ಗಳನ್ನು ನೀಡುವಂತೆ ಪೀಠವು ಆದೇಶಿಸಿದೆ.

Court Orders 15L Insurance Payout

Court Orders Walk-in Interview Shivamogga Court KFD Fatality Shivamogga Round up
Court Orders
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ