ಮೇಗರವಳ್ಳಿ ಭೀಕರ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯ, ಹೇಗಿದೆ ನೋಡಿ 

ತೀರ್ಥಹಳ್ಳಿ: ತಾಲೂಕಿನ ಮೇಗರವಳ್ಳಿ ಸಮೀಪ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಅತಿ ವೇಗವಾಗಿ ಬಂದ ಬಿಎಂಡಬ್ಲ್ಯೂ (BMW) ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಅರ್ಚಕರ ಪತ್ನಿ ಮಲ್ಲಿಕಾ ಜೋಗಿ (42) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಲಭ್ಯವಾಗಿರುವ ಸಿಸಿಟಿವಿ ದೃಶ್ಯದಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಈ ವೇಳೆ ಹಿಂದಿನಿಂದ ವೇಗದಲ್ಲಿ ಬಂದ ಬಿಎಂಡಬ್ಲ್ಯೂ ಕಾರು ನಿಂತಿದ್ದ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ನಂತರ ಪಕ್ಕದ ಮರಕ್ಕೆ ಗುದ್ದಿದೆ.

ಮೃತ ಮಲ್ಲಿಕಾ ಜೋಗಿ ಮೇಗರವಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಅಶೋಕ್ ಜೋಗಿ ಅವರ ಪತ್ನಿಯಾಗಿದ್ದಾರೆ. ಅಪಘಾತದಲ್ಲಿ ಅಶೋಕ್ ಜೋಗಿ ಕೂಡ ತೀವ್ರವಾಗಿ ಗಾಯಗೊಂಡಿದ್ದು,ಮಣಿಪಾಲ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Megaravalli Incidence Shocking CCTV Footage of BMW Crash

Megaravalli Incidence Shocking CCTV Footage of BMW Crash
Megaravalli Incidence Shocking CCTV Footage of BMW Crash
shivamogga car decor sun control house
shivamogga car decor sun control house